ಮಕ್ಕಳೇ, ಸಂತರ ಚರಿತ್ರೆಗಳನ್ನು ಓದಿರಿ !
ಹಿಂದುಸ್ಥಾನವು ಸಂತರ ಭೂಮಿಯಾಗಿದೆ. ಹಿಂದುಸ್ಥಾನದಲ್ಲಿ ಸಂತ ಜ್ಞಾನೇಶ್ವರ, ಆದಿ ಶಂಕರಾಚಾರ್ಯ, ಮಧ್ವಾಚಾರ್ಯ,ಪುರಂದರದಾಸ,ಸಂತ ತುಕಾರಾಮ, ಸಮರ್ಥ ರಾಮದಾಸಸ್ವಾಮಿ, ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ ಮುಂತಾದ ಅನೇಕ ಸಂತರು ಆಗಿಹೋಗಿದ್ದಾರೆ.
ಅ. ಸಂತರ ಚರಿತ್ರೆಯಿಂದ ಆದರ್ಶಗಳು ನಿರ್ಮಾಣವಾಗುವುದು : ಇಂದು ಸಮಾಜದ ಎದುರು ಯಾವುದೇ ಆದರ್ಶವಿಲ್ಲ. ಇದರಿಂದಾಗಿ ಸಮಾಜವು ದಿಶಾಹೀನವಾಗಿದೆ. ಸಮಾಜದ ಎದುರು 'ನಾವು ಯಾರನ್ನು ಅನುಕರಿಸಬೇಕು' ಎಂಬ ಪ್ರಶ್ನೆಯು ನಿರ್ಮಾಣವಾಗಿದೆ. ಸಂತರ ಚರಿತ್ರೆಗಳಿಂದ ಎಲ್ಲರ ಎದುರು ಯೋಗ್ಯ ಆದರ್ಶಗಳು ನಿರ್ಮಾಣವಾಗುತ್ತವೆ. ಸಂತರ ಚರಿತ್ರೆಗಳನ್ನು ಓದಿ ಅವರನ್ನು ಹೇಗೆ ಅನುಕರಿಸುವುದು ಎಂಬುದು ತಿಳಿಯುತ್ತದೆ.
ಆ. ಸಂತರ ಮಾರ್ಗದರ್ಶನವನ್ನು ಓದಿ ವಾಚಕರು ಉತ್ತಮ ಮಾರ್ಗದ ಕಡೆಗೆ ಹೊರಳುವುದು : ಸಂತರು ಆಗಾಗ ಸಮಾಜಕ್ಕೆ ಯೋಗ್ಯ ಮಾರ್ಗದರ್ಶನವನ್ನು ನೀಡಿ ಉತ್ತಮ ಮಾರ್ಗದ ಕಡೆಗೆ ಹೊರಳಿಸಿದ್ದಾರೆ. ಆ ಉದಾಹರಣೆಗಳನ್ನು ಓದಿ ನಾವೂ ಉತ್ತಮ ಮಾರ್ಗದ ಕಡೆಗೆ ಹೊರಳುತ್ತೇವೆ, ಉದಾ. ಸಂತ ಜ್ಞಾನೇಶ್ವರ ಮಹಾರಾಜರು ಕೋಣದಿಂದ ವೇದವನ್ನು ಹೇಳಿಸಿ ಎಲ್ಲ ಪ್ರಾಣಿಮಾತ್ರರಲ್ಲಿ ಈಶ್ವರನಿರುವುದರಿಂದ ಎಲ್ಲರನ್ನೂ ಪ್ರೀತಿಸಲು ಕಲಿಸುವುದು. ವಿಠ್ಠಲನ ಭಕ್ತಿಯಲ್ಲಿ ಸದಾ ಮೈಮರೆಯುವ ಸಂತ ತುಕಾರಾಮರು ಸುಖ-ದುಃಖದ ಪ್ರಸಂಗದಲ್ಲಿ ದೇವರನ್ನು ನೆನೆಯಿರಿ ಎಂಬುದನ್ನು ಕಲಿಸುವುದು, ಭಕ್ತನ ಆರ್ತ ಕರೆಗೆ ಭಗವಂತ ಸ್ಪಂದಿಸುತ್ತಾನೆ ಎಂದು ಕನಕದಾಸರ ಜೀವನದಿಂದ ಕಲಿಯಲು ಸಿಗುತ್ತದೆ.
ಇ. ಸಂತರ ಚರಿತ್ರೆಯ ಅಧ್ಯಯನ ಮಾಡುವುದರಿಂದ ಈಶ್ವರನ ಮೇಲಿನ ಶೃದ್ಧೆಯು ವೃದ್ಧಿಯಾಗವುದು: ಸಂತ ಚರಿತ್ರೆಯ ಅಧ್ಯಯನಮಾಡಿದರೆ ಈಶ್ವರನ ಮೇಲಿನ ನಮ್ಮಶೃದ್ಧೆಯು ವೃದ್ಧಿಯಾಗತೊಡಗುತ್ತದೆ. ಸಂತ ಚರಿತ್ರೆ ಹಾಗೂ ಸಂತರ ವಿಚಾರಗಳ ಅಧ್ಯಯನ ಮಾಡಿದರೆ ಜೀವನದಲ್ಲಿ ಈಶ್ವರನ ಉಪಾಸನೆ ಮಾಡುವುದರ ಮಹತ್ವವು ತಿಳಿಯುತ್ತದೆ. ಈಶ್ವರನ ಉಪಾಸನೆ ಮಾಡುವುದರಿಂದ ನಮ್ಮಲ್ಲಿ ಸದ್ಗುಣಗಳು ವೃದ್ಧಿಯಾಗಿ ಜೀವನವು ಆನಂದಮಯವಾಗುತ್ತದೆ.
ಮಕ್ಕಳೇ, ಸಂತರು ಸಾಧನೆ ಹಾಗೂ ಗುರು ಸೇವೆಯನ್ನು ಹೇಗೆ ಮಾಡಿದರು ಎಂಬುದರ ಬಗ್ಗೆ ಓದಿರಿ ಹಾಗೂ ನೀವೂ ಅದೇ ರೀತಿಯಲ್ಲಿ ಸೇವೆ ಹಾಗೂ ಸಾಧನೆಯನ್ನು ಮಾಡಲು ಆರಂಭಿಸಿರಿ!
ಈ. ಸಂತರು ಬರೆದ ಗ್ರಂಥಗಳನ್ನು ಓದಬಹುದು : ಮಕ್ಕಳೇ, ಸಂತರ ಚರಿತ್ರೆಯೊಂದಿಗೆ ಸಂತರು ಬರೆದ ಗ್ರಂಥಗಳನ್ನೂ ಓದಬಹುದು. ಸಂತರು ಬರೆದ ಗ್ರಂಥಗಳಲ್ಲಿ ಈಶ್ವರನ ಚೈತನ್ಯವಿರುವುದರಿಂದ ಅವುಗಳನ್ನು ಓದುವುದರಿಂದ ಜ್ಞಾನದೊಂದಿಗೆ ಚೈತನ್ಯವೂ ಲಭಿಸುತ್ತದೆ.ಆದುದರಿಂದ ಇಂತಹ ಗ್ರಂಥಗಳನ್ನು ಅವಶ್ಯವಾಗಿ ಓದಿ!