ಮಿತ್ರರೇ, ಯಾವುದೇ ಶುಭಕಾರ್ಯ ಆರಂಭಿಸುವ ಮೊದಲು ನಾವು ದೇಶ-ಕಾಲಕಥನ ಮಾಡುತ್ತೇವೆ. ಅದರಲ್ಲಿ ಕಲ್ಪ, ಮನ್ವಂತರ, ಯುಗ, ಮಹಾಯುಗ ಮುಂತಾದ ಅನೇಕ ರೀತಿಯಲ್ಲಿ ಆ ದಿನದ ಉಲ್ಲೇಖ ಮಾಡುತ್ತೇವೆ. ಹಿಂದೂ ಕಾಲಗಣನೆಯ ಮಹಾತ್ಮೆಯನ್ನು ತಿಳಿದುಕೊಳ್ಳೋಣ.
ಅ. ನಾಲ್ಕು ಯುಗಗಳು
ಸತ್ಯಯುಗ = ೧೭ ಲಕ್ಷ ೨೮ ಸಾವಿರ ವರ್ಷಗಳು
ತ್ರೇತಾಯುಗ = ೧೨ ಲಕ್ಷ ೯೬ ಸಾವಿರ ವರ್ಷಗಳು
ದ್ವಾಪರಯುಗ = ೮ ಲಕ್ಷ ೬೪ ಸಾವಿರ ವರ್ಷ
ಕಲಿಯುಗ = ೪ ಲಕ್ಷ ೩೨ ಸಾವಿರ ವರ್ಷಗಳು
ಆ. ಮಹಾಯುಗ
ಮಹಾಯುಗ (ಚತುರ್ಯುಗ) = ನಾಲ್ಕು ಯುಗಗಳು ಸೇರಿ = ೪೩ ಲಕ್ಷ ೨೦ ಸಾವಿರ ವರ್ಷಗಳು
ಇ. ಮನ್ವಂತರ
ಮನ್ವಂತರ = ೭೧ ಮಹಾಯುಗಗಳು
ಈ. ಕಲ್ಪ
ಕಲ್ಪ = ೧೪ ಮನ್ವಂತರ ಅಥವಾ ೧೦೦೦ ಮಹಾಯುಗಗಳು
೧೪ ಮನ್ವಂತರ (೧೦೦೦ ಮಹಾಯುಗಗಳು) = ೪ ಅಬ್ಜ ೩೨ ಕೋಟಿ ವರ್ಷಗಳು (೪,೩೨,೦೦,೦೦,೦೦೦)
೩. ಒಂದು ಕಲ್ಪವೆಂದರೆ ಬ್ರಹ್ಮ ದೇವರ ಒಂದು ದಿನ ಅಥವಾ ಒಂದು ರಾತ್ರಿ
ಇಂತಹ ೩೬೦ ದಿನ ಮತ್ತು ೩೬೦ ರಾತ್ರಿ = ಬ್ರಹ್ಮದೇವರ ಒಂದು ವರ್ಷ
ಬ್ರಹ್ಮದೇವರ ಜೀವನ = ಮೇಲೆ ನೀಡಿದಂತೆ ೧೦೦ ವರ್ಷಗಳು
ಬ್ರಹ್ಮದೇವರ ಜೀವನದ ೫೦ ವರ್ಷಗಳು = ವಿಷ್ಣುವಿನ ಒಂದು ಕ್ಷಣ
ವಿಷ್ಣುವಿನ ೧೨ ಲಕ್ಷ ಕ್ಷಣಗಳು = ಮಹೇಶ್ವರನ ಅರ್ಧ ಸಮಯ
ಇದಾದ ನಂತರ ನೂತನ ಬ್ರಹ್ಮ ವಿಷ್ಣು ಮತ್ತು ಮಹೇಶ್ವರರ ನಿರ್ಮಾಣವಾಗುತ್ತದೆ
೩. ಈಗ ಬ್ರಹ್ಮದೇವರ ೫೦ ವರ್ಷಗಳು ಪೂರ್ಣವಾಗಿವೆ ಅಂದರೆ ಒಂದು ಪರಾರ್ಧ ಮುಕ್ತಾಯಗೊಂಡಿದೆ
೧೫,೫೫,೨೦,೦೦,೦೦,೦೦,೦೦೦ (೧೫ ನಿಖರವ, ೫೫ ಖಾರ್ವ, ೨೦ ಅಬ್ಜ) ವರ್ಷಗಳು ಪೂರ್ಣಗೊಂಡಿವೆ!
ಅ. ಈಗ ೫೧ನೆ ವರ್ಷದ ಮೊದಲನೇ ದಿನ ಅಂದರೆ ಶ್ವೇತವರಾಹ ಕಲ್ಪ ಪ್ರಾರಂಭವಾಗಿದೆ
ಆ. ಈ ಶ್ವೇತವರಾಹ ಕಲ್ಪದ ೬ ಮನ್ವಂತರಗಳು ಕಳೆದು, ೭ನೆ ಮನ್ವಂತರ (ವೈವಸ್ವತ) ನಡೆಯುತ್ತಿದೆ.
ಇ. ವೈವಸ್ವತ ಮನ್ವಂತರದಲ್ಲಿ ೭೧ ಮಹಾಯುಗಗಳು ಇವೆ. ಇದರಲ್ಲಿ ೨೭ ಮಹಾಯುಗಗಳು ಪೂರ್ಣಗೊಂಡಿದ್ದು, ೨೮ನೆ ಮಹಾಯುಗ ನಡೆಯುತ್ತಿದೆ. ಈ ಮಹಾಯುಗದ ಸತ್ಯಯುಗ, ತ್ರೇತಾಯುಗ, ದ್ವಾಪರಯುಗ ಪೂರ್ಣಗೊಂಡಿದ್ದು, ಕಲಿಯುಗ ನಡೆಯುತ್ತಿದೆ.
ಈ. ಕಲಿಯುಗದ ಮೊದಲನೇ ಚರಣ ನಡೆಯುತ್ತಿದ್ದು, ೫ ಸಾವಿರ ೧೧೫ ವರ್ಷಗಳು ಪೂರ್ಣಗೊಂಡಿವೆ. ೫೧೧೬ನೆ ವರ್ಷ ಈ ಯುಗಾದಿಯಂದು ಸೂರ್ಯೋದಯದೊಂದಿಗೆ ಪ್ರಾರಂಭವಾಗಲಿದೆ.
ಉ. ಈ ಯುಗಾದಿಯಂದು ಪ್ರಾರಂಭವಾಗಲಿರುವ ವರ್ಷವನ್ನು ನಿಖರವಾಗಿ ಹೇಳುವುದಾದರೆ
ಮೊದಲನೇ ಪರಾರ್ಧ + (೬ (ಮನ್ವಂತರ) x ೭೧ x ಮಹಾಯುಗದ ಸಮಯ) + (೨೮ (ಮಹಾಯುಗಗಳು) x ೪೩,೨೦,೦೦೦) + ೩ ಯುಗಗಳು (ಸತ್ಯಯುಗ, ತ್ರೇತಾಯುಗ, ದ್ವಾಪರಯುಗ) + ೫೧೧೬
ಊ. ಅಂದರೆ
೧೫,೫೫,೨೦,೦೦,೦೦,೦೦,೦೦೦ + ೧,೮೪,೦೩,೨೦,೦೦೦ + ೧೧,೬೬,೪೦,೦೦೦ + ೩೮,೮೮,೦೦೦ + ೫೧೧೬
ಹಾಗಾಗಿ ನಿಮಗೆಲ್ಲರಿಗೂ ೧೫,೫೫,೨೧,೯೬,೦೮,೫೩,೧೧೬ ನೆ ಹೊಸ ವರ್ಷದ ಶುಭಾಶಯಗಳು!
– ಡಾ. ಗೌತಮ್ ಗೋಳೇ
ಆಧಾರ : ದೈನಿಕ್ ಸನಾತನ ಪ್ರಭಾತ