ಗಂಗೆಯನ್ನು ಸ್ತುತಿಸುವ ಶ್ಲೋಕಗಳು

ಗಂಗಾಸದೃಶಂ ತೀರ್ಥಂ ನ ದೇವಃ ಕೇಶವಾತ್ ಪರಃ |

ಬ್ರಾಹ್ಮಣೇಭ್ಯ: ಪರಂ ನಾಸ್ತಿ ಎವಮಾಹ ಪಿತಾಮಹಃ ||


-ಮಹಾಭಾರತ, ಪರ್ವ ೩, ಅಧ್ಯಾಯ ೮೩, ಶ್ಲೋಕ ೯೬

ಅರ್ಥ : ಗಂಗೆಯಂತಹ ತೀರ್ಥವಿಲ್ಲ, ವಿಷ್ಣುವಿನಂತಹ ದೇವರಿಲ್ಲ, ಬ್ರಹ್ಮನನ್ನು ಅರಿತವನಷ್ಟು ಶ್ರೇಷ್ಠರು ಯಾರೂ ಇಲ್ಲ ಎಂದು ಬ್ರಹ್ಮದೇವರು ಹೇಳಿದ್ದಾರೆ.

೨. ಆದಿಶಂಕರಾಚಾರ್ಯರು ರಚಿಸಿದ ಗಂಗಾ ಶ್ಲೋಕ

ವರಮಿಹ ನೀರೆ ಕಮಠೋ ಮೀನಃ ಕಿಂ ವಾ ತೀರೆ ಶರಟಃ ಕ್ಷೀಣಃ |

ಅಥವಾ ಶ್ವಪಚೊ ಮಲೀನೊ ದೀನಸ್ತವ ನ ಹಿ ದೂರೆ ನೃಪತಿಕುಲೀನಃ || (ಶ್ಲೋಕ ೧೧)

ಅರ್ಥ : ಹೇ ಗಂಗೆ, ನಿನ್ನಿಂದ ದೂರ ಹೋಗಿ ಸನ್ನಡತೆಯ ರಾಜನಾಗುವುದಕ್ಕಿಂತಲೂ ನಿನ್ನ ಈ ನೀರಿನಲ್ಲಿನ ಆಮೆ ಅಥವಾ ಮೀನಾಗುವುದು ಅಥವಾ ನಿನ್ನ ತೀರದಲ್ಲಿ ವಾಸಿಸುವ ಹರಿದಾಡುವ ಕ್ಷುದ್ರ ಪ್ರಾಣಿ ಅಥವಾ ದೀನ-ದುರ್ಬಲ ಚಾಂಡಾಲನಾಗುವುದು ಎಂದಿಗೂ ಶ್ರೇಷ್ಠವೇ ಆಗಿದೆ.

೩. ಮಹಾಭಾರತದಲ್ಲಿ (ಪರ್ವ ೩, ಅಧ್ಯಾಯ ೮೩, ಶ್ಲೋಕ ೯೭ ರಲ್ಲಿ) ಭೀಷ್ಮನಿಗೆ ಪುಲಸ್ತ್ಯ ಋಷಿಗಳು ಹೇಳುವುದು

ಯತ್ರ ಗಂಗಾ ಮಹಾರಾಜ ಸ ದೇಶಸ್ತತ್ತಪೊವನಮ್ |

ಸಿದ್ಧಿಕ್ಷೇತ್ರಂ ಚ ತಜ್ಞೇಯಂ ಗಂಗಾತೀರಸಮಾಶ್ರಿತಂ ||

ಅರ್ಥ : ಹೇ ಮಹಾರಾಜ, 'ಗಂಗೆಯು ಎಲ್ಲಿಂದ ಹರಿಯುತ್ತಾಳೆಯೋ, ಆ ದೇಶ ಹಾಗೂ ಗಂಗಾತೀರದಲ್ಲಿರುವ ತಪೋವನವು ಸಿದ್ಧಿಕ್ಷೇತ್ರವಾಗಿದೆ' ಎಂದು ತಿಳಿಯಬೇಕು.

೪.

ತೀರಾದ್ಗವ್ಯೂತಿಮಾತ್ರಂ ತು ಪರಿತಃ ಕ್ಷೇತ್ರಮುಚ್ಯತೆ ||

ತೀರಂ ತ್ಯಕ್ತ್ವಾ ವಸೆತ್ಕ್ಷೇತ್ರೆ ತೀರೆ ವಾಸೊ ನ ಚೆಷ್ಯತೆ |
ನಾರದಪುರಾಣ, ಉತ್ತರಖಂಡ, ಅಧ್ಯಾಯ ೪೩, ಶ್ಲೋಕ ೧೧೯,೧೨೦

ಅರ್ಥ : ಗಂಗೆಯ ತೀರದಿಂದ ಒಂದು ಗವ್ಯೂತಿಯ ವರೆಗಿನ ಭಾಗಕ್ಕೆ ಕ್ಷೇತ್ರ ಎಂದು ಹೇಳುತ್ತಾರೆ. (೧ ಗವ್ಯೂತಿ = ೨ ಮೈಲು = ೬ ಕಿ.ಮಿ) ಗಂಗೆಯ ತೀರವನ್ನು ಬಿಟ್ಟು ಈ ಕ್ಷೇತ್ರದಲ್ಲಿ ವಾಸಿಸಬೇಕು. ಗಂಗೆಯ ತೀರದಲ್ಲಿ ವಾಸಿಸುವುದು ಯೋಗ್ಯವಲ್ಲ.

೫. ಮಹಾಭಾರತದಲ್ಲಿ ವರ್ಣಿಸಿದರೀತಿ(ಪರ್ವ ೩, ಅಧ್ಯಾಯ ೮೨, ಶ್ಲೋಕ ೬೫ ರಲ್ಲಿ)

ಗಂಗೋದ್ಭೇದಂ ಸಮಾಸಾದ್ಯ ತ್ರಿರಾತ್ರೊಪೋಷಿತೊ ನರಃ |

ವಾಜಪೇಯಮವಾಪ್ನೊತಿ ಬ್ರಹ್ಮ
ಭೂತೊ ಭವೇತ್ ಸದಾ ||

ಅರ್ಥ : ಗಂಗೋದ್ಭೇದತೀರ್ಥದಲ್ಲಿ ಬಂದು ಯಾವ ಮನುಷ್ಯನು ೩ ರಾತ್ರಿ ಉಪವಾಸ ಮಾಡುತ್ತಾನೆಯೋ, ಅವನಿಗೆ ವಾಜಪೇಯ ಯಜ್ಞದ ಫಲ ಸಿಗುತ್ತದೆ ಹಾಗೂ ಅವನು ಸದಾಕಾಲ ಬ್ರಹ್ಮರೂಪನಾಗುತ್ತಾನೆ.

೬. ಗಂಗಾದ್ವಾರ, ಪ್ರಯಾಗ ಹಾಗೂ ಗಂಗಾಸಾಗರಸಂಗಮದಲ್ಲಿ ಗಂಗಾಸ್ನಾನದ ಮಹಾತ್ಮೆ

ಸರ್ವತ್ರ ಸುಲಭಾ ಗಂಗಾ ತ್ರಿಷು ಸ್ಥಾನೇಷು ದುರ್ಲಭಾ |

ಗಂಗಾದ್ವಾರೆ ಪ್ರಯಾಗೆ ಚ ಗಂಗಾಸಾಗರಸಂಗಮೆ |

ತತ್ರ ಸ್ನಾತ್ವಾ ದಿವಂ ಯಾಂತಿ
ಯೆ ಮೃತಾಸ್ತೇಪುನರ್ಭವಾಃ ||

ಗರುಪುರಾಣ, ಅಂಶ ೧, ಅಧ್ಯಾಯ ೮೧, ಶ್ಲೋಕ ೧ ಮತ್ತು ೨

ಅರ್ಥ : ಗಂಗೆಯು ಭೂಮಿಯ ಮೇಲೆ ಅವತರಿಸಿದಲ್ಲಿಂದಪೂರ್ವಸಾಗರವನ್ನು ತಲುಪುವವರೆಗೂ ಎಲ್ಲೆಲ್ಲಿಯೂ ಸುಲಭವಾಗಿ ದರ್ಶನವಿತ್ತರೂ;ಗಂಗಾದ್ವಾರ, ಪ್ರಯಾಗ ಹಾಗೂ ಗಂಗಾಸಾಗರಸಂಗಮ ಈ ಮೂರು ಕಡೆಗಳಲ್ಲಿ ದುರ್ಲಭವಾಗಿದ್ದಾಳೆ. ಅಲ್ಲಿ ಸ್ನಾನ ಮಾಡುವವರು ಸ್ವರ್ಗಕ್ಕೆ ಹೋಗುತ್ತಾರೆ ಹಾಗೂ ದೇಹತ್ಯಾಗ ಮಾಡುವವರ ಪುನರ್ಜನ್ಮ ದೂರವಾಗುತ್ತದೆ.

೭. ಬ್ರಹ್ಮಾಂಡಪುರಾಣದಲ್ಲಿ (ಅಧ್ಯಾಯ ೧, ಶ್ಲೋಕ ೫೩೫ ರಲ್ಲಿ) ಗಂಗಾಜಲವನ್ನು ಮಲಿನಗೊಳಿಸುವ ಕರ್ಮಗಳನ್ನು ಮುಂದಿನಂತೆ ಸ್ಪಷ್ಟ ಶಬ್ದಗಳಲ್ಲಿ ನಿಷೇಧಿಸಲಾಗಿದೆ.

ಶೌಚಮಾಚಮನಂ ಕೇಶನಿರ್ಮಾಲ್ಯಮಘಮರ್ಷಣಮ್ |

ಗಾತ್ರಸಂವಾಹನಂ ಕ್ರೀಡಾ ಪ್ರತಿಗ್ರಹಮಥೊ ರತಿಮ್ ||

ಅನ್ಯತೀರ್ಥರತಿಂ ಚೈವ ಅನ್ಯತೀರ್ಥಪ್ರಶಂಸನಮ್ |

ವಸ್ತ್ರತ್ಯಾಗಮಥಾಘಾತಸಂತಾರಂ ಚ ವಿಶೇಷತಃ ||

ಅರ್ಥ : ಗಂಗೆಯ ಸಮೀಪದಲ್ಲಿ ಶೌಚ ಮಾಡುವುದು, ಬಾಯಿ ಮುಕ್ಕಳಿಸುವುದು, ಕೂದಲು ಬಾಚುವುದು ಅಥವಾ ವಿಸರ್ಜಿಸುವುದು, ನಿರ್ಮಾಲ್ಯವನ್ನು ಎಸೆಯುವುದು, ಮಲ-ಮೂತ್ರ ವಿಸರ್ಜನೆ ಮಾಡುವುದು, ಹಾಸ್ಯವಿನೋದ ಮಾಡುವುದು, ದಾನ ಪಡೆಯುವುದು, ಮೈಥುನ, ಇತರ ತೀರ್ಥಗಳ ಬಗ್ಗೆ ಪ್ರೇಮ ವ್ಯಕ್ತಪಡಿಸುವುದು, ಇತರ ತೀರ್ಥಗಳ ಸ್ತುತಿ, ಬಟ್ಟೆಗಳನ್ನು ತ್ಯಜಿಸುವುದು, ಗಂಗಾಜಲವನ್ನು ಎಸೆಯುವುದು ಹಾಗೂ ಗಂಗೆಯಲ್ಲಿ ಜಲಕ್ರೀಡೆ ಈ ೧೪ ಕರ್ಮಗಳನ್ನು ಗಂಗೆಯಲ್ಲಿ ಅಥವಾ ಗಂಗೆಯ ಸಮೀಪದಲ್ಲಿ ಮಾಡುವುದು ನಿಷಿದ್ಧ. ಗಂಗೆಯಲ್ಲಿ ಅಥವಾ ಗಂಗೆಯ ಸಮೀಪದಲ್ಲಿ ನಿಷಿದ್ಧವಾಗಿರುವ ೧೪ ಕರ್ಮಗಳಲ್ಲಿನ ೮ ಕರ್ಮಗಳು ಜಲಮಾಲಿನ್ಯದೊಂದಿಗೆ ಸಂಬಂಧಿಸಿವೆ.

Leave a Comment