ಇತ್ತೀಚಿನ ಹೆಚ್ಚಿನ ಮಕ್ಕಳ ತಪ್ಪು ಆದರ್ಶ ಚಲನಚಿತ್ರ ನಟ-ನಟಿಯರು ಹಾಗೂ ಕ್ರೀಡಾಪಟುಗಳು! : ರಾಷ್ಟ್ರದ್ರೋಹದಂತಹ ಕೃತಿಗಳಲ್ಲಿ ಸಹಭಾಗಿಯಾಗಿರುವ ಬಹಳಷ್ಟು ನಟ-ನಟಿಯರು ಹಾಗೂ ಕ್ರೀಡಾಪಟುಗಳು ಬಹುತಾಂಶ ಮಕ್ಕಳ ಆದರ್ಶವಾಗಿರುವ ನಟ-ನಟಿಯರು ಹಾಗೂ ಕ್ರೀಡಾಪಟುಗಳು ಪ್ರತ್ಯಕ್ಷ ಜೀವನದಲ್ಲಿ ತಪ್ಪಾಗಿ ವರ್ತಿಸುತ್ತಾರೆ, ಇದರ ಕೆಲವು ಉದಾಹರಣೆಗಳನ್ನು ನೋಡೋಣ.
ಅ. ಓರ್ವ ನಟನ ಮನೆಯಲ್ಲಿ ೧೯೯೩ರ ಮುಂಬೈ ಬಾಂಬಸ್ಪೋಟದ ಪ್ರಕರಣದ ಕಾನೂನುಬಾಹಿರವಾದ ಎಕೆ-೪೭ ಬಂದೂಕು ದೊರಕಿತ್ತು. ಈ ಪ್ರಕರಣದಲ್ಲಿ ಅವನನ್ನು ಟಾಡಾ ನ್ಯಾಯಾಲಯವು ದೋಷಿಯೆಂದು ತಿರ್ಮಾನಿಸಿತ್ತು.
ಆ. ಓರ್ವ ನಟನು ಕಾನೂನುಬಾಹಿರವಾಗಿ ಅರಣ್ಯದಲ್ಲಿರುವ ಕೃಷ್ಣ ಮೃಗವನ್ನು ಬೇಟೆಯಾಡಿದ್ದನು.
ಇ. ಓರ್ವ ನಟನು ತಾನು ಅನಿವಾಸಿ ಭಾರತೀಯ ಎಂಬುದನ್ನು ತೋರಿಸಿ ಸರಕಾರದ ಕೋಟ್ಯಾಂತರ ರೂಪಾಯಿಗಳ ಕರದಿಂದ ಮುಕ್ತನಾದನು.
ಈ. ಓರ್ವ ಮಹಿಳಾ ಬ್ಯಾಡಮಿಂಟನ ಪಟು ಸ್ಪರ್ಧೆಯ ಸಂದರ್ಭದಲ್ಲಿ ಹಿಂದುಸ್ಥಾನದ ರಾಷ್ಟ್ರಧ್ವಜದ ಬಳಿ ಕಾಲಿಟ್ಟು ಕುಳಿತಿದ್ದಳು.
ಉ. ಕೋಟ್ಯಾಂತರ ರೂಪಾಯಿ ಗಳಿಸುವ ಓರ್ವ ಕ್ರಿಕೇಟಪಟು ತನಗೆ ದೊರೆತ ವಾಹನವನ್ನು ಭಾರತಕ್ಕೆ ತರಲು ತೆರಿಗೆ ವಿನಾಯತಿ ನೀಡಬೇಕು ಎಂದು ಹೇಳಿದ್ದನು.
ಮಕ್ಕಳೇ, ಇಂತಹ ರಾಷ್ಟ್ರದ್ರೋಹವನ್ನು ಮಾಡುವವರ ಆದರ್ಶವನ್ನಿಟ್ಟುಕೊಳ್ಳುವುದು ಎಂದರೆ ಅವರ ರಾಷ್ಟ್ರದ್ರೋಹಿ ಕಾರ್ಯಕ್ಕೆ ಬೆಂಬಲ ನೀಡುವಂತಾಗಿದೆ, ಎಂಬುದನ್ನು ಗಮನದಲ್ಲಿಡಿರಿ !
ಮಕ್ಕಳು ಯಾರನ್ನು ಆದರ್ಶವಾಗಿಟ್ಟುಕೊಳ್ಳಬೇಕು ?
ಬಹಳಷ್ಟು ಜನರು ಉಚ್ಛ ಶಿಕ್ಷಣವನ್ನು ಪಡೆದು ಕೇವಲ ಹಣ, ಗಾಡಿ ಹಾಗೂ ಬಂಗಲೆಯನ್ನು ಗಳಿಸುತ್ತಾರೆ ಹಾಗೂ ಒಂದು ದಿನ ಎಲ್ಲರಂತೆಯೇ ಸತ್ತುಹೋಗುತ್ತಾರೆ, ಆದರೆ ಬಹಳಷ್ಟು ಜನರು ಶಿಕ್ಷಣವನ್ನು ಪಡೆದು ಅದನ್ನು ರಾಷ್ಟ್ರ ಹಾಗೂ ಧರ್ಮಕ್ಕಾಗಿ ಉಪಯೋಗಿಸುತ್ತಾರೆ. ತನು-ಮನ-ಧನ, ಅಂತೆಯೇ ಪ್ರಸಂಗಕ್ಕೆ ಅನುಸಾರವಾಗಿ ಪ್ರಾಣವನ್ನೂ ಅರ್ಪಿಸಿ ಅಮರರಾಗುತ್ತಾರೆ. ಮಕ್ಕಳೇ, ನಿಮ್ಮ ಆದರ್ಶವು ಮುಂದಿನಂತಿರಬೇಕು.
೧. ಅಸಹ್ಯ ಸಂಕಟಗಳನ್ನು ಸಹಿಸಿಯೂ ದೇವರ ನಾಮಜಪವನ್ನು ಬಿಡದಿರುವ : ಭಕ್ತ ಪ್ರಹ್ಲಾದ
೨. ತಪಸ್ಸು ಮಾಡಿ ಶ್ರೇಷ್ಠ ಪದವಿಯನ್ನು ಪಡೆದ : ಬಾಲಕ ಧ್ರುವ
೩. ಕೇವಲ ೧೬ ವರ್ಷದ ವಯಸ್ಸಿನಲ್ಲಿ ‘ಜ್ಞಾನೇಶ್ವರಿ’ಯಂತಹ ಜಗನ್ಮಾನ್ಯ ಧರ್ಮಗ್ರಂಥವನ್ನು ಬರೆದ : ಸಂತ ಜ್ಞಾನೇಶ್ವರ
ಮಕ್ಕಳೇ, ರಾಷ್ಟ್ರ ಮತ್ತು ಧರ್ಮಕ್ಕಾಗಿ ಜೀವನ ಮುಡಿಪಾಗಿಡುವವರ ಜೀವನವೇ ಆದರ್ಶವಾಗಿದೆ. ನೀವು ಕೂಡ ನಟ-ನಟಿಯರ, ಕ್ರೀಡಾಪಟುಗಳ ಆದರ್ಶವಿಟ್ಟುಕೊಳ್ಳುವ ಬದಲು, ರಾಷ್ಟ್ರಪುರುಷರ, ಕ್ರಾಂತಿಕಾರಿಗಳ, ಸಂತರ ಆದರ್ಶವನ್ನು ಇಟ್ಟುಕೊಂಡು ಹಿಂದೂಸ್ಥಾನವನ್ನು ಸುಸಂಸ್ಕೃತ, ಆದರ್ಶ ಮತ್ತು ಬಲಶಾಲಿಯಾಗಿಸಿ!