ಕೈಗಾರಿಕೀಕರಣ ಮಾಡಿರುವ ವಾತಾವರಣದ ಶಬ್ದಾತೀತ ನಷ್ಟ !
ಕೈಗಾರಿಕೀಕರಣ ಮಾಡಿದ ವಾತಾವರಣದ ಶಬ್ದಾತೀತ ನಷ್ಟವನ್ನು ಮಾನವನು ಎಂದಿಗೂ ತುಂಬಿಸಲಾರನು. 'ಪೋನ ಯು'ಎಂಬ ಚೀನದ ತಜ್ಞ ಹೇಳುವಂತೆ ‘ ಯುರೋಪನಲ್ಲಿ ಕಳೆದ ಶತಮಾನದಲ್ಲಿ ವಿಕಾಸದ ಹೆಸರಿನಲ್ಲಿ ಎಷ್ಟು ವಾತಾವರಣವನ್ನು ನಷ್ಟ ಪಡಿಸಿದರೋ, ಅಷ್ಟು ವಿನಾಶವನ್ನು ನಾವು (ಚೀನ) ಮೂರು ದಶಕಗಳಲ್ಲಿ ಮಾಡಿದ್ದೇವೆ.
ಅ. ಮಾನವನಿಗೆ ೩ ಕೋಟಿ ೮೦ ಲಕ್ಷ ವರ್ಷಗಳಿಂದ ಶೇಖರಿಸಿಟ್ಟ ನೈಸರ್ಗಿಕ ಬಂಡವಾಳವು ಉಪಯೋಗಿಸಲು ಸಿಕ್ಕಿದೆ. ಒಂದು ವೇಳೆ ಇಂದಿನ ವೇಗದಲ್ಲಿ ಈ ನಿಧಿಯನ್ನು ಉಪಯೋಗಿಸುವುದು ಮುಂದುವರಿಸಿದರೆ, ಈ ಶತಮಾನದ ಅಂತ್ಯದವರೆಗೆ ಅತ್ಯಂತ ಕಡಿಮೆ ಅಂಶವು ಉಳಿಯುವುದು!
ಆ. ಕಳೆದ ಶತಮಾನದ ಉತ್ತರಾರ್ಧದಲ್ಲಿ ಭೂಮಿಯ ಮೇಲಿನ ಕಾಲುಭಾಗದಷ್ಟು ಮಣ್ಣಿನ ಆವರಣ (ಮೃದು ಅಥವಾ ಟಾಪ್ ಸಾಯಿಲ್) ಹಾಗೂ ಒಂದು ಮೂರನೆಯ ಒಂದು ಭಾಗದಷ್ಟು ಅರಣ್ಯ – ಆವರಣ (ಫಾರೆಸ್ಟ್ ಕವರ್) ಕಳೆದುಕೊಂಡಿದೆ.
ಇ. ಕಳೆದ ಶತಮಾನದ ಕೊನೆಯ ಮೂರು ದಶಕಗಳಲ್ಲಿಯೇ ಪೃಥ್ವಿಯ ಮೇಲಿನ ಮೂರನೆಯ ಒಂದು ಭಾಗದಷ್ಟು ನೈಸರ್ಗಿಕ ಸಂಪತ್ತನ್ನು ಮಾನವನು ಉಪಯೋಗಿಸಿದ್ದಾನೆ.
ಈ.೧ ಸಹಸ್ರ ಕೋಟಿ ರೂಪಾಯಿ ಖರ್ಚು ಮಾಡಿಯೂ ಎಂಟು ಜನರಿಗೆ ಬೇಕಾಗುವಷ್ಟು ಆಮ್ಲಜನಕವನ್ನುಮನುಷ್ಯನು ನಿರ್ಮಿಸಲಾರನು. ಆದರೆ ಅದೇ ಆಮ್ಲಜನಕವನ್ನು ಈ ಪೃಥ್ವಿ / ವಾತಾವರಣವು ೭೦೦ ಕೋಟಿ ಜನರಿಗೆ ಉಚಿತವಾಗಿ ಕೊಡುತ್ತದೆ !
– ಡಾ. ದುರ್ಗೇಶ ಸಾಮಂತ, ಗೋವಾ.
ವಿಜ್ಞಾನದಿಂದ ಆಗಿರುವ ನೈತಿಕ ಮಾಲಿನ್ಯದಿಂದ
ಜಾಗತಿಕವಾತಾವರಣವು ತೊಂದರೆಗೊಳಗಾಗಿರುವುದು !
‘ನೋಬೆಲ ಪಾರಿತೋಷಕ ವಿಜೇತರೊಬ್ಬರು ಹೊಸ ದೆಹಲಿಯಲ್ಲಿನಡೆದ ಅಖಿಲ ಭಾರತೀಯ ಆಯುರ್ವಿಜ್ಞಾನ ಸಂಸ್ಥೆಯ ‘ಸಂಶೋಧನೆ ಹಾಗೂ ಶಿಕ್ಷಣ ಇವುಗಳನ್ನು ಹೊರತುಪಡಿಸಿ ನಮ್ಮ ಸಾಮಾಜೀಕ ಕರ್ತವ್ಯಗಳು’ ಈ ವಿಷಯದ ಕುರಿತು ಮಾತನಾಡುವಾಗ‘ಮುಕ್ತ ಅರ್ಥ ವ್ಯವಸ್ಥೆಯಲ್ಲಿಮೌಲ್ಯಗಳಿಗೆಒತ್ತು ನೀಡದೆ, ಕೇವಲ ಲಾಭಕ್ಕೆ ಮಹತ್ತ್ವ ಬಂದಿರುವುದರಿಂದ ನೈತಿಕ ಮಾಲಿನ್ಯ ನಿರ್ಮಾಣವಾಗಿದೆ' ಎಂದುಹೇಳಿದರು. ನೈತಿಕ ಮಾಲಿನ್ಯ ಇಷ್ಟೊಂದು ದೊಡ್ಡದಾಗಿದೆಯೆಂದರೆ, ಈ ಅಧಃಪತನದಿಂದ ನಿಸರ್ಗದ ಬಗ್ಗೆ ದುರ್ಲಕ್ಷ ಹೆಚ್ಚಾಗಿದ್ದು, ಅದರಿಂದಲೇ ಜಾಗತಿಕ ವಾತಾವರಣವು ತೊಂದರೆಗೊಳಗಾಗಿದೆ.
– ಪ.ಪೂ. ಪರಶರಾಮ ಮಾಧವ ಪಾಂಡೆ (ಶ್ರೀ ಗಣೇಶ- ಅಧ್ಯಾತ್ಮ ದರ್ಶನ)
ನಿಸರ್ಗದ ಮೇಲೆ ಮಾನವನು ಅತ್ಯಾಚಾರ ಮಾಡಿದಲ್ಲಿ ,
ನಿಸರ್ಗವೂ ಅದರ ಸೇಡು ತೀರಿಸಿಕೊಳ್ಳುವುದು !
‘ನಿಸರ್ಗದ ಮೇಲೆ ಮಾನವನು ಅತ್ಯಾಚಾರ ಮಾಡಿದಲ್ಲಿ, ನಿಸರ್ಗವೂ ಅದರ ಸೇಡನ್ನು ತೀರಿಸಿಕೊಳ್ಳುವುದು! ವಿದ್ಯುತ ಕೊರತೆ, ಅತಿವೃಷ್ಟಿ, ಅನಾವೃಷ್ಟಿ, ಸಂಘರ್ಷ, ನೈತಿಕ ಅಧಃಪತನ, ಭೀಷಣ ರೋಗಗಳ ಹಾವಳಿ ಹಾಗೂ ಕೊನೆಗೆ ಮಹಾಯುದ್ಧ ! ಮಳೆ ಹೇಗೆ ಬರುವುದು? ಆಕಾಶದಲ್ಲಿ ಮೋಡಗಳು ಕವಿದುಮರಗಳಿಗೋಸ್ಕರಮಳೆ ಸುರಿಸುತ್ತವೆ! ಡಾಲರ್.ಗಳನ್ನುಪ್ರೇಮಿಸುವಮಾನವನ ಮೇಲೆ ಹೇಗೆ ಮತ್ತು ಏಕೆ ಸುರಿಸುವವು?'
– ಗುರುದೇವ ಡಾ. ಕಾಟೇಸ್ವಾಮಿಜಿ ( ಆದಿತ್ಯ ಕಥಾ ಸಂವಾದ )
ಮಾನವನ ಅತ್ಯಂತ ಸ್ವಾರ್ಥದಿಂದಭಗವಂತನು ಸಂರಕ್ಷಣೆ ನೀಡಿದ ಪೃಥ್ವಿಗೂ ಗಂಡಾಂತರ ಮುಟ್ಟುವುದು !
ಪೃಥ್ವಿ ಇದೂ ಕೂಡಾ ಒಂದು ದೇಹ ಎಂದಾದರೆ, ನಿಸರ್ಗ ನಿಯಮದಂತೆ ಅದರ ಪ್ರಮಾಣದಲ್ಲಿ ಪೃಥ್ವಿಯ ಮೇಲೆ ಪಂಚಮಹಾಭೂತಗಳ ಆವರಣವಿದೆ. ಹಾಗೆಯೇ ಅದರ ಒಳಗೂ ಇದೆ. ಪೃಥ್ವಿಯ ಮೇಲಿನ ಸಜೀವ ಪ್ರಾಣಿಗಳಿಗೆ ಪೃಥ್ವಿಯ ವಾತಾವರಣದ ಹೊರಗಿನ ಘಾತಕವಾದ ಯು.ವಿ.ಸೂರ್ಯಪ್ರಕಾಶದ , ಹಾಗೆಯೇ ಇತರ ಘಾತಕ ಘಟಕಗಳ ಪರಿಣಾಮ ಆಗಬಾರದೆಂದುಪೃಥ್ವಿಯ ಮೇಲೆ ೧೫ ರಿಂದ ೫೦ ಕಿ.ಮಿ. ಅಂತರದಲ್ಲಿ ಓಝೋನ್ ವಾಯುವಿನ ಆವರಣವಿರುತ್ತದೆ; ಆದರೆ ಮಾನವನು ವಿಕೃತ ಮಾನಸಿಕತೆಯ ವಿಚಾರಧಾರಣೆಯಿಂದ ನಿರ್ಮಾಣ ಮಾಡಿದ ವಿವಿಧ ವಸ್ತುಗಳಘಾತಕ ವಾಯುವಿನಿಂದ ಓಝೋನ್ ಪದರನ್ನು ದುರ್ಬಲ ಮಾಡಲಾಗುತ್ತಿದೆ ಹಾಗೂ ಅದರಿಂದ ಆ ಪದರಿನ ಹೊರಗಿನ ಘಾತಕ ಘಟಕಗಳು ಒಳಗೆ ಪ್ರವೇಶಿಸುತ್ತಿವೆ.
ಮನುಷ್ಯನ ಹೆಚ್ಚುತ್ತಿರುವ ಪಾಪದಿಂದಲೇ ಮಾಲಿನ್ಯದ ಸಮಸ್ಯೆಯು ಭಯಪಡುವಂತಹದು !
ಇದೆಲ್ಲವೂ ಇಂದು ಆಧುನಿಕತೆಯ ಪ್ರಭಾವದಿಂದ ಬಂದಿರುವುದರಿಂದಹೀಗೆ ಆಗುತ್ತಿದೆ. ಇಂದು ಪ್ರತಿಯೊಬ್ಬ ಮನುಷ್ಯನಹೆಬ್ಬಯಕೆಯ ಪ್ರಭಾವದಿಂದ ಹಾಗೂ ಸತ್ಯತ್ವದ ಜ್ಞಾನ ಇಲ್ಲದಿರುವುದರಿಂದ ಮಾನವಿ ಜೀವನದಲ್ಲಿ ಬೇಡವಾದುದೆಲ್ಲವೂ ಜನ್ಮತಾಳುತ್ತಿವೆ.ಅವನ್ನೇ ‘ಪಾಪ’ ಎನ್ನುವರು. ಇವತ್ತು ಈ ಪಾಪವು ಇಷ್ಟೊಂದು ಬೆಳೆದಿದೆಯೆಂದರೆ, ಈ ವಿಕೃತಿಯಿಂದ ಸ್ವತಃ ಮಾನವನು ತನ್ನ ಶರೀರವನ್ನು ದೂಷಿತ ಮಾಡಿಕೊಂಡಿರುವನು. ಹೊರಗಡೆಯ ವಾತಾವರಣದಲ್ಲಿ ಅವನ ವಿಚಾರಗಳಿಂದ ನಿರ್ಮಾಣಗೊಂಡ ಪರಿಪಾಕದಿಂದ ಎಲ್ಲೆಡೆ ಗಾಳಿ – ನೀರು ದೂಷಿತವಾಗಿದೆ;ಅಂತೆಯೇ ಇಂದು ಮಾಲಿನ್ಯದಸಮಸ್ಯೆಗೆ ಭಯ ಪಡುವಂತಾಗಿದೆ. ಇದೆಲ್ಲವೂ ನಮ್ಮೊಳಗಿನ ವಿಕೃತಿಯಿಂದಲೇ ಆಗಿರುವುದು. ಮಾನವನಿಗೆ ಜೀವಿಸಲು ಶುದ್ಧ ಗಾಳಿ, ಶುದ್ಧ ನೀರು, ಸಾತ್ವಿಕ ಆಹಾರ, ಸ್ಥಳಕಾಲಕ್ಕನುಸಾರ ಅಲ್ಲಿನ ವಾತಾವರಣದಂತೆ ವೇಶಭೂಷೆ ಹಾಗೂ ಮನೆಯ ಆವಶ್ಯಕತೆ ಇದೆ; ಆದರೆ ನಮ್ಮೊಳಗಿನ ಸುಖದ ವಿಕೃತ ತಿಳುವಳಿಕೆಯಿಂದ ನಾವೇ ನಮ್ಮನ್ನು ನಾಶ ಮಾಡುತ್ತಿದ್ದೇವೆ, ಎಂಬುದು ಗಮನದಲ್ಲಿಯೆ ಬರುವುದಿಲ್ಲ. ಇದಕ್ಕಾಗಿ ನಮ್ಮ ನಡೆವಳಿಕೆಯನ್ನುನಿಸರ್ಗ ನಿಯಮದಂತೆ ಪಾಲಿಸಬೇಕು. ನಮ್ಮ ಇಂದಿನ ಅಜ್ಞಾನದಿಂದ ನಾವೇ ನಮ್ಮ ಸಮಸ್ಯೆಗಳನ್ನು ನಿರ್ಮಾಣ ಮಾಡಿಕೊಂಡಿದ್ದೇವೆ. ಇವತ್ತು ಮಾಲಿನ್ಯ ಹಾಗೂ ವಿದ್ಯುತಿನ ಸಂಕಟಗಳ ಪ್ರಶ್ನೆಗಳು ಸಮಸ್ಯೆಗಳ ಹೆಮ್ಮರವಾಗಿವೆ. ಆದುದರಿಂದ ಈ ವಿಷಯಗಳ ಸಾಂಸ್ಕೃತಿಕ ಮೂಲ ಏನಿದೆ, ಎಂಬುದನ್ನು ಶೋಧಿಸಿ ಆ ಪ್ರಕಾರಸರಿಯಾದ ಉಪಾಯಗಳನ್ನು ಮಾಡದೆ ಪರಿಹಾರವಿಲ್ಲ.