ಪರಿಸರ

ನಮ್ಮ ಸುತ್ತಮುತ್ತಲಿನ ವಾತಾವರಣ ಎಂದರೆ ಪರಿಸರ! ನಿಸರ್ಗವು ಪರಿಸರದ ಸಮತೋಲವನ್ನು ಕಾಪಾಡುತ್ತದೆ. ಪರಿಸರದಲ್ಲಿ ಮನುಷ್ಯನಅನಪೇಕ್ಷಿತ ಹಸ್ತಕ್ಷೇಪ ಹೆಚ್ಚಿರುವುದರಿಂದ, ಮನುಷ್ಯನ ಸ್ವಾರ್ಥ ಹಾಗೂ ಆಯೋಜನಾಶೂನ್ಯ ವೃತ್ತಿಯಿಂದ ಪರಿಸರದ ಸಮತೋಲನವು ಕುಸಿಯುತ್ತದೆ. ಮಾನವನ ಆರೋಗ್ಯವು ಪರಿಸರವನ್ನು ಅವಲಂಬಿಸಿದೆ. ಆದುದರಿಂದ ಪರಿಸರದ ಆರೋಗ್ಯದ ಕಡೆಗೆ ಗಮನ ನೀಡುವುದು ಅತ್ಯಂತ ಅವಶ್ಯಕವಾಗಿದೆ!

ಪರಿಸರ ಮಾಲಿನ್ಯದಿಂದ ಮಾನವನಿಗೆ ಅನುಭವಿಸಬೇಕಾಗುವ ತೊಂದರೆಗಳು !

ಮಾಲಿನ್ಯದಿಂದ ಪರಿಸರವು ಹದಗೆಟ್ಟಿರುತ್ತದೆ, ಆದುದರಿಂದ ಪರಿಸರಮಾಲಿನ್ಯದ ಕಾರಣಗಳನ್ನು ತಿಳಿಯೋಣ. ನಿಸರ್ಗದಲ್ಲಿನ ಪಂಚಮಹಾಭೂತಗಳಲ್ಲಿ (ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ಇವುಗಳಲ್ಲಿ) ಅನವಶ್ಯಕವಾಗಿ ಹಸ್ತಕ್ಷೇಪಮಾಡಿ ಸಮತೋಲನ ತಪ್ಪಿದರೆ, ಶಾರೀರಿಕ ಮಾಲಿನ್ಯವಾಗುತ್ತದೆ, ಸ್ವಭಾವದೋಷ ಹಾಗೂ ಅಹಂನಿಂದಾಗಿ ಮಾನಸಿಕ ಮಾಲಿನ್ಯವಾಗುತ್ತದೆ!

ಶಾರೀರಿಕ

ಅ. ಶರೀರದ ಕ್ಷಮತೆ ಕಡಿಮೆಯಾಗುವುದು: ಜೀವದ ಮೇಲೆ ಪರಿಸರ ಹಾಗೂ ಪರಿಸರದ ಮೇಲೆ ಜೀವವು ಅವಲಂಬಿಸಿರುತ್ತದೆ. ಇವೆರಡರಲ್ಲಿ ಒಂದರ ಸಮತೋಲನ ತಪ್ಪಿದರೂ, ಅದರ ಪರಿಣಾಮ ಪೂರ್ಣ ಸೃಷ್ಟಿ ಚಕ್ರದ ಮೇಲೆ ಆಗುತ್ತದೆ.

ಆ. ಆಯುರ್ವೇದಿಕ ಔಷಧಿಗಳು ಇಲ್ಲವಾಗುವುದು: ಇಂದಿನ ಕಾಲದಲ್ಲಿ ಪರಿಸರದಲ್ಲಿನ ತಮೋಕಣಗಳ ಪ್ರಮಾಣ ಹೆಚ್ಚಿರುವುದರಿಂದ ತಮೋಗುಣಕ್ಕೆ ಸಂಬಂಧಿಸಿದ ಗಿಡಗಳು ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗಿದ್ದು ಸತ್ವಗುಣಕ್ಕೆ ಸಂಬಂಧಿಸಿದ ಗಿಡಗಳ ಉತ್ಪತ್ತಿಯು ಕಡಿಮೆಯಾಗಿದೆ. ಆಯುರ್ವೇದಕ್ಕಾಗಿ ಬೇಕಾಗುವ ಔಷಧಿಯು ಸತ್ವಗುಣಕ್ಕೆ ಸಂಬಂಧಿಸಿದ್ದು ಅವುಗಳ ಉತ್ಪತ್ತಿಯು ಪರಿಸರ ಮಾಲಿನ್ಯದಿಂದ ಕಡಿಮೆಯಾಗಿದೆ. ಆದುದರಿಂದ ಯೋಗ್ಯ ಉಪಚಾರ ಮಾಡುವುದು ಅಸಾಧ್ಯವೇ ಆಗಿದೆ ಹಾಗೂ ಜೀವದ ಕ್ಷಮತೆಯು ಕಡಿಮೆಯಾಗಿದೆ.

ಇ. ಜೀವದ ಪಂಚತತ್ತ್ವಕ್ಕೆ ಸಂಬಂಧಿಸಿದ ಕರ್ಮೇಂದ್ರಿಯಗಳು ಕ್ಷೀಣವಾಗುವುದು: ಪಂಚತತ್ತ್ವದಲ್ಲಿ ತಮೋಗುಣದ ಪ್ರಮಾಣವು ಹೆಚ್ಚಾಗಿದೆ, ಅಂದರೆ ಪಂಚತತ್ತ್ವವು ಕ್ಷೀಣವಾಗಿದೆ. ಇದರಿಂದ ಇಂದು ಪಂಚತತ್ವದಲ್ಲಿ ತಮೋಗುಣವು ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ದುರ್ಬಲ ಶರೀರದ ಅಥವಾ ವ್ಯಾಧಿಗ್ರಸ್ತ ಜೀವಗಳು ಎಲ್ಲೆಡೆ ಕಾಣಸಿಗುತ್ತವೆ.

ಮಾನಸಿಕ

ಜೀವದ ಪರಿಸರದೊಂದಿಗಿನ ಏಕರೂಪತೆಯು ಸಾಧ್ಯವಾಗದಿರುವುದರಿಂದ ಮನೋಮಯ ಕೋಶದಲ್ಲಿರುವ ರಜ-ತಮ ಕಣಗಳ ಪ್ರಮಾಣವು ಹೆಚ್ಚುವುದು, ಜೀವದ ಉತ್ಸಾಹ ಕಡಿಮೆಯಾಗುವುದು, ಜಡತ್ವ ಹೆಚ್ಚಿರುವುದರಿಂದ, ಇಚ್ಛೆಯಿಲ್ಲದಿದ್ದರೂ ಕಾರ್ಯವಾಗುವುದು, ಜೀವದ ಸಹಜ ಕೃತಿಗಳೂ ಸ್ವಲ್ಪ ಪ್ರಮಾಣದಲ್ಲಿ ನಿಸರ್ಗದ ವಿರುದ್ಧವಾಗಿರುವುದರಿಂದ ಜೀವದ ಮನೋಮಯಕೋಶದಲ್ಲಿ ಪ್ರತಿಸಲ ಒತ್ತಡ ನಿರ್ಮಾಣವಾಗುವುದು, ಇವು ಮಾನಸಿಕ ದುಷ್ಪರಿಣಾಮಗಳಾಗಿವೆ.

Leave a Comment