ಮಾಘ ಶುಕ್ಲ ಪಕ್ಷ ಚತುರ್ಥಿಯಂದು ಗಣೇಶ ಲಹರಿಗಳು ಪ್ರಪ್ರಥಮವಾಗಿ ಪೃಥ್ವಿಯನ್ನು ತಲುಪಿದವು (ಅಂದರೆ ಗಣೇಶ ಜನಿಸಿದ ದಿನ). ಆ ಸಮಯದಿಂದ ಶ್ರೀ ಗಣೇಶ ಮತ್ತು ಚತುರ್ಥಿಯು ಅವಿಭಾಜ್ಯವಾಗಿವೆ. 'ಮಾಘ ಶುಕ್ಲ ಚತುರ್ಥಿಯನ್ನು' ಶ್ರೀ ಗಣೇಶ ಜಯಂತಿ' ಎಂದು ಆಚರಿಸಲಾಗುತ್ತದೆ. ಇತರ ದಿನಗಳ ತುಲನೆಯಲ್ಲಿ ಈ ದಿನದಂದು ಶ್ರೀ ಗಣೇಶ ತತ್ತ್ವವು ೧೦೦೦ ಪಟ್ಟು ಹೆಚ್ಚು ಕಾರ್ಯರತವಾಗಿರುತ್ತದೆ. ಅನೇಶ್ ಮಹಾನ್ ಗಣೇಶ ಭಕ್ತರು ಕೂಡ ಇದೆ ದಿನದಂದು ಪೃಥ್ವಿಯ ಮೇಲೆ ಜನಿಸಿದ ದಿನವೂ ಹೌದು.
ಗಣೇಶ ಜಯಂತಿಯಂದು ಮಾಡಬೇಕಾದ ಉಪಾಸನೆ
ಈ ದಿನದಂದು ೩ ರಿಂದ ೯ ಮಾಲೆ ಶ್ರೀ ಗಣಪತಿಯ ನಾಮವನ್ನು ಭಾವಪೂರ್ಣವಾಗಿ ಜಪಿಸಲು ಪ್ರಯತ್ನಿಸಬೇಕು. ಅದೇ ರೀತಿ ಗಣಪತಿಯ ಪ್ರತಿಮೆ ಅಥವಾ ಮೂರ್ತಿಯ ಪೂಜೆ ಮಾಡಿದಲ್ಲಿ, ಗಣಪತಿಯ ಶಕ್ತಿ ಮತ್ತು ಚೈತನ್ಯದ ಅಧಿಕ ಪಡೆಯಬಹುದು. ಶ್ರೀ ಗಣಪತಿ ಅಥರ್ವಶೀರ್ಷ ಪಠಿಸಿದರೆ ಕೂಡ ಈ ಲಾಭವನ್ನು ಪಡೆಯಬಹುದು.
ಶುಭಕಾರ್ಯಗಳಲ್ಲಿ ಗಣೇಶನನ್ನು ಏಕೆ ಪ್ರಥಮ ಪೂಜೆಯನ್ನು ಸಲ್ಲಿಸುತ್ತಾರೆ?
ಗಣಪತಿಯು ದಿಕ್ಕುಗಳ ಅಧಿಪತಿ. ಗಣೇಶ ಪೂಜೆಯಿಂದ, ನಾವು ಆಹ್ವಾನಿಸುವ ದೇವತೆಯು ಪೂಜೆಯ ಸ್ಥಳಕ್ಕೆ ಆಗಮಿಸಲು ಆಯಾ ದಿಕ್ಕು ಮುಕ್ತವಾಗುತ್ತದೆ. ಅಲ್ಲದೆ, ಮನುಷ್ಯರು ಮಾತನಾಡುವ (ನಾದ) ಭಾಷೆಯನ್ನು ದೇವತೆಗಳ (ಪ್ರಕಾಶ) ಭಾಷೆಗೆ ರೂಪಾಂತರಿಸಿ, ಗಣಪತಿಯು ನಮ್ಮ ಪ್ರಾರ್ಥನೆಯನ್ನು ಅವರಿಗೆ ತಲುಪಿಸುತ್ತಾನೆ. ಗಣಪತಿಯನ್ನು ವಿಘ್ನಹರ್ತಾ ಎಂದು ಕೂಡ ಕರೆಯುತ್ತಾರೆ.
ಗಣಪತಿಯ ವಾಹನ
ವೃ – ವಹ ಈ ಶಬ್ದದಿಂದ ವಾಹನ ಎಂಬ ಶದದ ಉತ್ಪತ್ತಿ ಆಯಿತು. ದೇವತೆಗಳ ವಾಹನಗಳು ಸಮಯ ಮತ್ತು ಕಾರ್ಯಕ್ಕನುಸಾರ ಬದಲಾಗುತ್ತವೆ. 'ಮೂಷಿಕ' ಗಣಪತಿಯ ನಿತ್ಯ ವಾಹನ. ಆದರೆ ಗಣಪತಿಗೆ ಇತರ ವಾಹನಗಳು ಕೂಡ ಇವೆ. ಉದಾಹರಣೆಗೆ, ಹೇರಂಬ ಗಣಪತಿಯ ವಾಹನ ಸಿಂಹವಾದರೆ (ಯುದ್ಧಕಾಲದಲ್ಲಿ ಕೂಡ ಇದೇ ವಾಹನವಾಗಿದೆ), ಮಯೂರೇಶ್ವರ ಗಣಪತಿಯ ವಾಹನ ಒಂದು ನವಿಲು.
ವಿದ್ಯಾರ್ಥಿ ಮಿತ್ರರೇ, ಗಣಪತಿಯ ಶಕ್ತಿ ದೊರೆಯಲು ಪ್ರತಿದಿನ ಇವುಗಳನ್ನು ಮಾಡಿ !
೧. ಅಥರ್ವಶೀರ್ಷ ಪಠಿಸಿ : ಮಿತ್ರರೇ, ನಿಮ್ಮ ಮಾತಿನಲ್ಲಿ ಚೈತನ್ಯವಿದ್ದರೆ, ನೀವು ಮಾತನಾಡುವಾಗ ಇತರರಿಗೆ ಮುದವೆನಿಸುತ್ತದೆ. ಅಥರ್ವಶೀರ್ಷ ಪಠಿಸುವುದರಿಂದ ನಿಮ್ಮ ಉಚ್ಚಾರ ಸ್ಪಷ್ಟವಾಗುತ್ತದೆ. ಆದುದರಿಂದ ಅಥರ್ವಶೀರ್ಷ ಪಠಿಸಿ.
೨. ಅಧಿಕಾಧಿಕ ಪ್ರಾರ್ಥನೆಗಳನ್ನು ಮಾಡಿ : ನಾವು ಉಪಯೋಗಿಸುವ ಭಾಷೆಯನ್ನು ನಾದಭಾಷೆ ಎಂದು ಕರೆಯುತ್ತಾರೆ. ಇತರ ದೇವತೆಗಳ ತುಲನೆಯಲ್ಲಿ ಶ್ರೀ ಗಣೇಶನಿಗೆ ನಮ್ಮ ಭಾಷೆಯು ಅರ್ಥವಾಗುತ್ತದೆ, ಆದುದರಿಂದ ಅವನ ಕೃಪೆಯನ್ನು ಸಂಪಾದಿಸಲು ಶ್ರೀ ಗಣೇಶನ ಪ್ರಾರ್ಥನೆಯನ್ನು ಆದಷ್ಟು ಹೆಚ್ಚು ಮಾಡೋಣ.
೩. ಮಾನಸಪೂಜೆ : ಮನಸ್ಸಿನಲ್ಲಿಯೇ ಮಾಡುವ ಪೂಜೆಯನ್ನು ಮಾನಸ ಪೂಜೆ ಎನ್ನುತ್ತಾರೆ. ಈ ರೀತಿ ಮಾಡುವ ಪೂಜೆಗೆ ಯಾವುದೇ ಕಟ್ಟುಪಾಡುಗಳು ಇರುವುದಿಲ್ಲ. ಮಾನಸ ಪೂಜೆಯಿಂದ ಮನಸ್ಸಿನ ಉತ್ಸಾಹ ವೃದ್ಧಿಸುತ್ತದೆ. ಈ ಪೂಜೆಯಲ್ಲಿ ನಮಗೆ ಇಷ್ಟವಿರುವ ವಸ್ತು, ವಿಷಯಗಳನ್ನು ಅರ್ಪಿಸಬಹುದು. ಮನಸ್ಸಿನಲ್ಲಿ ಸತತವಾಗಿ ಶ್ರೀ ಗಣಪತಿಯ ಅನುಸಂಧಾನದಲ್ಲಿದ್ದು ಆನಂದವನ್ನು ಅನುಭವಿಸಬಹುದು.
(ಆಧಾರ : ಸನಾತನದ ಗ್ರಂಥ 'ಶ್ರೀ ಗಣಪತಿ')
ವಿದ್ಯಾರ್ಥಿಗಳೇ, ಶ್ರೀ ಸಂಕಷ್ಟನಾಶನ ಗಣಪತಿ ಸ್ತೋತ್ರದ ಪಾರಾಯಣ ಮಾಡಿ!