‘ಮುಯ್ಯಿಗೆ ಮುಯ್ಯಿ’ – ನಿಸರ್ಗದ ನಿಯಮ!
‘ಮುಯ್ಯಿಗೆ ಮುಯ್ಯಿ’ ಇದು ನಿಸರ್ಗದ ಶಾಶ್ವತವಾದ ನಿಯಮವಾಗಿದೆ. ಧರ್ಮಾಚರಣೆ ಮಾಡದಿರುವ ಮಾನವಿ ಪಶುಗಳ ಕ್ರೌರ್ಯವೇ ನಿಸರ್ಗಕ್ಕೆ ಸೇಡು ತೀರಿಸಿಕೊಳ್ಳುವ ಅನಿವಾರ್ಯ ಪರಿಸ್ಥಿತಿಯಲ್ಲಿ ತಂದಿಡುತ್ತದೆ. ‘ಗಿಡಗಳ ರಹಸ್ಯಮಯ ಜೀವನ’ – ಪೀಟರ್ ಟೊಮ್ಕಿನ್ಸ ಹಾಗೂ ಕ್ರಿಸ್ಟೋಫರ್ ಬರ್ಡ್ ಈ ಶಾಸ್ತ್ರಜ್ಞರ ಗ್ರಂಥವು ಆ ನಿಯಮಗಳ ಅತ್ಯುತ್ತಮ ವಿಶ್ಲೇಷಣೆ ಮಾಡಿ ಅದನ್ನು ಸಿದ್ಧಪಡಿಸುತ್ತದೆ.
ನಿಸರ್ಗವು ಸೇಡು ತಿರಿಸಿಕೊಳ್ಳುತ್ತಿದೆ !
‘ನಿಸರ್ಗದ ಕುತ್ತಿಗೆ ದಬ್ಬಿ ಅದರ ರಹಸ್ಯಗಳನ್ನು ಬಲವಂತವಾಗಿ ಪಡೆಯುವ ಶಾಸ್ತ್ರಜ್ಞರು, ಸ್ವಾರ್ಥಕ್ಕಾಗಿ ಮನಬಂದಂತೆ ವಿಧ್ವಂಸ ಮಾಡುವ ಧರ್ಮಹೀನ ಆಧುನಿಕ ರಾಕ್ಷಸರಾಗಿದ್ದಾರೆ. ಇಂದು ನಿಸರ್ಗವು ಸೇಡು ತೀರಿಸಿಕೊಳ್ಳುತ್ತಿದೆ! ಮಾನವನು ನಿಸರ್ಗದ ಒಂದು ಅವಿಭಾಜ್ಯ ಅಂಗವಾಗಿರುವುದರಿಂದ ಅವನಿಗೆ ನಿಸರ್ಗದ ಮೇಲೆ ಆಕ್ರಮಣ ಮಾಡುವುದು ಅಸಾಧ್ಯವಿದೆ.
ಮಾನವನ ಕುಕೃತ್ಯ ಮತ್ತು ಭೂಕಂಪಗಳು
ಕ್ರೌರ್ಯ, ರಾಕ್ಷಸಿ ವೃತ್ತಿ, ಕಸಾಯಿಖಾನೆಗಳು, ಹತ್ಯಾಕಾಂಡಗಳು ಹಾಗೂ ಯುದ್ಧ ಇವುಗಳ ಮತ್ತು ಭೂಕಂಪದ ಹತ್ತಿರದ ಸಂಬಂಧ ಇದೆ. ಈ ಕ್ರೌರ್ಯ, ಈ ಕಸಾಯಿಖಾನೆಗಳನ್ನು ಮುಚ್ಚಿದಲ್ಲಿ ಭೂಕಂಪಗಳಗಲಿಕ್ಕಿಲ್ಲ. ‘ಪೀಡೆಯ ತರಂಗ’ದಲ್ಲಿನ ಥಿಯರಿಯುಅದೇ ನಿಷ್ಕರ್ಷ ಹೇಳುತ್ತದೆ. ‘ಇಟಿಮಾಲಾಜಿ ಆಫ್ ಅರ್ಥ್ಕ್ವೇಕ್ಸ’ ಈ ಗ್ರಂಥವೂ ಅದೇ ನಿಷ್ಕರ್ಷ ನೀಡುತ್ತದೆ. ಪವಿತ್ರ ಭಾರತ ಭೂಮಿಗೆಸಹಸ್ರಾರುವರ್ಷಗಳಿಂದ ಭೂಕಂಪ ಗೊತ್ತಿರಲಿಲ್ಲ. ಇದ್ದರೂ ಸಹ ಕ್ವಚಿತವಾಗಿರಬಹುದು; ಆದರೆ ಈ ಹತ್ತು ವರ್ಷಗಳಲ್ಲಿ ನಾಲ್ಕು ಪ್ರಲಯಕಾರಿ ಭೂಕಂಪಗಳು, ನಾಲ್ಕು ಚಂಡಮಾರುತ ಹಾಗೂ ಆರು ಮಹಾಪೂರಗಳನ್ನು ಭರತಭೂಮಿಯು ಕಂಡಿತು.- ಪ.ಪೂ. ಗುರುದೇವ ಡಾ.ಕಾಟೇಸ್ವಾಮಿಜಿ (ಘನಗರ್ಜಿತ )