ಸ್ವಾತಂತ್ರ್ಯ ಹೋರಾಟದಲ್ಲಿ ಮಹರ್ಷಿ ಅರವಿಂದರ ಕೊಡುಗೆ
1. ಮಹರ್ಷಿ ಅರಬಿಂದೋ (ಅರವಿಂದ) ಭಾರತದ ರಾಜಕೀಯ ಸ್ವಾತಂತ್ರ್ಯಕ್ಕಾಗಿ ಸ್ಥಾಪಿಸಲಾದ ಇಂಗ್ಲೆಂಡ್‌ನ ಭಾರತೀಯ ವಿದ್ಯಾರ್ಥಿ ಸಂಘಟನೆಯಾದ ಇಂಡಿಯನ್ ಮಜ್ಲಿಸ್‌ನಲ್ಲಿನ ಥಿಂಕ್ ಟ್ಯಾಂಕ್‌ನ (ವಿಚಾರವಂತರ ಗುಂಪು) ಸದಸ್ಯರಾಗಿದ್ದರು.
2. ಅವರು ಕಮಲ್ ಮತ್ತು ಕಟ್ಯಾರ್ ರಹಸ್ಯ ಕ್ರಾಂತಿಕಾರಿ ಸಂಘಟನೆಗಳ ಸದಸ್ಯರಾಗಿದ್ದರು.
3. ಅವರ ಕ್ರಾಂತಿಕಾರಿ ಚಟುವಟಿಕೆಗಳ ಸಮಯದಲ್ಲಿ ಅವರು ದೇಶದ ಸೇವೆ ಮಾಡಲು ಇಚ್ಛಿಸುವವರಿಗಾಗಿ ಒಂದು ಸಂಘಟನೆಯನ್ನು ಸ್ಥಾಪಿಸಿದರು.
4. ಸಶಸ್ತ್ರ ಕ್ರಾಂತಿಯ ಗುರಿಯನ್ನು ಸಾಧಿಸಲು ಅವನು ಉನ್ನತ ಮಿಲಿಟರಿ ತರಬೇತಿಗಾಗಿ ಸ್ನೇಹಿತನನ್ನು ಕಳುಹಿಸಿದರು.
5. ಅವರು ಪ್ರಾಧ್ಯಾಪಕರಾಗಿದ್ದಾಗ ತಮ್ಮ ಶಿಕ್ಷಣಿಕ ಸಂಸ್ಥಾನದ ಮರೆಯಲ್ಲಿ ಮದ್ದುಗುಂಡು ಕಾರ್ಖಾನೆಯನ್ನು ಪ್ರಾರಂಭಿಸಿದರು.
6. ಉದಯಪುರದ ಸಿಖ್ಖರು ಪ್ರಾರಂಭಿಸಿದ ರಹಸ್ಯ ಸಂಘಟನೆಯ ಮಹಾರಾಷ್ಟ್ರ ಶಾಖೆಯ ಭಾಗವಾಗಿದ್ದರು.
7. ತಮ್ಮ ಕ್ರಾಂತಿಕಾರಿ ಚಟುವಟಿಕೆಗಳನ್ನು ಮುಕ್ತವಾಗಿ ಮುಂದುವರಿಸಲು ಅವರು ಪ್ರಾಧ್ಯಾಪಕ ಸ್ಥಾನಕ್ಕೆ ರಾಜೀನಾಮೆ ನೀಡಿದರು.
8. ಅರವಿಂದರು ಅವರು ಭವಾನಿ ಮಂದಿರ ಎಂಬ ಸಂಘಟನೆಯ ನಿಯಮಗಳ ಮತ್ತು ಚಟುವಟಿಕೆಗಳ ಸಂವಿಧಾನವನ್ನು ರಚಿಸಿದರು. ಇದನ್ನು ರಾಷ್ಟ್ರ ಸೇವೆ ಸಲ್ಲಿಸಲು ಇಚ್ಛಿಸುವ ಯುವಕರಿಗಾಗಿ ಸಮರ್ಥ ರಾಮದಾಸ ಸ್ವಾಮಿ ಮತ್ತು ಸ್ವಾಂತ್ರ್ಯವೀರ್ ಸಾವರ್ಕರ ಅವರು ರಚಿಸಿದ ಯುವ ಸಂಘಟನೆಗಳ ಮೇಲಾಧಾರಿಸಿದರು.
9. ಕ್ರಾಂತಿಕಾರಿ ಮತ್ತು ರಾಷ್ಟ್ರವನ್ನು ಉನ್ನತಿಗೇರಿಸುವ ಚಟುವಟಿಕೆಗಳಿಗಾಗಿ ಕೋಲ್ಕತ್ತಾದ ಮಾಣಿಕ್ತೋಲಬಾಗ್‌ನಲ್ಲಿ ಯುವಕರ ಕೇಂದ್ರವನ್ನು ಸ್ಥಾಪಿಸಿದರು.
10. ಭಾರತದಾದ್ಯಂತ ಇಂತಹ ಕೇಂದ್ರಗಳನ್ನು ರಚಿಸುವುದು ಅವರ ಯೋಜನೆಯಾಗಿತ್ತು ಆದರೆ ಕ್ರಾಂತಿಕಾರಿ ಖುದಿರಾಮ್ ಬೋಸ್ ಸ್ಫೋಟಿಸಿದ ಬಾಂಬ್‌ನಿಂದಾಗಿ ಅರಬಿಂದೋ ಸೇರಿದಂತೆ ಎಲ್ಲ ಕ್ರಾಂತಿಕಾರಿಗಳನ್ನು ಬಂಧಿಸಲಾಯಿತು. ಅವರು ಇತರರೊಂದಿಗೆ ಅಲಿಪುರ್ ಜೈಲಿನಲ್ಲಿದ್ದರು.
11. ಅಲಿಪುರ್ ಜೈಲಿನಲ್ಲಿ ಭಗವತ್ ಗೀತೆ ಮತ್ತು ಉಪನಿಷತ್ತುಗಳ ಬಗ್ಗೆ ಆಳವಾದ ಅಧ್ಯಯನ ಮತ್ತು ಆಧ್ಯಾತ್ಮಿಕ ಅಭ್ಯಾಸ ಮಾಡಿದ ನಂತರ ವಾಸುದೇವನ ದರ್ಶನವಾಗುವುದು : ಅಲಿಪುರ್ ಜೈಲಿನಲ್ಲಿ ಅವರ ಕೊಠಡಿಯು 6 ಅಡಿ ಉದ್ದ ಮತ್ತು 4 ಅಡಿ ಅಗಲವಿತ್ತು. ಮಳೆ, ಕಸ, ಕೊಳಚೆ ತಂತಿಯ ಬಾಗಿಲಿನ ಮೂಲಕ ಕೊಠಡಿಯಲ್ಲಿ ನುಗ್ಗುತ್ತದ್ದವು. ಅವರ ಆಹಾರವೆಂದರೆ ಒಂದು ಲೋಟ ನೀರು, ಹುಳುಗಳು ಮತ್ತು ಧೂಳಿನಿಂದ ಬೇಯಿಸಿದ ಅಕ್ಕಿ, ಹುಲ್ಲು ಮತ್ತು ಎಲೆಗಳೊಂದಿಗೆ ಬೆರೆಸಿದ ತರಕಾರಿ, ಉಪ್ಪು-ಖಾರವಿಲ್ಲದ ಸಾರು. ಬೇಸಿಗೆಯಲ್ಲಿ ಕೊಠಡಿಯು ಕುಲುಮೆಯಂತೆ ಆಗುತ್ತದೆ. ಈ ಕೊಠಡಿಯಲ್ಲಿ ಅವರು ಭಗವತ್ ಗೀತೆ ಮತ್ತು ಉಪನಿಷತ್ತುಗಳ ಬಗ್ಗೆ ಆಳವಾದ ಅಧ್ಯಯನವನ್ನು ಮಾಡಿದರು ಮತ್ತು ಆಧ್ಯಾತ್ಮಿಕ ಅಭ್ಯಾಸದ ಮೂಲಕ ಅವರ ಮೇಲೆ ದೇವರ ಕೃಪೆಯಾಗಿ ಅವರಿಗೆ ವಾಸುದೇವನ ದಿವ್ಯ ದರ್ಶನವಾಯಿತು.
12. ದೇವರ ಆಜ್ಞೆಯಂತೆ ರಾಷ್ಟ್ರಕ್ಕಾಗಿ ಒಂದು ಕಾರ್ಯ ನಿರ್ವಹಿಸುವುದಾಗಿ ಅರಬಿಂದೋ ಅವರ ಘೋಷಣೆ: ಕೋಲ್ಕತ್ತಾದ ಉತ್ತರಪಾಡದಲ್ಲಿ 10000 ಜನರ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡುವಾಗ ಅಲಿಪುರ್ ಜೈಲಿನಿಂದ ಬಿಡುಗಡೆಯಾದ ನಂತರ ಅವರು ದೇವರ ಆಜ್ಞೆಯಂತೆ ರಾಷ್ಟ್ರಕ್ಕಾಗಿ ಕೆಲಸ ಮಾಡುವುದಾಗಿ ಸ್ಪಷ್ಟಪಡಿಸಿದರು. ಯಾವುದೇ ಸಿದ್ಧತೆ ಅಥವಾ ಹೆಚ್ಚಿನ ವ್ಯವಸ್ಥೆಗಳಿಲ್ಲದೆ ಆ ದೈವಿ ಸಂದೇಶದಿಂದಾಗಿ ಅವರು ಮೊದಲು ಚಂದ್ರನಗರ ಮತ್ತು ನಂತರ ಪಾಂಡಿಚೆರಿಗೆ ಭೇಟಿ ನೀಡಿದರು. ಐದು ಸಹಚರರೊಂದಿಗೆ ಅವರು ಶ್ಮಶಾನಕ್ಕೆ ಹತ್ತಿರವಿರುವ ಕೇವಲ ಒಂದು ದೀಪವಿದ್ದ ಸಣ್ಣ ಕೋಣೆಯಲ್ಲಿ ವಾಸಿಸುತ್ತಿದ್ದರು. ಅವರಲ್ಲಿ ಕೇವಲ 4 ಆಣೆ (25 ಪೈಸಾ) ದುಡ್ಡಿತ್ತು. ಬಹುಶಃ ಯಾವುದೇ ಯೋಗಿಗಳು (ತಪಸ್ವಿಗಳು) ಈ ಹಿಂದೆ ಅಂತಹ ಅಡೆತಡೆಗಳನ್ನು ಅನುಭವಿಸಿರಲಾರರು ಅಥವಾ ಭವಿಷ್ಯದಲ್ಲಿಯೂ ಅಂತಹ ಪರಿಸ್ಥಿತಿ ಬರಲಾರದು, ಅವರು ದೇಶದ ಸ್ವಾತಂತ್ರ್ಯ ಮತ್ತು ಪ್ರಗತಿಗೆ ಅಂತಹ ಯೋಗಾಸಾಧನೆಯನ್ನು ಮಾಡಿದ್ದಾರೆ. ಆಗಸ್ಟ್ 15, 1947 ರಂದು ಭಾರತ ಸ್ವತಂತ್ರವಾಯಿತು.
ಅರಬಿಂದೋ ಅವರ ಜೀವನವನ್ನು ಕೂಲಂಕುಷವಾಗಿ ಪರಿಗಣಿಸದೆ, ಬುದ್ಧಿಜೀವಿಗಳು ‘ಅವರು ದೇಶದ ಸ್ವಾತಂತ್ರ್ಯದ ಕಾರ್ಯ ತ್ಯಜಿಸಿ ಸಂನ್ಯಾಸಿಯಾದರು’ ಎಂದು ತಪ್ಪಾಗಿ ಹೇಳುತ್ತಾರೆ. ವಾಸ್ತವಿಕವಾಗಿ ಕೆಲವು ವಿದ್ಯಾವಂತ ಜನರಿಗೂ ಅರಬಿಂದೋ ಯಾರೆಂದು ತಿಳಿದಿಲ್ಲ ಮತ್ತು ಇತರರು ಅವರು ಹಿಮಾಲಯದ ಯೋಗಿ ಎಂದು ಭಾವಿಸುತ್ತಾರೆ.
ಮಹರ್ಷಿ ಅರಬಿಂದೋ ಬಗ್ಗೆ ತಿಲಕ್ ಹೇಳಿದ್ದೇನು!
ಅರಬಿಂದೋ ಸಂಪೂರ್ಣ ತ್ಯಾಗಿ, ತಪಸ್ವಿ ಮತ್ತು ನೂರಾರು ಯುವಕರಲ್ಲಿ ತ್ಯಾಗದ ಮನೋಭಾವವನ್ನು ಹುಟ್ಟುಹಾಕಿದ್ದಾರೆ. ಜ್ಞಾನವನ್ನು ಗಳಿಸುವಲ್ಲಿ, ಗುರಿ ಮತ್ತು ತ್ಯಾಗವನ್ನು ಸಾಧಿಸುವಲ್ಲಿ ಅವರಿಗೆ ಸರಿಸಾಠಿಯಿಲ್ಲ ಎಂದು ಲೋಕಮಾನ್ಯ ತಿಲಕರು ಉದ್ಗಾರ ತೆಗೆದಿದ್ದರು.