ತ್ಯಾಜ್ಯ

೧.ಕೈಗಾರಿಕೀಕರಣವನ್ನು (industrialization) ಮೊದಲು ನಿಲ್ಲಿಸಿ. ಇಲ್ಲವಾದರೆ ಅದು ನಿಮ್ಮನ್ನು ಮುಗಿಸಿಬಿಡುವುದು. ಸಂಪೂರ್ಣ ಮಾನವಜಾತಿಯನ್ನೇ ನಷ್ಟ ಮಾಡಬಹುದು; ಏಕೆಂದರೆ ಜಗತ್ತಿನ ರಾಕ್ಷಸದಂತಹ ಕಾರಖಾನೆಗಳಿಂದ ಎಷ್ಟು ಪ್ರಚಂಡವಾದ ಉತ್ಪಾದನೆಯಾಗುತ್ತದೆಯೋ ಅಷ್ಟೇ ವಿಷವನ್ನೊಳಗೊಂಡ ಘಾತಕ ತ್ಯಾಜ್ಯವೂ ನಿರ್ಮಾಣವಾಗುತ್ತದೆ. – ಗುರುದೇವ ಡಾ.ಕಾಟೇಸ್ವಾಮಿಜಿ

೨.ವಾತಾವರಣದಲ್ಲಿ ಇರುವ ತ್ಯಾಜ್ಯದಲ್ಲಿ ಸೀಸದಂತಹ ಮಾರಕ ಧಾತುಗಳು ಬಹುಬೇಗನೆ ಭೂಮಿಯೊಳಗೆ ಹಾಗು ನೀರಿನಲ್ಲಿ ಸೇರಿಕೊಳ್ಳುತ್ತವೆ. ಬ್ರೊಮಿನೆಟೆಡ್ ಡೈಯಾಕ್ಸಿನ, ಬೆರಿಲ್ಲಿಯಮ್, ಕ್ಯಾಡಮಿಯಮ್ ಹಾಗೂ ಪಾರಾ ಉತ್ಸರ್ಜಿತ (exhaust) ಮಾಡುವ ನಲಿಕೆಯಿಂದ ಚಿನ್ನದ ಆವರಣವಿರುವ ವಸ್ತುಗಳ ಮೇಲಿನ ನೈಟ್ರಿಕ್ ಮತ್ತು ಹೈಡ್ರೋಕ್ಲೊರಿಕ್ ಆಮ್ಲಗಳ ಬಳಕೆಯಿಂದ ಉತ್ಸರ್ಜಿವಾಗುವ ಕಣಗಳ, ನೇತ್ರ ಹಾಗೂ ತ್ವಚೆ ಇವುಗಳ ಸಂಪರ್ಕವಾದಲ್ಲಿ ಅನೇಕ ಕಾಯಿಲೆಗಳನ್ನು ಆಹ್ವಾನಿಸಿದಂತೆ.

೩.ಕ್ಲೋರಿನ್ ಹಾಗೂ ಸಲ್ಫರ್ಡೈಆಕ್ಸೈಡ್ ಗಳಂತಹ ಘಾತಕ ಹಾಗೂ ವಿಷಾರಿ ವಾಯುರೂಪ ಆಮ್ಲಗಳ ಶ್ವಸನದಿಂದ ಶ್ವಾಸಕೋಶಕ್ಕೆ ತೊಂದರೆಯಾಗಿ ಅನೇಕ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ.

೪.ಗಣಕಯಂತ್ರದಿಂದ ನಿರ್ಮಾಣವಾದ ತ್ಯಾಜ್ಯವು ಅಧುನಿಕ ವಿಜ್ಞಾನದ ಮತ್ತೊಂದು ‘ಕೊಡುಗೆ’ಯಾಗಿದೆ.

೫.ವೈದ್ಯಕೀಯ ಕ್ಷೇತ್ರಗಳಿಗೆ ಸಂಬಂಧಪಟ್ಟ ಇಂಜೆಕ್ಷನ್, ಔಷಧಗಳು, ಇನ್ನಿತರ ತ್ಯಾಜ್ಯ ಇವುಗಳ ಸಮಸ್ಯೆ ಬಹಳ ದೊಡ್ಡದಾಗಿದೆ; ಏಕೆಂದರೆ ಅದನ್ನು ಸಮಪರ್ಕವಾಗಿ ನಿರ್ವಹಿಸಲು ವಿಫಲರಾದರೆ ಇತರರಿಗೆ ಅದರಿಂದ ತೊಂದರೆ ಉಂಟಾಗಬಹುದು.

೬. ಪ್ರಗತಿ ಹೊಂದಿದ ಹಾಗೂ ಪ್ರಗತಿ ಹೊಂದುತ್ತಿರುವ ದೇಶಗಳಲ್ಲಿ ಅಣುಶಕ್ತಿಯ ತ್ಯಾಜ್ಯದ ಸಮಸ್ಯೆ ಬಹಳ ದೊಡ್ಡದಾಗಿದೆ. ಇಲ್ಲಿ ಮಾಡಿದ ಚಿಕ್ಕದಾದ ತಪ್ಪು ಸೃಷ್ಟಿಯಮೇಲೆ ಭಯಂಕರವಾದ ಪರಿಣಾಮವನ್ನುಂಟು ಮಾಡಬಹುದು !

Leave a Comment