ನಗರಗಳ ಜನಸಂಖ್ಯೆ ಸ್ಫೋಟ ವಾತಾವರಣಕ್ಕೆ ಹಾನಿಕಾರಕ !
‘ಕಳೆದ ಹತ್ತು ವರ್ಷಗಳಲ್ಲಿ ನಗರಗಳ ಜನಸಂಖ್ಯೆಯು ಅತಿವೇಗದಿಂದ ಹಿಗ್ಗುತ್ತಿದ್ದು, ಅದರಿಂದ ವಾತಾವರಣದ ಬಗ್ಗೆ ಗಂಭೀರ ಪ್ರಶ್ನೆ ನಿರ್ಮಾಣವಾಗಿದೆ. ನಗರಗಳಲ್ಲಿ ಹೊರಗಡೆಯಿಂದ ಬರುತ್ತಿರುವ ಹೆಚ್ಚಿನ ಗುಂಪುಗಳ ಆವಶ್ಯಕತೆಯನ್ನು ಪೂರೈಸಲು ದಿನದಿಂದ ದಿನಕ್ಕೆ ದೊಡ್ಡ ಪ್ರಮಾಣದಲ್ಲಿ ಮರಗಳನ್ನು ಕಡಿಯುತ್ತಿರುವುದರಿಂದ ಹಾಗೂ ನಿಯಮಗಳನ್ನು ಎಲ್ಲಿಯೂ ಪಾಲಿಸದಿರುವುದರಿಂದ, ಕೆಲವೇ ದಿನಗಳಲ್ಲಿ ಈ ಪ್ರಶ್ನೆಯು ಉಗ್ರ ರೂಪ ಧರಿಸಬಹುದು ಎಂಬ ಭಯ ಎಲ್ಲೆಡೆ ವ್ಯಕ್ತಪಡಿಸಲಾಗುತ್ತಿದೆ.
(ಮಹಾರಾಷ್ಟ್ರ ಟಾಯಿಮ್ಸ್ , ೧೦.೪.೨೦೦೧)
ನಗರಗಳಲ್ಲಿ ಹೆಚ್ಚಳ
ಹಳ್ಳಿಗಳು ಅತಿ ವೇಗದಿಂದ ನಗರಗಳಾಗಿ ರೂಪಾಂತರವಾಗುತ್ತಿರುವುದರಿಂದ ಪ್ರಗತಿ ಮತ್ತು ಅನುಕೂಲತೆಯ ಹೆಸರಿನಲ್ಲಿ ಹಸುರು ಕಡಿಮೆಯಾಗುತ್ತಿದೆ ಹಾಗೂ ಕಾಂಕ್ರೀಟಿನ ಅರಣ್ಯವೇ ಬೆಳೆಯುತ್ತಿವೆ. ನಗರದಲ್ಲಿ ವಾಸಿಸುವ ಗುಬ್ಬಿ, ಕಾಗೆ ಹಾಗೂ ಪಾರಿವಾಳಗಳಂತಹ ಪಕ್ಷಿಗಳು ಹೊಲಗದ್ದೆಗಳಲ್ಲಿ ಸಿಗುವ ವಿಷವಿಲ್ಲದ ಹಾವು, ಕಪ್ಪೆ ಇವುಗಳ ಪ್ರಮಾಣವು ಕಡಿಮೆಯಾಗಿದೆ. ಅರಣ್ಯಗಳು ನಶಿಸಿ ಹೋಗುತ್ತಿರುವುದರಿಂದ ಚಳಿಗಾಲದ ವಿಶೇಷ ಅತಿಥಿ ಪಕ್ಷಿಗಳು ಇಂದು ಕಾಣುತ್ತಿಲ್ಲ. ರಭಸದಿಂದ ಸಾಗುತ್ತಿರುವ ಮರಳು ಸಾಗಾಣಿಕೆಯಿಂದ ನದಿಗಳ ಅವಸ್ಥೆಯು ದಯನೀಯವಾಗಿದೆ. ಮಳೆಗಾಲದಲ್ಲಿ ಇಂತಹ ನದಿಗಳಲ್ಲಿ ಪ್ರವಾಹ ಬರುವ ಸಾಧ್ಯತೆ ಇನ್ನಷ್ಟು ಹೆಚ್ಚಿರುತ್ತದೆ.
ಮಕ್ಕಳೇ, ಮನುಷ್ಯನಿಗೆ ಸರಳ ಜೀವನ ನಡೆಸಲು ಪ್ರಕೃತಿಯಿಂದ ಸಕಲ ಸೌಲಭ್ಯಗಳು ಲಭಿಸಿವೆ. ಆದರೆ ಜನಸಂಖ್ಯೆ ವಿಸ್ಫೋಟ ಮತ್ತು ಅತಿಆಸೆಯಿಂದ ವಾತಾವರಣದ ಮೇಲೆ ಒತ್ತಡ ಬರುತ್ತಿದೆ. ಈ ಒತ್ತಡವನ್ನು ಕಡಿಮೆ ಮಾಡಲು ನಮ್ಮಿಂದ ಆಗುವ ಪ್ರಯತ್ನಗಳನ್ನು ಮಾಡೋಣವೆ?