ಅರಣ್ಯ ನಾಶ
ಪರಿಣಾಮ ಮತ್ತು ಪರಿಹಾರ

ರವಿವಾರದ 'ನ್ಯೂಯಾರ್ಕ ಟೈಮ್ಸ್' ಪತ್ರಿಕೆಯಲ್ಲಿ ೧೫೦ ಪುಟಗಳಿರುತ್ತವೆ. ಆ ಒಂದು ಪತ್ರಿಕೆಯನ್ನು ಹೊರತರಲು ನಾಲ್ಕು ಮರಗಳು ! ವಿಕಾಸದ ಹೆಸರಿನಲ್ಲಿ ಜಗತ್ತಿನಾದ್ಯಂತ ಅನೇಕ ಅರಣ್ಯ ಲುಪ್ತವಾಗುತ್ತಿವೆ. ನಿರಂತರವಾಗಿ ನಡೆಯುತ್ತಿರುವ ಅರಣ್ಯ ನಾಶದ ಗಂಭೀರ ಪರಿಣಾಮಗಳು ಕಾಣಿಸುತ್ತಿವೆ.

ಅರಣ್ಯ ನಾಶದ ಪರಿಣಾಮಗಳು

೧. ಇಂದು ಅವ್ಯಾಹತ ಅರಣ್ಯ ನಾಶದಿಂದ ಗುಡ್ಡ ಬೆಟ್ಟಗಳು ಕೂಡ ಹಾಳು ಬಿದ್ದಂತೆ ಕಾಣಿಸುತ್ತವೆ. ಔಷಧಿಯುಕ್ತ ವನಸ್ಪತಿಗಳೂ ದುರ್ಲಭವಾಗಿದೆ. ಆದ್ದರಿಂದ ಮಳೆಯೂ ಬೀಳುತ್ತಿಲ್ಲ. – ಪ.ಪೂ. ಪರಶರಾಮ ಮಾಧವ ಪಾಂಡೆ ಮಹಾರಾಜರು

೨. ಯಾವ ಪ್ರಮಾಣದಲ್ಲಿ ಮರಗಳನ್ನು ಕಡಿಯಲಾಗುತ್ತದೆಯೋ, ಅದೇ ಪ್ರಮಾಣದಲ್ಲಿ ಗಿಡ – ಮರಗಳನ್ನು ನೆಟ್ಟು ಬೆಳೆಸುತ್ತಿಲ್ಲ. ಆದುದರಿಂದ ನಿಸರ್ಗದ ಈ ಅಮೂಲ್ಯವಾದ ಸಂಪತ್ತು ಅತಿವೇಗದಿಂದ ಕಡಿಮೆಯಾಗುತ್ತಿದ್ದು, ಜೈವಿಕ ಹಾಗೂ ವಾತಾವರಣ ಸಮತೋಲನ ಹಾಳು ಮಾಡುತ್ತಿದೆ. ಕಲ್ಲಿನ ಗಣಿಗಳ ಮೂಲಕ ಬೆಟ್ಟಗಳ ಸಾಲುಗಳೂ ಕಾಣದಂತಾಗಿ ಎಲ್ಲೆಡೆ ನಿರ್ಜನವಾಗುತ್ತಿವೆ ಹಾಗೂ ಹತ್ತಿರದ ಭಾಗದಲ್ಲಿ ಮಳೆಯೂ ಕಡಿಮೆಯಾಗುತ್ತಿದೆ.

೩. ಲೆಕ್ಕವಿಲ್ಲದಷ್ಟು ಅರಣ್ಯ ಭಾಗವನ್ನು ನಾಶ ಮಾಡಿರುವುದರಿಂದ ಪ್ರಾಣಿಗಳೂ ನಿರಾಶ್ರಿತರಾಗಿವೆ. ಆದುದರಿಂದ ಅವು ಮಾನವರ ನೆಲೆಯಲ್ಲಿ ಆಶ್ರಯ ಹುಡುಕುತ್ತಿವೆ. ಆದುದರಿಂದಲೇ ಕರ್ನಾಟಕದ ಅನೇಕ ಭಾಗಗಳಲ್ಲಿ ಮೇಲಿಂದಮೇಲೆ ಹುಲಿ-ಚಿರತೆ, ಆನೆಗಳು ಗ್ರಾಮ – ನಗರಗಳಲ್ಲಿ ಓಡಾಡಿ ಭಯ ಸೃಷ್ಟಿಸಿದ ಘಟನೆಗಳು ನಡೆಯುತ್ತಿವೆ.

ಅರಣ್ಯದ ಉಪಯುಕ್ತತೆ

೧. ಮರಗಳು ಗಾಳಿಯಲ್ಲಿರುವ ಇಂಗಾಲ ಡೈಆಕ್ಸೈಡ್ ಹೀರಿ, ಸಕಲ ಜೀವಿಗಳಿಗೆ ಅತ್ಯಾವಶ್ಯಕ ಆಮ್ಲಜನಕವನ್ನು ಬಿಡುತ್ತವೆ.

೨. ಅನೇಕ ಗಿಡಮರಗಳು ಓಝೋನ (ಭೂಮಿಯ ಸುತ್ತಲಿರುವ ರಕ್ಷಾ ಕವಚ) ಪ್ರಮಾಣವನ್ನು ಬೆಳೆಸಲು ಸಹಾಯ ಮಾಡುತ್ತವೆ.

೩. ದುರ್ಲಭ ಪ್ರಾಣಿ, ವನೌಷಧಿಗಳ ಜೋಪಾನವು ಅರಣ್ಯಗಳಿಂದಲೇ ಆಗುತ್ತದೆ.

೪. ದಟ್ಟವಾದ ಅರಣ್ಯಗಳ ಗಾಳಿಯ ತೇವಾಂಶದ ಅಧಿಕವಾಗಿರುವುದರಿಂದ ವಾತಾವರಣ ತಂಪಾಗಿರುತ್ತದೆ.

೫. ಮಳೆಯ ತೀವ್ರತೆ ಅರಣ್ಯ ಭಾಗದಲ್ಲಿ ಹೆಚ್ಚು ಇರುವುದರಿಂದ, ಮರಗಳು ಇದ್ದಲ್ಲಿ ನೀರು ಹರಿದು ಹೋಗುವ ಪ್ರಮಾಣವು ಕಡಿಮೆಯಾಗುತ್ತದೆ ಹಾಗೂ ಭೂಗರ್ಭದ ನೀರಿನ ಶೇಖರಣೆಯಲ್ಲಿ ಹೆಚ್ಚಳವಾಗುತ್ತದೆ.

ನೆನಪಿಟ್ಟುಕೊಳ್ಳಿ, ಹಸಿರೇ ಉಸಿರು!

ಮರದ ಕಾರ್ಯ

೧. ಆಮ್ಲಜನಕ ಉತ್ಪಾದಿಸುವುದು

೨. ವಾಯು ಮಾಲಿನ್ಯವನ್ನು ತಡೆಯುವುದು

೩. ಭೂಮಿಯ ಫಲವತ್ತತೆ ಕಾಪಾಡುವುದು ಹಾಗೂ ಭೂಮಿಯ ಕಾವು ತಡೆಯುವುದು

೪. ಭೂಗರ್ಭದ ನೀರಿನ ಮಟ್ಟವನ್ನು ಹೆಚ್ಚಿಸುವುದು ಹಾಗೂ ಗಾಳಿಯಲ್ಲಿ ತೇವಾಂಶವನ್ನು ಕಾಯ್ದಿರಿಸುವುದು

೫. ಪಶು ಪಕ್ಷಿಗಳಿಗೆ ಆಶ್ರಯ ನೀಡುವುದು

೬. ಪ್ರೋಟೀನಗಳನ್ನು ರೂಪಾಂತರಗೊಳಿಸುವುದು.

ಇಂದಿನ ಪರಿಸ್ಥಿತಿ

೧. ಒಂದು ಮರವನ್ನು ಕಡಿಯುವುದರಿಂದ ೧೭ ಲಕ್ಷ ರೂಪಾಯಿಗಳ ಹಾನಿಯುಂಟಾಗುತ್ತದೆ. ಮಹಾನಗರಪಾಲಿಕೆ ಮಾತ್ರ ಮರ ಕಡಿಯುವವರಿಗೆ ಕೇವಲ ೧೦೦ ರಿಂದ ೧೦೦೦ ರೂಪಾಯಿಗಳ ದಂಡ ವಿಧಿಸುತ್ತದೆ.

೨. ಜನರು ನೆಟ್ಟಗಿಡಗಳಲ್ಲಿಶೇಕಡಾ ೭೦ ರಿಂದ ೮೦ ಗಿಡಗಳು ಸಾಯುತ್ತವೆ. (ದಾದುಮಿಯಾ, ಧರ್ಮಭಾಸ್ಕರ)

ಉಪಾಯ

೧. ಅರಣ್ಯ ನಾಶ ನಿಲ್ಲಿಸಲೇಬೇಕು; ಆದರೆ ಅದರ ಜೊತೆಗೆ ಗಿಡಗಳನ್ನು ನೆಡಬೇಕು. ಅವುಗಳನ್ನು ಜೋಪಾನಮಾಡಿ, ಯೋಗ್ಯ ರೀತಿಯಲ್ಲಿ ಬೆಳೆಸಲು ಕಾಳಜಿವಹಿಸಬೇಕು. ವೃಕ್ಷಾರೋಪಣೆ ಮಾಡಿರಿ, ಹಾಗೂ ವೃಕ್ಷಗಳ ರಕ್ಷಣೆ ಮಾಡಿರಿ. ನೀವು ಗ್ರಾಮೀಣ ಪ್ರದೇಶದಲ್ಲಿ ಇರುತ್ತಿದ್ದರೆ, ಮನೆಯ ಪರಿಸರದಲ್ಲಿ ಬೇವಿನಗಿಡ, ಅರಳಿಮರ, ತುಳಸಿ ಮುಂತಾದ ಗಿಡಗಳನ್ನು ನೆಡಬೇಕು. ಗೋವುಗಳನ್ನು ಸಾಕಿ, ಹೀಗೆ ಮಾಡುವುದರಿಂದ ನಮ್ಮ ಮನೆಯು ಆರೋಗ್ಯಶಾಲೆ ಆಗುವುದು (ಗೀತಾ, ಸ್ವಾಧ್ಯಾಯ)

೨. ಯಾವುದೇ ಶುಭ ಸಂದೇಶದೊಂದಿಗೆ ಒಂದು ಗಿಡವನ್ನು ಉಡುಗೊರೆಯಾಗಿ ನೀಡುವ ಅಬ್ಯಾಸ ಮಾಡಿ.

೩. ಕ್ರಾಂತಿಕಾರರ ಸ್ಮರಣೆ, ಸ್ವಜನರ ಪ್ರೇಮ, ದೇಶಭಕ್ತರ ಅಭಿಮಾನ, ವಿದ್ವಾಂಸರ ಆದರ ವ್ಯಕ್ತಪಡಿಸಲು ಅವರ ಸ್ಮೃತಿಗಾಗಿ ಇಸ್ರೇಲ್.ನಲ್ಲಿ ಗಿಡಗಳನ್ನು ನೆಟ್ಟಿದರು ಹಾಗೂ ಜೋಪಾನಮಾಡಿದರು. ಇಸ್ರೇಲ್.ನಲ್ಲಿ ಇಂದು ೬೦೦ ಕ್ಕೂ ಹೆಚ್ಚು ದಟ್ಟವಾದ ಅರಣ್ಯಗಳಿವೆ. ೧೧ ಅಬ್ಜಕ್ಕಿಂತ ಹೆಚ್ಚು ಮರಗಳಿವೆ. ಹೀಗೆ ಸ್ಮೃತಿವೃಕ್ಷಗಳ ನೆರಳು ದೇಶದಾದ್ಯಂತ ಇದೆ.

(ಘನಗರ್ಜಿತ, ಸೆಪ್ಟೆಂಬರ ೨೦೦೮)