ವಲ್ಲಭಾಚಾರ್ಯ

ವಲ್ಲಭಾಚಾರ್ಯರು

ಭಕ್ತಿಕಾಲದ ಸಗುಣಧಾರೆಯ ಕೃಷ್ಣಭಕ್ತಿ ಶಾಖೆಯ ಆಧಾರಸ್ತಂಭ ಹಾಗೂ ಪುಷ್ಟಿಮಾರ್ಗದ ರಚನಕಾರರಾದ ಶ್ರೀವಲ್ಲಭಾಚಾರ್ಯ ಪ್ರಾದುರ್ಭಾವ ಸಂವತ್ಸರ ೧೫೩೫, ಚೈತ್ರ ಕೃಷ್ಣ ಏಕಾದಶಿಯಂದು ದಕ್ಷಿಣ ಭಾರತದ ಕಾಂಕರವಾಡ ಗ್ರಾಮದ ತೈಲಂಗ ಬ್ರಾಹ್ಮಣರ ಪತ್ನಿಯಾದ ಇಲಮ್ಮಾಗಾರು ಇವರಿಗೆ ಜನಿಸಿದರು. ಇವರನ್ನು ವೈಶ್ವನಾವತಾರ (ಅಗ್ನಿಯ ಅವತಾರ) ಎಂದು ಕರೆಯಲಾಗುತ್ತದೆ. ಇವರು ವೇದಶಾಸ್ತ್ರಗಳಲ್ಲಿ ಪಾರಂಗತರಿದ್ದರು.

ದೀಕ್ಷೆ

ಶ್ರೀರುದ್ರಸಂಪ್ರದಾಯದ ಶ್ರೀವಿಲ್ವಮಂಗಲಾಚಾರ್ಯಜಿಯವರು ಇವರಿಗೆ 'ಅಷ್ಟದಶಾಕ್ಷರಗೋಪಾಲ' ಮಂತ್ರದ ದೀಕ್ಷೆ ನೀಡಿದರು. ಅನಂತರ ಸ್ವಾಮಿ ನಾರಾಯಣೇಂದ್ರತೀರ್ಥರಿಂದ ತ್ರಿದಂಡ ಸನ್ಯಾಸದ ದೀಕ್ಷೆಯನ್ನು ಪಡೆದರು. ಅವರ ವಿವಾಹವು ಪಂಡಿತ ಶ್ರೀದೇವಭಟ್ಟರ ಮಗಳಾದಮಹಾಲಕ್ಷ್ಮಿಯೊಂದಿಗೆ ಜರುಗಿತು, ಕಾಲಾನುಸಾರ ಅವರಿಗೆ ಶ್ರೀಗೋಪಿನಾಥ ಹಾಗೂ ಶ್ರೀವಿಠ್ಠಲನಾಥ ಎಂಬ ಇಬ್ಬರು ಪುತ್ರರಾದರು. ಭಗವಂತನ ಪ್ರೇರಣೆಯಿಂದ ಅವರು ವೃಂದಾವನದ ಗೋಕುಲವನ್ನು ತಲುಪಿದರು, ಆನಂತರ ವೃಂದಾವನದ ಗೋವರ್ಧನ ಪರ್ವತದ ಮೇಲೆ ತಮ್ಮ ತಮ್ಮ ಶಿಷ್ಯರಾದ ಪೂರನಮಲ್ ಖತ್ರಿಯವರ ಸಹಾಯದಿಂದ ೧೫೭೬ನೇ ಸಂವತ್ಸರದಲ್ಲಿ ಶ್ರೀನಾಥಜಿಯ ಭವ್ಯ ಮಂದಿರವನ್ನು ನಿರ್ಮಿಸಿದರು. ಅಲ್ಲಿ ವಿಶಿಷ್ಟ ಸೇವಾ-ಪದ್ಧತಿಯೊಂದಿಗೆ ಲೀಲಾ-ಗಾನಗಳನ್ನೊಳಗೊಂಡ ಶ್ರೀ ರಾಧಾಕೃಷ್ಣನ ಅತ್ಯಂತ ಮಧುರ ಲೀಲೆಗಳಿಗೆ ಸಂಬಂಧಿಸಿದ ರಸಮಯ ಪದಗಳ ಸ್ವರ-ಲಹರಿಯನ್ನು ಆಲಿಸಿ ಭಕ್ತಜನರು ಮಂತ್ರಮುಗ್ಧರಾಗುತ್ತಿದ್ದರು.ಇದರ ಅತ್ಯುತ್ತಮ ಉದಾಹರಣೆ ಎಂದರೆ ಶ್ರೀಕೃಷ್ಣನ ರೂಪವನ್ನು ವರ್ಣಿಸುವ 'ಮಧುರಾಷ್ಟಕಮ್'

ಅಭಿಮತ

ಶ್ರೀವಲ್ಲಭಾಚಾರ್ಯರ ಮತಕ್ಕನುಸಾರ ಬ್ರಹ್ಮ, ಜಗತ್ತು ಹಾಗೂ ಜೀವ ಎಂಬ ಮೂರು ತತ್ತ್ವಗಳಿವೆ. ಅವರು ಬ್ರಹ್ಮನ ಮೂರು ಆಧಿದೈವಿಕ, ಆಧ್ಯಾತ್ಮಿಕ ಹಾಗೂ ಅಂತರ್ಯಾಮಿ ಸ್ವರೂಪಗಳನ್ನು ವರ್ಣಿಸಿದ್ದಾರೆ. ಅನಂತ ದಿವ್ಯ ಗುಣ ಸಂಪನ್ನನಾದ ಪುರುಷೋತ್ತಮ ಶ್ರೀಕೃಷ್ಣನನ್ನೇ ಪರಬ್ರಹ್ಮನೆಂದು ಸ್ವೀಕರಿಸಿ ಅವನ ಮಧುರ ರೂಪ ಹಾಗೂ ಲೀಲೆಗಳೇ ಜೀವದಲ್ಲಿ ಆನಂದದ ಅವಿರ್ಭಾವದ ಆಕರವೆಂದು ತಿಳಿದಿದ್ದಾರೆ. ಜಗತ್ತು ಬ್ರಹ್ಮನ ಲೀಲೆಯ ವಿಲಾಸ, ಬ್ರಹ್ಮನ ಆತ್ಮ-ಕೃತಿಯು ಸಂಪೂರ್ಣ ಸೃಷ್ಟಿ ಲೀಲೆಯ ನಿಮಿತ್ತವಾಗಿದೆ.

ಸಿದ್ಧಾಂತ

ಮೂರು ಪ್ರಕಾರದ ಜೀವಗಳಿವೆ – ಪುಷ್ಟಿ ಜೀವವು ಭಗವಂತನ ಅನುಗ್ರಹದ ಮೇಲೆ ಅವಲಂಬಿತವಾಗಿದ್ದು ನಿತ್ಯಲೀಲೆಯಲ್ಲಿ ಪ್ರವೇಶದ ಅಧಿಕಾರಿಯಾಗುತ್ತಾರೆ, ಮರ್ಯಾದಾ ಜೀವವು ವೇದೋಕ್ತ ವಿಧಿಗಳನ್ನು ಅನುಸರಿಸಿ ವಿಭಿನ್ನ ಲೋಕಗಳನ್ನು ಪಡೆಯುತ್ತದೆ ಹಾಗೂ ಪ್ರವಾಹ ಜೀವವು ಜಗತ್ತು-ಪ್ರಪಂಚದಲ್ಲಿಯೇ ಮಗ್ನವಾಗಿ ಸಂಸಾರಿಕ ಸುಖಗಳ ಪ್ರಾಪ್ತಿಗಾಗಿ ಸತತ ಚಡಪಡಿಸುತ್ತಿರುತ್ತದೆ.

ಭಗವಾನ ಶ್ರೀಕೃಷ್ಣನು ಭಕ್ತರ ನಿಮಿತ್ತ ವ್ಯಾಪಿ ವೈಕುಂಠದಲ್ಲಿ (ಅಂದರೆ ವಿಷ್ಣುವಿನ ವೈಕುಂಠದ ಮೇಲೆ ಸ್ಥಿತನಾಗಿದ್ದಾನೆ) ನಿತ್ಯ ಕ್ರೀಡೆ ಮಾಡುವನು. ಇದೇ ವ್ಯಾಪೀ ವೈಕುಂಠದ ಒಂದು ಖಂಡವಾಗಿದೆ – ಗೋಲೋಕ, ಅಲ್ಲಿ ಯಮುನಾ, ವೃಂದಾವನ, ನಿಕುಂಜ ಹಾಗೂ ಗೋಪಿಯರು ನಿತ್ಯ ವಾಸಿಸುತ್ತಾರೆ. ಭಗವಂತನ ಸೇವೆಯ ಮಾಧ್ಯಮದಿಂದ ಅಲ್ಲಿ ಭಗವಂತನ ನಿತ್ಯ ಲೀಲೆಯ ಸೃಷ್ಟಿಯಲ್ಲಿ ಪ್ರವೇಶಿಸುವುದೇ ಜೀವದ ಸರ್ವೋತ್ತಮ ಗತಿಯಾಗಿದೆ.

ಎಲ್ಲಿ ಪ್ರೇಮಲಕ್ಷಣಾಭಕ್ತಿಯು ಉಲ್ಲೇಖಿಸಿದ ಮನೋರಥವನ್ನು ಪೂರ್ತಿಗೊಳಿಸುವ ಮಾರ್ಗವಾಗಿದೆಯೋ ಅಲ್ಲಿ ಭಗವಂತನ ಅನುಗ್ರಹದಿಂದಲೇ ಜೀವದ ಪ್ರವೃತ್ತಿಯು ಸಂಭವವಿದೆ. ಇದೇ ಶ್ರೀಮನ್ಮಹಾಪ್ರಭುವಲ್ಲಭಾಚಾರ್ಯರ ಪುಷ್ಟಿಮಾರ್ಗದ (ಅನುಗ್ರಹ ಮಾರ್ಗ) ಮೂಲ ಸಿದ್ಧಾಂತವಾಗಿದೆ.ಪುಷ್ಟಿ-ಭಕ್ತಿಯ ಪ್ರೇಮ, ಆಸಕ್ತಿ ಹಾಗೂ ವ್ಯಸನ ಎಂಬ ಮೂರು ಉತ್ತರೋತ್ತರ ಸ್ಥಿತಿಗಳಿವೆ. ಮರ್ಯಾದಾ ಭಕ್ತಿಯಲ್ಲಿ ಸಾಧನೆಯಿಂದ ಆಗುತ್ತದೆ, ಆದರೆ ಪುಷ್ಟಿ ಭಕ್ತಿಯಲ್ಲಿ ಭಕ್ತನಿಗೆ ಯಾವುದೇ ಸಾಧನೆಯ ಅವಶ್ಯಕತೆಯಿರದೆ ಕೇವಲ ಭಗವಂತನ ಕೃಪೆಯ ಆಶ್ರಯವಿರುತ್ತದೆ. ಮರ್ಯಾದಾ- ಭಕ್ತಿಯನ್ನು ಸ್ವೀಕರಿಸುವಾಗಲೂ ಪುಷ್ಟಿ ಭಕ್ತಿಯನ್ನೇ ಶ್ರೇಷ್ಠವೆಂದು ತಿಳಿಯಲಾಗುತ್ತದೆ. ಪುಷ್ಟಿಮಾರ್ಗದ ಜೀವದ ಸೃಷ್ಟಿಯು ಭಗವಂತನ ಸೇವೆಗಾಗಿಯೇ ಇರುತ್ತದೆ. ಭಗವಂತನ ರೂಪದ ಸೇವೆಗಾಗಿ ಅವನ ಸೃಷ್ಟಿಯಾಗಿರುತ್ತದೆ. ಪ್ರೇಮಪೂರ್ವಕ ಭಗವಂತನ ಸೇವಾಭಕ್ತಿಯೇ ಯಥಾರ್ಥ ಸ್ವರೂಪವಾಗಿದೆ. ಭಕ್ತಿಶ್ಚ ಪ್ರೇಮಪೂರ್ವಿಕಾಸೇವಾ. ಭಾಗವತದ ಆಧಾರದಿಂದ (ಕೃಷ್ಣಸ್ತು ಭಗವಾನ ಸ್ವಯಂ) ಭಗವಾನ ಕೃಷ್ಣನೇ ಸದಾ ಸರ್ವದಾಸೇವ್ಯ, ಸ್ಮರಣೀಯ ಹಾಗೂ ಕೀರ್ತನೀಯವಾಗಿದ್ದಾನೆ.

ಸರ್ವದಾ ಸರ್ವಭಾವೇನಭಜನಿಯೋಬ್ರಜಾಧಿಪಃ |
ತಸ್ಮಾತ್ಸರ್ವಾತ್ಮನಾ ನಿತ್ಯಂಶ್ರೀಕೃಷ್ಣಃ ಶರಣಂಮಮ |

ಬ್ರಹ್ಮನೊಂದಿಗೆ ಜೀವ- ಸೃಷ್ಟಿಯ ಸಂಬಂಧ ನಿರೂಪಣೆ ಮಾಡುತ್ತ ’ಜೀವವು ಬ್ರಹ್ಮನ ಸದಂಶ (ಸದ್ ಅಂಶ)ವಾಗಿದೆ, ಜಗತ್ತು ಬ್ರಹ್ಮನ ಸಂದೇಶವಾಗಿದೆ’ ಎಂಬುದು ಅವರ ಮತವಾಗಿತ್ತು. ಜೀವ-ಜಗತ್, ಹಾಗೂ ಬ್ರಹ್ಮ ಇವುಗಳು ಪರಸ್ಪರ ಭಿನ್ನವಾಗಿರದಿರುವುದರಿಂದ ಅಂಶ ಮತ್ತು ಅಂಶಿಯ ನಡುವೆ ಭೇದವಿಲ್ಲ. ಇವುಗಳ ನಡುವಿನ ಅಂತರವೆಂದರೆ ಜೀವದಲ್ಲಿ ಬ್ರಹ್ಮನ ಆನಂದಾಂಶವು ಆವೃತ್ತವಾಗಿರುತ್ತದೆ, ಹಾಗೂ ಜಡ ಜಗತ್ತಿನಲ್ಲಿ ಇದರ ಆನಂದಾಂಶ ಮತ್ತು ಚೈತನ್ಯಾಂಶ ಎರಡೂ ಆವೃತ್ತವಾಗಿರುತ್ತವೆ.

ಶ್ರೀಶಂಕರಾಚಾರ್ಯರ ಅದ್ವೈತವಾದವು ಕೇವಲಾದ್ವೈತದ ವಿಪರೀತ ಶ್ರೀವಲ್ಲಭಾಚಾರ್ಯರ ಅದ್ವೈತವಾದದಲ್ಲಿ ಮಾಯೆಯ ಸಂಬಂಧವನ್ನು ಸ್ವೀಕರಿಸದೆ ಬ್ರಹ್ಮನಿಗೆ ಕಾರಣ ಹಾಗೂ ಜೀವ –ಜಗತ್ತಿಗೆ ಅದರ ಕಾರ್ಯ ರೂಪದಲ್ಲಿ ವರ್ಣಿಸುತ್ತ ಮೂರೂ ಶುದ್ಧ ತತ್ವಗಳ ಐಕ್ಯವನ್ನು ಪ್ರತಿಪಾದಿಸಿದ್ದರಿಂದಲೇ ಉಕ್ತ ಮತಕ್ಕೆ ಶುದ್ಧಾದ್ವೈತವಾದ ಎನ್ನಲಾಗಿದೆ (ಶ್ರೀ ವಿಷ್ಣುಸ್ವಾಮೀಜಿಯವರು ಇದರ ಮೂಲ ಪ್ರವರ್ತಕಾಚಾರ್ಯರಿದ್ದಾರೆ )

ಶಿಷ್ಯ ಪರಂಪರೆ

ವಲ್ಲಭಾಚಾರ್ಯರ ೮೪ ಶಿಷ್ಯರಲ್ಲಿ ಅಷ್ಟಛಾಪಕವಿಗಣ- ಭಕ್ತಸೂರದಾಸ, ಕೃಷ್ಣದಾಸ, ಕುಂಭನದಾಸ ಹಾಗೂ ಪರಮಾನಂದದಾಸರು ಪ್ರಮುಖರಿದ್ದಾರೆ. ಶ್ರೀ ಅವಧೂತದಾಸರೆಂಬ ಹೆಸರಿನ ಪರಮಹಂಸ ಶಿಷ್ಯರೂ ಇದ್ದರು. ಸೂರದಾಸರ ನಿಜವಾದ ಭಕ್ತಿ ಹಾಗೂ ಪದಗಳ ರಚನೆಯಲ್ಲಿನ ನಿಪೂಣತೆಯನ್ನು ನೋಡಿ ಅತಿ ವಿನಯಶೀಲ ಸೂರದಾಸರಿಗೆ ಭಾಗವತದ ಕಥೆಯನ್ನು ಶ್ರವಣ ಮಾಡಿಸಿ ಭಗವಂತನ ಲೀಲಾಗಾನದಕಡೆಗೆ ಹೊರಳಿಸಿದರು ಹಾಗೂ ಅವರಿಗೆ ಶ್ರೀನಾಥಮಂದಿರದ ಕೀರ್ತನೆಯ ಸೇವೆಯನ್ನು ನೀಡಿದರು. ತತ್ವಜ್ಞಾನ ಹಾಗೂ ಲೀಲಾಭೇದವನ್ನೂ ಹೇಳಿದರು-

ಶ್ರೀವಲ್ಲಭಗುರು ತತ್ವ ಸುನಾಯೋ ಲೀಲಾ-ಭೇದ ಬತಾಯೋ (ಸೂರಸಾರಾವಲಿ) ಸೂರದಾಸರ ಗುರುಗಳ ಮೇಲಿನ ನಿಷ್ಟೆಯು ದೃಷ್ಟವ್ಯವಿದೆ.

ಭರೋಸೋ ದೃಢ ಇನ ಚರನನಕೇರೋ |
ಶ್ರೀವಲ್ಲಭ-ನಖ-ಚಂದ-ಛಟಾ ಬಿನುಸಬಜಗ ಮಾಂಝಅಧೇರೊ ||

ಶ್ರೀವಲ್ಲಭರ ಪ್ರತಾಪದಿಂದ ಪ್ರಮತ್ತಕುಂಭನದಾಸರಂತೂ ಸಮ್ರಾಟ ಅಕಬರನ ಶಿರಚ್ಚೇದ ಮಾಡಲೂ ಹೆದರಲಿಲ್ಲ- ಪರಮಾನಂದದಾಸರ ಭಾವಪೂರ್ಣಪದಗಳ ಶ್ರವಣಮಾಡಿ ಮಹಾಪ್ರಭುಗಳು ಬಹಳಷ್ಟು ದಿನಗಳ ವರೆಗೆ ಅರಿವಿಲ್ಲದೆ ಇದ್ದವರು. ಉಪಾಸ್ಯ ಶ್ರೀನಾಥನು ಕಲಿ-ಮಲ-ಗ್ರಸಿತ ಜೀವಗಳ ಉದ್ಧಾರಕ್ಕಾಗಿ ಶ್ರೀವಲ್ಲಭಾಚಾರ್ಯರ ದುರ್ಲಭ ಆತ್ಮ-ನಿವೇದನ-ಮಂತ್ರವನ್ನು ಪ್ರದಾನಿಸಿದರು ಹಾಗೂ ಗೋಕುಲದ ಠಕೂರಾನಿ ಘಾಟನಲ್ಲಿ ಯಮುನಾರಾಣಿಯು ದರ್ಶನ ನೀಡಿ ಕೃತಾರ್ಥಗೊಳಿಸಿದರು ಎಂದು ಜನರಲ್ಲಿ ಒಂದು ನಂಬಿಕೆ ಇದೆ. ಅಣುಭಾಷ್ಯ (ಬ್ರಹ್ಮಸೂತ್ರ ಭಾಷ್ಯ ಅಥವಾ ಉತ್ತರಮೀಮಾಂಸ)ವು ಅವರ ಶುದ್ಧಾದ್ವೈತವನ್ನು ಪ್ರತಿಪಾದಿಸುವ ಪ್ರಧಾನ ದಾರ್ಶನಿಕ ಗ್ರಂಥವಾಗಿದೆ. ಪೂರ್ವಮೀಮಾಂಸಾಭಾಷ್ಯ, ಭಾಗವತದ ದಶಮ ಸ್ಕಂಧದ ಮೇಲೆ ಸುಬೋಧಿನಿ ಟೀಕೆ, ತತ್ತ್ವದೀಪ ನಿಬಂಧ ಹಾಗೂ ಪುಷ್ಟಿ-ಪ್ರವಾಹ-ಮರ್ಯಾದಾ ಇವು ಪ್ರಮುಖ ಗ್ರಂಥಗಳಾಗಿವೆ. ೧೫೮೭ನೇ ಸಂವತ್ಸರದ ಆಷಾಢ ಶುಕ್ಲ ತೃತಿಯಾದಂದು ಅವರು ಅಲೌಕಿಕ ರೀತಿಯಲ್ಲಿ ಇಹಲೀಲೆಯನ್ನು ಮುಗಿಸಿ ಸದೇಹ ಪ್ರಯಾಣ ಮಾಡಿದರು. ವೈಷ್ಣವ ಸಮುದಾಯವು ಸದಾಕಾಲ ಅವರ ಋಣಿಯಾಗಿರುವುದು.

Leave a Comment