ವಿದ್ಯಾರ್ಥಿಗಳೇ, ಇತ್ತೀಚೆಗೆ ವ್ಯಕ್ತಿತ್ವವನ್ನು ವಿಕಾಸಗೊಳಿಸುವುದಕ್ಕಾಗಿ ಅಭ್ಯಾಸ, ವ್ಯಾಯಾಮ, ವಿವಿಧ ಭಾಷೆಗಳ ಅಧ್ಯಯನ, ಸ್ಪರ್ಧೆ/ಪರೀಕ್ಷೆ ಇತ್ಯಾದಿ ವಿವಿಧ ಮಾರ್ಗಗಳನ್ನು ಅವಲಂಬಿಸಲಾಗುತ್ತದೆ. ನಿಜವಾಗಿಯೂ ವ್ಯಕ್ತಿಗಳಲ್ಲಾಗುವ ಆಂತರಿಕಸುಧಾರಣೆಯೆಂದರೆ ವ್ಯಕ್ತಿತ್ವವಿಕಾಸ! ಭಯ ಮುಂತಾದ ಸ್ವಬಾವದೋಷಗಳ ನಿರ್ಮೂಲನೆ, ಹಾಗೂ ಗುಣಗಳ ಸಂವರ್ಧನೆ ಮಾಡಿ ಆಂತರಿಕ ವಿಕಾಸ ಸಾಧಿಸಬಹುದು. ಏಕಾಗ್ರತೆಯ ಅಭಾವ, ಬವಿಷ್ಯದ ಚಿಂತೆ ಇತ್ಯಾದಿ ದೋಷಗಳನ್ನು ಸಹ ಸ್ವಭಾವದೋಷ-ನಿರ್ಮೂಲನೆಯಿಂದ ನಿವಾರಣೆ ಮಾಡಲು ಸಾಧ್ಯವಿರುವುದರಿಂದ ಜೀವನವು ಆನಂದಮಯ ಹಾಗೂ ಆದರ್ಶವಾಗುವುದು. ಸ್ವಭಾವದೋಷ-ನಿರ್ಮೂಲನೆ ಹಾಗೂ ಗುಣಸಂವರ್ಧನೆಯ ಪ್ರಕ್ರಿಯೆಯ ಬಗ್ಗೆ ಸತ್ಸಂಗದಲ್ಲಿ ಮಾಹಿತಿ ದೊರೆಯುತ್ತದೆ.
‘ಸತ್ಯಂ ಶಿವಂ ಸುಂದರಂ’ ಎಂಬಆಚರಣೆಯಲ್ಲಿರಿ!
ಸತ್ಯಂ :ಜೀವನದಲ್ಲಿ ಪ್ರತಿಯೊಂದು ಕೃತಿ ಮಾಡುವಾಗ ಸತ್ಯ ಹಾಗೂ ಸದಾಚರಣೆಗಳನ್ನು ಅನುಸರಿಸಿರಿ.
ಶಿವಂ:ಪ್ರತಿಯೊಂದು ಕೃತಿ ಮಾಡುವ ಮೊದಲು ದೇವರಿಗೆ ಪ್ರಾರ್ಥನೆ ಮಾಡುವುದರಿಂದ ಹಾಗೂ ಕೃತಿ ಪೂರ್ಣವಾದ ನಂತರ ‘ದೇವರು ಆ ಕೃತಿಯನ್ನು ನಮ್ಮಿಂದ ಮಾಡಿಸಿಕೊಂಡರು’ ಅದಕ್ಕಾಗಿ ದೇವರಿಗೆ ಕೃತಜ್ಞತೆ ವ್ಯಕ್ತಪಡಿಸುವುದರಿಂದ ಕರ್ಮವು ಪವಿತ್ರವಾಗುವುದು.
ಸುಂದರಂ:ಬಟ್ಟೆಗಳನ್ನು ವ್ಯವಸ್ಥಿತವಾಗಿಡುವುದರಿಂದ ಹಿಡಿದು ಬರವಣಿಗೆ ಸುಂದರವಾಗಿ ಮಾಡುವ ತನಕ ಪ್ರತಿಯೊಂದು ಕೃತಿ ನಾಮಜಪವನ್ನು ಮಾಡುತ್ತಾ ತಪ್ಪುವಿರಹಿತವಾಗಿ ಹಾಗೂ ಪರಿಪೂರ್ಣವಾಗಿ ಮಾಡುವುದರಿಂದ ಅದು ‘ಸಾಧನೆ’ಯಾಗುವುದು. (‘ಸಾಧನೆ’ಯೆಂದರೆ ಈಶ್ವರಪ್ರಾಪ್ತಿಯಾಗುವುದಕ್ಕಾಗಿ ಮಾಡುವ ಪ್ರಯತ್ನ) ಈಶ್ವರ ‘ಸತ್ಯಂ ಶಿವಂ, ಸುಂದರಂ’ ಆಗಿದ್ದಾನೆ.
ಮೇಲಿನಂತೆ ಆಚರಣೆ ಮಾಡಿದರೆ ವ್ಯಾವಹಾರಿಕ ಪ್ರಗತಿ ಆಗಿಯೇ ಅಗುತ್ತದೆ, ಹಾಗೂ ನಾವು ಈಶ್ವರನ ಗುಣಗಳೊಂದಿಗೆ, ಅಂದರೆ ಈಶ್ವರನೊಂದಿಗೆ ಶೀಘ್ರವಾಗಿ ಏಕರೂಪವಾಗುತ್ತೇವೆ.
ಮಕ್ಕಳೇ, ‘ತ್ಯಾಗ’ವು ನಮ್ಮ ಸಂಸ್ಕೃತಿಯಾಗಿದೆ!
ಇನ್ನೊಬ್ಬರ ವಸ್ತುವನ್ನು ಅವನಿಗೆ ಹೇಳದೇ ತೆಗೆದುಕಳ್ಳುವುದು, ಎಂದರೆ ‘ವಿಕೃತಿ’, ಅವನಿಗೆ ಹೇಳಿ ತೆಗೆದುಕೊಳ್ಳುವುದು ‘ಪ್ರಕೃತಿ’ ಹಾಗೂ ನಮ್ಮ ವಸ್ತು ಬೇರೆಯವರಿಗೆ ಕೊಡುವುದು ಎಂದರೆ ‘ಸಂಸ್ಕೃತಿ’. ಶಿಬಿ ರಾಜನು ಒಂದು ಪಕ್ಷಿಯ ಜೀವ ಉಳಿಸುವುದಕ್ಕಾಗಿ ತನ್ನ ಶರೀರದ ಮಾಂಸವನ್ನು ನೀಡಿದ ಕಾರಣ ಅವನು ಅಮರನಾದನು. ತೀವೃವಾಗಿ ತಪಶ್ಚರ್ಯ ಮಾಡಿದಂತಹ ದಧೀಚಿಋಷಿ ರಾಕ್ಷಸರ ನಾಶಕ್ಕಾಗಿ ಬೇಕಾಗುವ ಆಯುಧ ನಿರ್ಮಿಸುವುದಕ್ಕಾಗಿ ದೇವತೆಗಳಿಗೆ ತನ್ನ ಎಲುಬುಗಳನ್ನು ನೀಡಿದ ಕಾರಣ ಅವರು ಆದರಣೀಯರಾದರು. ಎಲ್ಲ ಪ್ರಾಣಿಗಳಿಗೆ ಪ್ರಕಾಶ ಹಾಗೂ ಜೀವನ ನೀಡುವುದಕ್ಕಾಗಿ ಸೂರ್ಯನು ಸದಾಕಾಲ ಸ್ವತಃ ಸುಡುತ್ತಾ ಇರುತ್ತಾನೆ, ಆದುದರಿಂದ ಅವನು ಪ್ರಾರ್ಥನಾ ಯೋಗ್ಯನಾಗಿದ್ದಾನೆ. ನದಿಯು ಜನರಿಗೆ ನೀರನ್ನು ಪೂರೈಸುತ್ತಾ ಮುಂದೆ ಹರಿಯುತ್ತದೆ,ಆದುದರಿಂದ ಜನರು ಅದನ್ನು ಪವಿತ್ರವೆಂದು ನಂಬುತ್ತಾರೆ. ತದ್ವಿರುದ್ಧ ಹಳ್ಳ ನೀರನ್ನು ಶೇಖರಿಸುತ್ತದೆ, ಅದು ಆರುವುದು ಹಾಗೂ ಒಣಗುವುದು. ಮನುಷ್ಯ ಸಂಚಯದಿಂದ ಸಂಕುಚಿತ ವೃತ್ತಿಯವನಾಗುತ್ತಾನೆ, ತ್ಯಾಗದಿಂದ ಉದಾರವೃತ್ತಿಯವನಾಗುತ್ತಾನೆ. ತ್ಯಾಗದಲ್ಲಿಯೇ ನಿಜವಾದ ಆನಂದವಿದೆ ಎಂಬುದನ್ನು ಗಮನದಲ್ಲಿಡಿರಿ.
ಇಂತಹ ಗುಣಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳುವುದು, ನಮ್ಮ ಸ್ವಭಾವದೋಷಗಳನ್ನು ನಿರ್ಮೂಲನಗೊಳಿಸುವುದು ಇದೆ ನಿಜವಾದ ವ್ಯಕ್ತಿತ್ವ ವಿಕಾಸ!