೧. ಪಕ್ಕದ ಕೋಣೆಯಲ್ಲಿ ಬಾರಿಸಿದ ದೂರವಾಣಿಯ ಧ್ವನಿ, ಕರೆ ಘಂಟೆ ಹಾಗೂ ನಾಲ್ಕು ಜನರು ಒಂದೇ ಸಮಯಕ್ಕೆ ಮಾತನಾಡುವಾಗ ಅವರ ನಡುವಿನ ಸಂಭಾಷಣೆ ಸರಿಯಾಗಿ ಕೇಳದಿರುವುದು ಇವೆಲ್ಲ ಕಿವುಡತನದ ವಿಧಗಳಾಗಿವೆ. ಮುಂಬಯಿ, ಬೆಂಗಳೂರಿನಂತಹ ಮಹಾನಗರಗಳಲ್ಲಿ ವಾಸಿಸುವಅನೇಕರಲ್ಲಿ ಇದು ಕಂಡು ಬರುತ್ತದೆ. ನಮ್ಮ ಶ್ರವಣ ವ್ಯವಸ್ಥೆಯು ಮದುವೆ, ಮೆರವಣಿಗೆ, ಸಮಾರಂಭಗಳಲ್ಲಿ ಮಾಡಿದ ಧ್ವನಿವರ್ಧಕದ ಉಪಯೋಗ ಅಥವಾ ಪಟಾಕಿಗಳಿಂದ ಕೆಡುತ್ತದೆ.
೨. ಸಂಚಾರಿ ಪೊಲೀಸರಲ್ಲಿ ಶೇ.೮೦ ರಷ್ಟು ಜನರಲ್ಲಿ ಹೆಚ್ಚಿನಾಂಶ ಕಿವುಡತನವಿರುತ್ತದೆ. 'ಏಕೆ' ಎಂಬುವುದಕ್ಕೆಉತ್ತರ ಈ ಮಾಲಿನ್ಯದಲ್ಲಿದೆ. – ಡಾ.ಯಶವಂತ ಓಕ ( ಮಹಾರಾಷ್ಟ್ರ ಟಾಯಿಮ್ಸ )
೩. ದೊಡ್ಡ ಸ್ವರದಲ್ಲಿ ಹಚ್ಚಲಾಗುವ ದೂರದರ್ಶನ, ಆಕಾಶವಾಣಿ, ಉತ್ಸವ ಹಾಗೂ ಹಬ್ಬಗಳ ನಿಮಿತ್ತ ಹಚ್ಚಲಾಗುವ ಕರ್ಣ ಕರ್ಕಶವೆಂಬಂತೆ ಕೇಳಿಬರುವಧ್ವನಿವರ್ಧಕ, ಇಷ್ಟೇ ಅಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ದೊಡ್ಡಸ್ವರದಲ್ಲಿ ನಡೆಯುವಸಂಭಾಷಣೆ ಮುಂತಾದ ಕಾರಣಗಳಿಂದ ದೊಡ್ಡ ಪ್ರಮಾಣದಲ್ಲಿ ಶಬ್ದ ಮಾಲಿನ್ಯಆಗುತ್ತದೆ. – ಪ.ಪೂ. ಪಾಂಡೆ ಮಹಾರಾಜರು
ಶಬ್ದ ಮಾಲಿನ್ಯವನ್ನು ತಡೆಯಲು ಸರಕಾರ ಹಾಗೂ ನಾಗರಿಕರಜವಾಬ್ದಾರಿ!
ಮಾತನಾಡುವ ಹಕ್ಕಿನಲ್ಲಿಯೇ ಇತರರ ಶಾಂತ ಜೀವನದ ಹಕ್ಕಿನ ಶಾಶ್ವತತೆಯು ವಿಲೀನವಾಗಿದೆ. ನಿಮ್ಮ ವಿಚಾರ ಕೇಳಲು ನೀವು ಧ್ವನಿಕ್ಷೇಪವನ್ನು ಕಡ್ಡಾಯಗೊಳಿಸುವಂತಿಲ್ಲ. ಸರ್ವೋಚ್ಚ ನ್ಯಾಯಾಲಯವು ‘ಬುರಾಬಾಜಾರ ಫಾಯರ ವರ್ಕ್ಸ’ ಖಟ್ಲೆಯಲ್ಲಿ ‘'ನಿದ್ದೆ'ಮೂಲಭೂತ ಹಕ್ಕು’, ಎಂಬುದನ್ನು ನಿರ್ವಿವಾದವಾಗಿ ಸಮ್ಮತಿಸಿದೆ. ಸರಕಾರವು ಶಬ್ದ ಮಾಲಿನ್ಯದ ವಿಷಯದಲ್ಲಿ ಕಠೋರ ಭೂಮಿಕೆಯನ್ನು ಅವಲಂಬಿಸಬೇಕಿದೆ, ಆದರೆ ನಾಗರಿಕರು ಸಾಕಷ್ಟು ಜಾಗೃತೆಯನ್ನು ವಹಿಸಿ ಶಾಂತಿಯಿಂದ ಜೀವಿಸುವ ಹಕ್ಕಿನ ಸಂರಕ್ಷಣೆಗಾಗಿ ದಕ್ಷತೆಯನ್ನು ವಹಿಸಬೇಕು.