ಪಂಢರಾಪುರದಲ್ಲಿ ಪಾಂಡುರಂಗ ಮೂರ್ತಿಯ ಸ್ಥಾಪನೆ


ಕರ್ನಾಟಕದ ವಿಜಯನಗರ ಸಾಮ್ರಾಜ್ಯದ ಅರಸರು ತಮ್ಮ ಸಾಮ್ರಾಜ್ಯಕ್ಕೆ ಪಾಂಡುರಂಗನ ಮೂರ್ತಿಯನ್ನು ತಂದರು ಮತ್ತು ತುಂಗಭದ್ರೆಯ ತೀರದಲ್ಲಿ ಸ್ಥಾಪಿಸಿದರು. ಏಕನಾಥ ಮಹಾರಾಜರ ಅಜ್ಜ ಭಾನುದಾಸ ಇವರು ಪಾಂಡುರಂಗನ ಭಕ್ತರಾಗಿದ್ದರು. ಅವರು ಆಧ್ಯಾತ್ಮದ ದೊಡ್ಡ ಅಧಿಕಾರಿಯಾಗಿದ್ದರು. ಅವರಿಗೆ ಪಾಂಡುರಂಗನು ಪ್ರಸನ್ನರಾಗಿ "ನಾನು ಕರ್ನಾಟಕದಲ್ಲಿ ಇದ್ದೀನಿ, ನೀನು ನನ್ನನ್ನು ಪಂಢರಪುರಕ್ಕೆ ಕರೆದುಕೊಂಡು ಹೋಗಿ ನನ್ನ ಸ್ಥಾಪನೆಯನ್ನು ಮಾಡು" ಎಂದು ಹೇಳಿದರು. ಹಾಗೆ ಭಾನುದಾಸನು ರಾಜನ ಬಳಿಗೆ ಹೋಗಿ ಮೂರ್ತಿಯನ್ನು ನೀಡಬೇಕೆಂದು ಬೇಡಿದನು. ರಾಜನಿಗೂ ಪಾಂಡುರಂಗನಿದ್ದ ದೃಷ್ಟಾಂತ ಸಿಕ್ಕಿತ್ತು. ಭಾನುದಾಸನ ಭಕ್ತಿಯನ್ನು ನೋಡಿ ಅವರಿಗೆ ಮೂರ್ತಿಯನ್ನು ನೀಡಿದರು. ಭಾನುದಾಸನು ಆ ಮೂರ್ತಿಯನ್ನು ಪಂಢರಪುರಕ್ಕೆ ಹೋಗಿ ಸ್ಥಾಪಿಸಿದರು.

Leave a Comment