೧.ನಮ್ಮ ತಪ್ಪುಗಳನ್ನು ಹೇಗೆ ಹುಡುಕುವುದು !
ಮಕ್ಕಳೇ, ನಮ್ಮಿಂದ ದಿನವಿಡೀ ಆಗುವ ತಪ್ಪುಗಳನ್ನು ಸ್ವಭಾವದೋಷ ತಖ್ತೆಯಲ್ಲಿ (ಕೋಷ್ಟಕದಲ್ಲಿ) ಆಗಾಗ ಬರೆಯಬೇಕಾಗಿರುತ್ತದೆ. ಮೊದಲಿಗೆ ತಪ್ಪುಗಳೆಂದರೆ ಏನು ? ಎಂಬುದನ್ನು ತಿಳಿದುಕೊಳ್ಳೋಣ. ಕೆಲವೊಮ್ಮೆ ನಾವು ಯಾರಿಗಾದರೂ ಅವಮಾನವಾಗುವಂತೆ ಮಾತನಾಡುತ್ತೇವೆ ಅಥವಾ ನಮ್ಮಿಂದ ನಿರರ್ಥಕ ಹಠ ಮಾಡುವ ಅಯೋಗ್ಯ ಕೃತಿಯಾಗುತ್ತದೆ. ಇದರಂತೆಯೇ ಮನಸ್ಸಿನಲ್ಲಿ ಅಯೋಗ್ಯ ವಿಚಾರ, ಅಯೋಗ್ಯ ಪ್ರತಿಕ್ರಿಯೆ ಅಥವಾ ಭಾವನೆಗಳು ನಿರ್ಮಾಣವಾಗುವುದೂ ತಪ್ಪಾಗಿವೆ, ಉದಾ. ಯಾರಾದರೊಬ್ಬ ವ್ಯಕ್ತಿಯ ಬಗ್ಗೆ ಮನಸ್ಸಿನಲ್ಲಿ ದ್ವೇಷಭಾವನೆ ನಿರ್ಮಾಣವಾಗುವುದು. ಈ ಎಲ್ಲ ತಪ್ಪುಗಳನ್ನು ಹೇಗೆ ಹುಡುಕುವುದು ಎಂಬುದನ್ನು ನೋಡೋಣ.
೧ ಅ. ನಾವೇ ನಮ್ಮ ತಪ್ಪುಗಳನ್ನು ಹುಡುಕುವ ಅಭ್ಯಾಸ ಮಾಡಿಕೊಳ್ಳಬೇಕು !
ದೈನಂದಿನ ವ್ಯವಹಾರವನ್ನು ಮಾಡುವಾಗ ‘ನನಗೆ ನನ್ನ ತಪ್ಪುಗಳನ್ನು ಹುಡುಕಬೇಕಾಗಿದೆ’, ಎಂಬ ದೃಢನಿಶ್ಚಯ ಮಾಡಿ ಸತರ್ಕರಾಗಿದ್ದರೆ, ನಮಗೆ ನಮ್ಮ ಅನೇಕ ತಪ್ಪುಗಳು ಗಮನಕ್ಕೆ ಬರುತ್ತವೆ.
೧ ಅ ೧. ದಿನವಿಡೀ ನಿರೀಕ್ಷಣೆ ಮಾಡಿ ತಮ್ಮಿಂದ ಆದಂತಹ ೧೦೦ಕ್ಕೂ ಹೆಚ್ಚಿನ ತಪ್ಪುಗಳನ್ನು ಹುಡುಕುವ ಸನಾತನದ ಇಬ್ಬರು ಸಾಧಕ-ವಿದ್ಯಾರ್ಥಿಗಳು ! :‘ಸನಾತನ ಆಶ್ರಮ, ರಾಮನಾಥಿ (ಗೋವಾ) ಯಲ್ಲಿನ ಸಾಧಕ-ವಿದ್ಯಾರ್ಥಿಗಳಾದ ಕು. ಶೌನಕ ಮರಾಠೆ (ವಯಸ್ಸು೧೩ ವರ್ಷ) ಇವನು ಒಂದು ದಿನ ತನ್ನ ೧೦೨ ತಪ್ಪುಗಳನ್ನು ಹುಡುಕಿದನು ಮತ್ತು ಕು. ಮುಕುಲ ಸಾಮಂತ (ವಯಸ್ಸು ೧೪ ವರ್ಷ) ಇವನು ತನ್ನ ೧೦೫ ತಪ್ಪುಗಳನ್ನು ಹುಡುಕಿದನು. ಇದರಿಂದ ತಮ್ಮ ತಪ್ಪುಗಳನ್ನು ಹುಡುಕುವ ಇವರಿಬ್ಬರ ತಳಮಳ ಮತ್ತು ನಿರೀಕ್ಷಣಾ ಕ್ಷಮತೆಯೂ ಗಮನಕ್ಕೆ ಬಂದಿತು.’ – ಸೌ. ವೃಂದಾ ಮರಾಠೆ (ವರ್ಷ ೨೦೦೮)
೧ ಆ. ‘ತಪ್ಪಿನಲ್ಲಿ ನಿಮ್ಮ ಸಹಭಾಗ ಎಷ್ಟಿತ್ತು’, ಎಂಬ ಸಂಕುಚಿತ ವಿಚಾರವನ್ನು ಮಾಡಬೇಡಿರಿ !
ಕೆಲವೊಮ್ಮೆ ತಪ್ಪನ್ನು ಒಪ್ಪಿಕೊಳ್ಳುತ್ತೇವೆ; ಆದರೆ ಅದನ್ನು ಒಪ್ಪಿಕೊಳ್ಳುವಾಗ ‘ತಪ್ಪಿನಲ್ಲಿ ನನ್ನ ಸಹಭಾಗವು ಅತ್ಯಲ್ಪವಾಗಿತ್ತು’, ಎಂಬ ವಿಚಾರ ಕೆಲವು ಮಕ್ಕಳ ಮನಸ್ಸಿನಲ್ಲಿ ಬರುತ್ತದೆ. ಮಕ್ಕಳೇ, ನಿಮ್ಮಲ್ಲಿ ಸುಧಾರಣೆಯಾಗುವ ದೃಷ್ಟಿಯಿಂದ ಇಂತಹ ವಿಚಾರವನ್ನು ಮಾಡುವುದೂ ಹಾನಿಕಾರಕವೇ ಆಗಿದೆ. ಆದಂತಹ ತಪ್ಪಿನಲ್ಲಿ ನಿಮ್ಮ ಸಹಭಾಗವು ಸ್ವಲ್ಪವೇ ಇದ್ದರೂ, ಅದರ ಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡು ತಪ್ಪನ್ನು ಸ್ವೀಕರಿಸಬೇಕು. ಈ ಸಂದರ್ಭದಲ್ಲಿ ಚಿ. ಯಶರಾಜನ ತಾಯಿಯು ಅನುಭವಿಸಿದ ಒಂದು ಪ್ರಸಂಗವನ್ನು ನೋಡೋಣ.
೧ ಆ ೧. ಘಟಿಸಿದ ಪ್ರಸಂಗದಲ್ಲಿ ತನ್ನ ತಪ್ಪನ್ನು ಹುಡುಕಿ ಅದನ್ನು ಒಪ್ಪಿಕೊಳ್ಳುವ ಸನಾತನದ ಬಾಲಸಾಧಕ ಚಿ. ಯಶರಾಜ ! :ಒಂದು ದಿನ ಬೆಳಗ್ಗೆ ನಾನು ನನ್ನ ಮಗ ಚಿ. ಯಶರಾಜನಿಗೆ ಶಾಲೆಗೆ ಬಿಡಲು ತಡವಾಗುವುದೆಂದು ಗಡಿಬಿಡಿಯಲ್ಲಿ ತಯಾರಾಗುತ್ತಿದ್ದೆ. ಆಗ ಯಶರಾಜನು ನನಗೆ ಶಾಲೆಯಲ್ಲಿನ ಕೆಲವು ಮೋಜುಗಳನ್ನು ಹೇಳುತ್ತಿದ್ದನು. ಅವಸರದಲ್ಲಿ ನೀರಿನ ಬಾಟಲಿಯನ್ನು ತುಂಬಿಸುವಾಗ ನನ್ನ ಕೈಯಿಂದ ನೀರು ಬಿದ್ದಿತು. ಆಗ ಅವನು ಕೂಡಲೇ ನನಗೆ, ‘ನಾನು ಮಾತನಾಡುತ್ತಿದ್ದರಿಂದ ನಿನ್ನ ಗಮನವಿರಲಿಲ್ಲ ? ಅದರಿಂದಾಗಿ ನೀರು ಬಿದ್ದಿತೇನೋ ? ನನ್ನಿಂದ ನಿನಗೆ ತೊಂದರೆಯಾಯಿತು’ ಎಂದು ಹೇಳಿದನು. ಆಗ ನನಗೆ ನನ್ನ ಬಗ್ಗೆಯೇ ನಾಚಿಕೆಯೆನಿಸಿತು; ಏಕೆಂದರೆ ನಾನು ನನ್ನ ಕೆಲಸದ ಆಯೋಜನೆಯನ್ನು ಆ ದಿನ ಮಾಡದಿದ್ದರಿಂದ ನನಗೆ ಗಡಿಬಿಡಿಯಾಗುತ್ತಿತ್ತು.’ – ಡಾ. (ಸೌ.) ಮೇಧಾ ಉಮೇಶ ಲಂಬೆ (ಚಿ.ಯಶರಾಜನ ತಾಯಿ), ಕುರುಂದವಾಡ, ಕೊಲ್ಹಾಪುರ ಜಿಲ್ಲೆ (ವರ್ಷ ೨೦೦೭).
(ಚಿ. ಯಶರಾಜನು ‘ನಾನು ಮಾತನಾಡುತ್ತಿದ್ದೆ, ಆದುದರಿಂದ ನೀರು ಬಿದ್ದಿತು ಮತ್ತು ನಿನಗೆ ತೊಂದರೆಯಾಯಿತು’, ಎಂದು ಅಮ್ಮನಿಗೆ ಹೇಳಿದನು. ಇದರಿಂದ ಅವನು ಯಾವುದಾದರೊಂದು ತಪ್ಪು ಗಮನಕ್ಕೆ ಬಂದಾಗ ಇನ್ನೊಬ್ಬರೆಡೆಗೆ ಬೆರಳು ತೋರಿಸದೇ ‘ಇದರಲ್ಲಿ ನನ್ನದೇನು ತಪ್ಪಿದೆ’ ಎಂದು ವಿಚಾರ ಮಾಡಿರುವುದು ಗಮನಕ್ಕೆ ಬರುತ್ತದೆ. ಮಕ್ಕಳೇ, ನೀವೂ ಇಂತಹ ಆದರ್ಶವನ್ನಿಟ್ಟುಕೊಳ್ಳಿರಿ. – ಸಂಕಲನಕಾರರು)
೧ ಇ. ನಿಮ್ಮ ತಪ್ಪುಗಳ ಬಗ್ಗೆ ತಿಳಿಯಲು ಇತರರ ಸಹಾಯವನ್ನು ಪಡೆಯಿರಿ !
ಮಕ್ಕಳೇ, ಕೆಲವೊಮ್ಮೆ ನಮ್ಮ ಕೆಲವು ತಪ್ಪುಗಳು ನಮ್ಮ ಗಮನಕ್ಕೆ ಬರುವುದಿಲ್ಲ. ಇಂತಹ ತಪ್ಪುಗಳನ್ನು ಗಮನಕ್ಕೆ ತಂದುಕೊಡಲು ಅಪ್ಪ-ಅಮ್ಮ, ಅಣ್ಣ-ತಂಗಿ, ಸ್ನೇಹಿತರು ಮುಂತಾದವರಿಗೆ ಹೇಳಿಡಬೇಕು.
೧ ಇ ೧. ಇತರರು ಗಮನಕ್ಕೆ ತಂದು ಕೊಟ್ಟ ತಪ್ಪನ್ನು ಮೊದಲು ಒಪ್ಪಿಕೊಳ್ಳಬೇಕು ! :ಕೆಲವೊಮ್ಮೆ ತಂದೆ-ತಾಯಿ ಅಥವಾ ಬೇರೆ ಯಾರಾದರೂ ತಪ್ಪನ್ನು ಹೇಳಿದರೆ ಕೆಲವು ಮಕ್ಕಳು ತಪ್ಪನ್ನು ಸ್ವೀಕರಿಸುವುದಿಲ್ಲ. ಹಾಗೆಯೇ ‘ಈ ತಪ್ಪನ್ನು ನಾನು ಮಾಡಿಲ್ಲ, ತಂಗಿ (ಅಥವಾ ತಮ್ಮ) ಮಾಡಿದ್ದಾಳೆ’, ಎಂದು ಹೇಳಿ ತಮ್ಮ ತಪ್ಪನ್ನು ಇನ್ನೊಬ್ಬರ ಮೇಲೆ ಹಾಕುತ್ತಾರೆ. ಇದರಿಂದಾಗಿ ಅವರಲ್ಲಿ ಬಹಿರ್ಮುಖತೆ (ಇನ್ನೊಬ್ಬರಲ್ಲಿ ಅಥವಾ ಪರಿಸ್ಥಿತಿಯಲ್ಲಿ ದೋಷವನ್ನು ನೋಡುವ ವೃತ್ತಿ) ನಿರ್ಮಾಣವಾಗಿ ಅವರಿಗೆ ಹಾನಿಯಾಗುತ್ತದೆ. ತಪ್ಪನ್ನು ಒಪ್ಪದಿದ್ದರೆ, ಯಾವ ದೋಷದಿಂದಾಗಿ ತಪ್ಪಾಗಿದೆಯೋ, ಆ ದೋಷವನ್ನು ನಿವಾರಿಸಲು ಯಾವುದೇ ಪ್ರಯತ್ನಗಳಾಗುವುದಿಲ್ಲ. ತದ್ವಿರುದ್ಧವಾಗಿ ಇತರರು ಹೇಳಿದ ತಪ್ಪುಗಳನ್ನು ಅಂತರ್ಮುಖರಾಗಿ (ಸ್ವತಃ ಎಲ್ಲಿ ಕಡಿಮೆ ಬಿದ್ದೆ, ಎಂಬುದರ ಕಡೆಗೆ ಗಮನ ಕೊಡುವ ವೃತ್ತಿ) ಒಪ್ಪುವ ಮಕ್ಕಳಿಂದ ‘ಆ ತಪ್ಪು ಏಕೆ ಮತ್ತು ಹೇಗಾಯಿತು’, ಎಂಬುದರ ಅಧ್ಯಯನವಾಗುತ್ತದೆ. ಇದರಿಂದ ಅವರಿಂದ ಸುಧಾರಣೆಗಾಗಿ ಉತ್ತಮ ಪ್ರಯತ್ನಗಳಾಗಿ ಅವರ ಸ್ವಭಾವದೋಷಗಳು ಬೇಗನೇ ದೂರವಾಗುತ್ತವೆ. ಆದುದರಿಂದ ಮಕ್ಕಳೇ, ಇತರರು ಹೇಳಿದ ಯಾವುದೇ ತಪ್ಪನ್ನು ಸಮರ್ಥಿಸದೇ ಸ್ವೀಕರಿಸಬೇಕು. ಈ ಸಂದರ್ಭದಲ್ಲಿ ಕು. ಮುಕುಲ ಸಾಮಂತ ಇವನು ಮಾಡಿದ ಪ್ರಯತ್ನವನ್ನು ನೋಡೋಣ.
೧ ಇ ೧ ಅ. ತಪ್ಪನ್ನು ಸ್ವೀಕರಿಸಿ ಅದನ್ನು ಸುಧಾರಿಸಲು ಪ್ರಯತ್ನಿಸುವ ಸನಾತನದ ಬಾಲಸಾಧಕ ಕು. ಮುಕುಲ ಸಾಮಂತ ! :ಒಮ್ಮೆ ಕು. ಮುಕುಲ ದುರ್ಗೇಶ ಸಾಮಂತ (೮ ವರ್ಷ) ಇವನಿಗೆ ನಾನು, ‘ನೀನು ಇತರ ಸಾಧಕರೊಂದಿಗೆ ಕಡಿಮೆ ಮಾತನಾಡುತ್ತಿ. ಹಾಗೆಯೇ ನೀನು ಹೆಚ್ಚು ವೇಗವಾಗಿ ಮಾತನಾಡುವುದರಿಂದ ಕೇಳುವವರಿಗೆ ಅದು ಅರ್ಥವಾಗುವುದಿಲ್ಲ’ ಎಂದು ಹೇಳಿದೆ. ಅವನು ಅಂದಿನಿಂದಲೇ ಆ ತಪ್ಪನ್ನು ಸುಧಾರಿಸಲು ಪ್ರಯತ್ನಿಸತೊಡಗಿದನು ಮತ್ತು ಆಶ್ರಮದಲ್ಲಿನ ಇತರ ಸಾಧಕರೊಂದಿಗೂ ಬೆರೆಯತೊಡಗಿದನು. ಹಾಗೆಯೇ ತಾನು ಬಹಳ ವೇಗವಾಗಿ ಮಾತನಾಡುತ್ತಿದ್ದೇನೆ ಎಂದು ಅರಿವಾದ ಕೂಡಲೇ ಅವನು ಎರಡು ಸಲ ಕುಲದೇವಿಯ ನಾಮಜಪವನ್ನು ಮಾಡಿಯೇ ಮಾತನ್ನು ಪೂರ್ಣಗೊಳಿಸತೊಡಗಿದನು. – ಸೌ. ಸಾವಿತ್ರಿ ವೀರೇಂದ್ರ ಇಚಲಕರಂಜೀಕರ, ಸನಾತನ ಆಶ್ರಮ, ರಾಮನಾಥಿ, ಗೋವಾ (ವರ್ಷ ೨೦೦೫).
೧ ಇ ೨. ಇತರರು ತಪ್ಪು ಹೇಳುವ ಪದ್ಧತಿಯ ಕಡೆಗೆ ಗಮನ ಕೊಡದೇ ತಪ್ಪನ್ನು ಸ್ವೀಕರಿಸಬೇಕು ! :ಮಕ್ಕಳೇ, ಕೆಲವೊಮ್ಮೆ ಅಕ್ಕ (ಅಥವಾ ಅಣ್ಣ) ನಿಮ್ಮ ತಪ್ಪನ್ನು ಹೇಳುತ್ತಾಳೆ; ಆದರೆ ಅದನ್ನು ಅವಳು ಸಿಟ್ಟಿನಿಂದ ಹೇಳುತ್ತಾಳೆ. ನಿಮ್ಮಿಂದ ತಪ್ಪಾಗಿರುವುದು ನಿಮಗೆ ಮನಸ್ಸಿನಲ್ಲಿ ಒಪ್ಪಿಗೆಯಾಗಿರುತ್ತದೆ; ಆದರೆ ಅಕ್ಕನ ಹೇಳುವ ಪದ್ಧತಿಯು ಇಷ್ಟವಾಗದಿರುವುದರಿಂದ ಅವಳು ಹೇಳಿದ ತಪ್ಪನ್ನು ನೀವು ಸ್ವೀಕರಿಸುವುದಿಲ್ಲ. ಆದರೆ ನೀವು ಹೀಗೆ ಮಾಡುವುದು ಯೋಗ್ಯವಾಗಿಲ್ಲ. ಅಕ್ಕನ (ಅಥವಾ ಅಣ್ಣನ) ಮಾತಿನ ಪದ್ಧತಿಯ ಕಡೆಗೆ ಗಮನ ಕೊಡದೇ ಅವಳು ಹೇಳಿದ ತಪ್ಪನ್ನು ಸ್ವೀಕರಿಸಬೇಕು.