ನಮಸ್ಕಾರ ಮಿತ್ರರೇ, ನಾವು ಯಾವಾಗಲೂ ‘ನನ್ನ ಮನಸ್ಸಿನಲ್ಲಿ ಇಂತಹ ವಿಚಾರ ಬಂತು’, ಅಥವಾ ‘ ನನ್ನ ಮನಸ್ಸಿಗೆ ಹೀಗ್ ಅನ್ನಿಸುತ್ತದೆ’ ಎಂದು ಹೇಳುತ್ತೇವೆ. ಅನೇಕ ಮಿತ್ರರ ‘ಮನಸ್ಸಿನಲ್ಲಿ’ ದೇಶದ ಬಗ್ಗೆ ಅಪಾರ ಗೌರವ ಶ್ರದ್ಧೆ ಇದೆ. ಆದರೆ ಮನಸ್ಸು ಎಂದರೇನು? ಅದರ ರಚನೆ ಮತ್ತು ಕಾರ್ಯ ಏನು? ಇಂತಹ ಅನೇಕ ಪ್ರಸ್ನೇಗಳು ನಮ್ಮಲ್ಲಿ ಉದ್ಭವಿಸುತ್ತವೆ. ಈ ಲೇಖನದಿಂದ ನಿಮ್ಮ ಪ್ರಶ್ನೆಗಳಿಗೆ ಉತ್ತರಗಳು ದೊರೆಯಲು ಸಹಾಯವಾಗುವುದು.
ಮನಸ್ಸಿನ ರಚನೆ ಮತ್ತು ಕಾರ್ಯ
ಮನಸ್ಸಿಗೆಎರೆಡು ಭಾಗ ಇರುತ್ತವೆ . ಒಂದು ಬಾಹ್ಯಮನಸ್ಸುಮತ್ತು ಇನ್ನೊಂದು ಅಂತರ್ಮನ. ಅಂತರ್ಮನ ಇದು ಬಾಹ್ಯಮನಕ್ಕಿಂತ ೯ ಪಟ್ಟು ಹೆಚ್ಚು ದೊಡ್ಡದಾಗಿರುತ್ತದೆ. ಮನಸ್ಸಿನಎರಡೂಭಾಗಗಳಕಾರ್ಯ ಬೇರೆ ಬೇರೆ ಇರುತ್ತದೆ. ನಾವು ಯಾವವಿಚಾರ ಅರಿತುಕೊಂಡು ಮಾಡುತ್ತೇವೆಯೋ. ಆ ವಿಚಾರ ಮಾಡುವ ಕೆಲಸ ಬಾಹ್ಯಮನಸ್ಸಿದ್ದಾನಗಿರುತ್ತದೆ. ಉದಾ: ಹಾಸ್ಯ ಮಾಡಿದ ನಂತರ ನಗುವುದು, ಐಸ್ ಕ್ರೀಮ ನೋಡಿದ ನಂತರಬಾಯಲ್ಲಿ ನೀರು ಬರುವುದು, ಹಾಗಲಕಾಯಿ ಪಲ್ಯ ನೋಡಿದನಂತರಅದು ಹಿಡಿಸದಿದ್ದರೆ “ತಿನ್ನಬಾರದು”,ಎಂಬವಿಚಾರವು ಮನಸ್ಸಿನಲ್ಲಿ ಬರುವುದು, ಈ ವಿಚಾರವುಯಾವ ಮನಸ್ಸಿನಲ್ಲಿ ಬರುವುದೋ, ಅದನ್ನು ಬಾಹ್ಯಮನಎನ್ನುತ್ತಾರೆ.
ಅಂತರ್ಮನದ ಕಾರ್ಯ
ಮಿತ್ರರೇ, ಮೇಲೆ ಹೇಳಿರುವಂತೆ ಅಂತರ್ಮನದ ಇದು ಬಾಹ್ಯಮನದ ೯ ಪಟ್ಟು ದೊಡ್ಡದಾಗಿರುತ್ತದೆ. ಇದರಿಂದ ನಾವು ಊಹಿಸಬಹುದು ಏನೆಂದರೆ ಅಂತರ್ಮನದ ಕಾರ್ಯ ಎಷ್ಟು ದೊಡ್ಡದಾಗಿರುವುದೆಂದು ! ನಮ್ಮ ಆಗು ಹೋಗುಗಳಲ್ಲಿ ಅಂತರ್ಮನದ ಸಹಭಾಗವು ದೊಡ್ಡದಾಗಿರುತ್ತದೆ ತಂದೆ-ತಾಯಿ, ನೆಂಟರು, ಅಕ್ಕಪಕ್ಕದವರು, ಶಿಕ್ಷಕರು, ಸಮಾಜ ಈ ಎಲ್ಲರಿಂದ ಅರಿತು ಅಥವಾ ಅರಿವಾಗದೇ (ತಿಳಿದು ಅಥವಾ ತಿಳಿಯದೇ) ಮಕ್ಕಳ ಮನಸ್ಸಿನ ಮೇಲೆ ಒಳ್ಳೆಯ /ಕೆಟ್ಟ ಸಂಸ್ಕಾರಗಳುಆಗುತ್ತವೆ, ಉದಾ. ತಂದೆ-ತಾಯಂದಿರುಮಕ್ಕಳಿಗೆ “ಯಾವಾಗಲೂಸತ್ಯಮಾತಾಡಬೇಕು”,ಎಂದು ಕಲಿಸುತ್ತಾರೆ;ಆದರೆ ತಂದೆಗೆ ದೂರವಾಣಿಕರೆ ಬಂದರೆಅವರು ಮಗನಿಗೆ ಹೇಳುತ್ತಾರೆ, “ನಾನು ಮನೆಯಲ್ಲಿಲ್ಲಎಂದು ಹೇಳು”. ಇದರಿಂದಆ ಮಗುವಿಗೆ ಅರಿವಿಲ್ಲದೇ “ಪ್ರಸಂಗಕ್ಕೆಅನುಗುಣವಾಗಿಸುಳ್ಳು ಮಾತನಾಡಿದರೆ ನಡೆಯುತ್ತದೆ”, ಎಂಬ ಸಂಸ್ಕಾರವಾಗುತ್ತದೆ. ಈ ಸಮಯದಲ್ಲಿ ನಾವುಮಗನಿಗೆ ಸುಳ್ಳು ಮಾತನಾಡಲುಕಲಿಸುತ್ತಿದ್ದೇವೆ,ಎಂಬುದರ ಅರಿವು ತಂದೆಗೆ ಇರುವುದಿಲ್ಲ.
ಸಂಸ್ಕಾರದ ಕೇಂದ್ರ
ಹೀಗೆ ಅರಿವಿಲ್ಲದೇ ಆಗಿರುವ ಸಂಸ್ಕಾರಗಳ ಕೇಂದ್ರಗಳು ಅಂತರ್ಮನದಲ್ಲಿ ನಿರ್ಮಾಣಗೊಳ್ಳುತ್ತವೆ. ಯಾವ ಸಂಸ್ಕಾರದ ಕೇಂದ್ರವು ದೊಡ್ಡದಾಗಿರುವುದೋ, ಆ ಸಂಸ್ಕಾರದ ಪ್ರಭಾವ ಮಕ್ಕಳ ಮೇಲೆ ಹೆಚ್ಚು ಪ್ರಮಾಣದಲ್ಲಿ ಕಂಡು ಬರುತ್ತದೆ. ಹೀಗೆ ತಿಳಿದು – ತಿಳಿಯದೇ ಕೆಟ್ಟ -ಒಳ್ಳೆಯ ಸಂಸ್ಕಾರಗಳು ಅಂತರ್ಮನದ ಮೇಲೆ ಆಗಿರುತ್ತವೆ. ಅದರಿಂದಲೇಮನಸ್ಸಿನಲ್ಲಿವಿಚಾರಗಳುಬಂದು ಅವು ನಮ್ಮ ನಡೆವಳಿಕೆ – ಮಾತುಗಳುಇವುಗಳಿಂದ ವ್ಯಕ್ತವಾಗುತ್ತವೆ. ಅರಿತುಕೊಂಡು ಮಾಡಿದ ಸಂಸ್ಕಾರಗಳ ಗುರುತು ಮೊದಲಿಗೆ ಬಾಹ್ಯಮನದಮೇಲೆ ಮತ್ತು ಕಾಲಾಂತರದಲ್ಲಿಅಂತರ್ಮನದ ಮೇಲೆ ಆಗುತ್ತದೆ; ಆದರೆ ಅರಿವಾಗದೇ ಅಂದರೆ ಗೊತ್ತಿಲ್ಲದೇ ಅದ ಸಂಸ್ಕಾರಗಳ ಗುರುತು ನೇರವಾಗಿ ಅಂತರ್ಮನದಮೇಲೆ ಆಗುತ್ತದೆ.
ಬಾಲಮಿತ್ರರೇ,ಸದ್ಗುಣಗಳನ್ನು ಹೆಚ್ಚಿಸಿನ ಮ್ಮ ಅಂತರ್ಮನಸ್ಸನ್ನು ನಿರ್ಮಲಗೊಳಿಸೋಣ. ಆತ್ಮಪರೀಕ್ಷಣೆ ಮಾಡಿ ಅಂತರ್ಮನಸ್ಸಿನ ಗುಣ ಮತ್ತು ದೋಷಗಳ ಪಟ್ಟಿ ಮಾಡೋಣ !