ತಮಿಳು ಮಹಾಕವಿ ಕಂಬನ ಹಾಗೂ ಅವನ ಮಿತ್ರನಾದ ಓಟುಕ್ಕುತ್ತರಸ್ವತಂತ್ರವಾಗಿ ತಮಿಳಿನಲ್ಲಿ ರಾಮಾಯಣವನ್ನು ರಚಿಸುವುದು:ಕಂಬನತಮಿಳುನಾಡಿನ ಪ್ರತಿಭಾವಂತ ಹಾಗೂ ಸೂಕ್ಷ್ಮದರ್ಶಿ ಮಹಾಕವಿಯಾಗಿದ್ದನು. ಅವನಿಗೆ ಓಟುಕ್ಕುತ್ತನ ಎಂಬ ಹೆಸರಿನ ಮಿತ್ರನಿದ್ದನು. ಅವನೂ ಮಹಾನ ವಿದ್ವಾಂಸನಾಗಿದ್ದನು. ಕಂಬನನು ರಾಮಾಯಣವನ್ನು ರಚಿಸುತ್ತಿರುವುದರ ಬಗ್ಗೆ ತಿಳಿದಾಗ ಓಟುಕ್ಕುತ್ತರಗೂ ಸ್ಪೂರ್ತಿ ಬಂದು ಅವನೂ ತಮಿಳಿನಲ್ಲಿ ರಾಮಾಯಣ ರಚನೆಯನ್ನು ಆರಂಭಿಸಿದನು. ಇಬ್ಬರ ರಾಮಾಯಣವು ಸ್ವತಂತ್ರವಾಗಿ ಆರಂಭವಾಗಿ ಕಾಲಾನುಸಾರವಾಗಿ ಪೂರ್ಣವಾಯಿತು.
ಕಂಬನನ ರಾಮಾಯಣವು ಜನಪ್ರಿಯವಾಗುವುದು : ಕಂಬನನ ರಾಮಾಯಣವು ಜನಪ್ರಿಯವಾಯಿತು. ಕಂಬನನು ತನ್ನ ರಾಮಾಯಣವನ್ನು ಹಾಡಿದರೆ ಶ್ರೋತೃಗಳು ತಲ್ಲೀನರಾಗಿ ವಾಹ್ ವಾಹ್ ಎಂದು ಹೇಳುತ್ತಿದ್ದರು. ಕಂಬನನು ಹೋದಲ್ಲಿ ಅವನ ಆದರ, ಸನ್ಮಾನವಾಗುತ್ತಿತ್ತು. ಎಲ್ಲಕಡೆಯೂ ಅವನ ಜಯಕಾರವಾಗುತ್ತಿತ್ತು.
ಓಟುಕ್ಕುತ್ತರ ರಾಮಾಯಣವು ಜನಪ್ರಿಯವಾಗದ ಕಾರಣ ಅವನು ನಿರಾಶೆಯಿಂದ ತಾನು ಬರೆದ ರಾಮಾಯಣವನ್ನು ಸುಟ್ಟು ಅದರ ಬೂದಿಯನ್ನು ಮೈಗೆ ಹಚ್ಚಿ ಗೋಸಾವಿಯಾಗಲು ನಿರ್ಧರಿಸುವುದು : ಓಟುಕ್ಕುತ್ತರತನ್ನ ರಾಮಾಯಣವನ್ನು ಓದಲು ಕುಳಿತಾಗ ನಗಣ್ಯ ಶ್ರೋತೃಗಳಿರುತ್ತಿದ್ದರು. ಇದರಿಂದಾಗಿ ಓಟುಕ್ಕುತ್ತರನಿರಾಶೆಗೊಳ್ಳುತ್ತಿದ್ದನು. ಅವನಿಗೆ ತನ್ನ ಎಲ್ಲ ಶ್ರಮವೂ ವ್ಯರ್ಥವಾಯಿತು ಎಂದು ಅನಿಸುತ್ತಿತ್ತು. ತಾನು ಅಪೇಕ್ಷಿತ ರೀತಿಯಲ್ಲಿ ಜೀವಿಸಿ ಮರಣ ಹೊಂದುವೆನು ಎಂದು ವಿಚಾರ ಮಾಡಿ ಮಾಡಿ ಅವನಿಗೆ ಹಿಂಸೆಯಾಗುತ್ತಿತ್ತು. ಅವನ ಜೀವನದಲ್ಲಿ ಎಲ್ಲೆಡೆಯೂ ಅಂಧಕಾರ ಪಸರಿಸಿತು. ಕೊನೆಗೆ ಒಂದು ದಿನ ಓಟುಕ್ಕುತ್ತರತಾನು ರಚಿಸಿದ ರಾಮಾಯಣವನ್ನು ಸುಟ್ಟು ಆ ರಾಮಾಯಣದ ಬೂದಿಯನ್ನು ಬಳಿದುಕೊಂಡು ಗೋಸಾವಿಯಾಗಬೇಕೆಂದು ನಿರ್ಧರಿಸಿದನು.
ಓಟುಕ್ಕುತ್ತರತಾನು ರಚಿಸಿದ ರಾಮಾಯಣವನ್ನು ಸುಡುತ್ತಿರುವಾಗ ಕಂಬನನು ಅಲ್ಲಿಗೆ ಬರುವುದು ಹಾಗೂ ಅವನು ತನ್ನ ಮಿತ್ರನ ಕೈ ಹಿಡಿದು ಅವನನ್ನು ತಡೆಯುವುದು : ಈ ಕೆಟ್ಟ ವಿಷಯವು ಕಂಬನನ ಕಿವಿಗೆ ಬಿತ್ತು. ಅವನು ಧಾವಿಸಿ ಮಿತ್ರನ ಬಳಿ ಹೋದನು. ಅವನು ನೋಡಿದಾಗ ಓಟುಕ್ಕುತ್ತರತಾನು ರಚಿಸಿದ ರಾಮಾಯಣವನ್ನು ಸುಡುತ್ತಿದ್ದನು. ಕಂಬನನು 'ಅರೆ, ಹುಚ್ಚ ಏನು ಮಾಡುತ್ತಿರುವೆ ? ನೀನೇ ರಚಿಸಿರುವ ರಾಮಾಯಣವನ್ನು ಏಕೆ ಸುಡುತ್ತಿರುವೆ ?'ಎಂದು ಕೇಳಿದನು. ಅದಕ್ಕೆ ಓಟುಕ್ಕುತ್ತರ'ನಿನ್ನ ಮುಂದೆ ನಾನು ಒಂದು ಮಿಂಚು ಹುಳುವಾಗಿದ್ದೇನೆ, ನನ್ನ ರಾಮಾಯಣವನ್ನು ಯಾರೂ ಕೇಳುವುದಿಲ್ಲ. ಅದು ಧೂಳು ಹಿಡಿದು ಬಿದ್ದಿರುವುದಕ್ಕಿಂತಲೂ ಸುಟ್ಟು ಹೋದರೆ ಒಳ್ಳೆಯದು'ಎಂದು ಹೇಳಿದನು. ಕಂಬನನು ಓಟುಕ್ಕುತ್ತರ ಕೈಹಿಡಿದನು. ಆಗ ಓಟುಕ್ಕುತ್ತರ ರಾಮಾಯಣದಲ್ಲಿನ ಬೆಂಕಿಯಿಂದ ಸುಡದೇ ಉಳಿದ ಉತ್ತರಕಾಂಡವನ್ನು ಕಂಬನನು ತೆಗೆದುಕೊಂಡನು.
ಕಂಬನನು ಓಟುಕ್ಕುತ್ತರ ರಾಮಾಯಣದಲ್ಲಿನ ಉತ್ತರಕಾಂಡದಿಂದ ತನ್ನ ರಾಮಾಯಣದ ಕಾವ್ಯವನ್ನು ಪೂರ್ತಿಗೊಳಿಸಿವುದು : ಕಂಬನನು ಓಟುಕ್ಕುತ್ತರಗೆ 'ಹುಚ್ಚ, ನೀನು ನನ್ನ ಮಿತ್ರನಲ್ಲವೇ ! ಈ ಸ್ವಾಹಾಕಾರವನ್ನು ಮಾಡುವ ಮೊದಲು ನನಗೆ ಹೇಳಬೇಕಿತ್ತಲ್ಲವೇ ! ಈಗ ನಾನು ಹೇಳುವುದನ್ನು ಕೇಳು. ನಿನ್ನ ರಾಮಾಯಣವು ಪೂರ್ಣವಾಗಿದೆ. ನನ್ನ ರಾಮಾಯಣದ ಉತ್ತರಕಾಂಡವು ಪೂರ್ಣವಾಗಬೇಕಿದೆ. ಈಗ ನಾನು ಅದನ್ನು ರಚಿಸುವುದಿಲ್ಲ. ನನ್ನ ರಾಮಾಯಣಕ್ಕೆ ನಿನ್ನ ಈ ಉತ್ತರಕಾಂಡವನ್ನು ಜೋಡಿಸುತ್ತೇನೆ, ಅಂದರೆ ರಾಮಾಯಣವು ಪೂರ್ಣವಾಗುತ್ತದೆ. ಜನರು ನಮ್ಮಿಬ್ಬರನ್ನೂ ರಾಮಾಯಣ ಕರ್ತರೆಂದು ಗುರುತಿಸುತ್ತಾರೆ!. ಇದು ಮಿತ್ರಪ್ರೇಮದ ಆದರ್ಶವಾಗುವುದು !',ಎಂದು ಹೇಳಿದನು.
(ಆಧಾರ: ಸಾಪ್ತಾಹಿಕ ಜಯ ಹನುಮಾನ (ಜ್ಯೇಷ್ಠ ಕೃಷ್ಣ ಪಕ್ಷ ತ್ರಯೋದಶಿ, ಕಲಿಯುಗ ವರ್ಷ ೫೧೧೫(೬.೭.೨೦೧೩))