ಮಕ್ಕಳೇ, ಶಿಕ್ಷಕರೊಂದಿಗೆ ನಮ್ಮ ವರ್ತನೆಯು ಹೀಗಿರಬೇಕು
- ಶಾಲೆಯಲ್ಲಿ ಶಿಕ್ಷಕರಿಗೆ ‘ಸರ್’ ಎನ್ನದೆ ‘ಗುರುಗಳೇ’ ಎಂದು ಹೇಳಿ.
- ಶಿಕ್ಷಕರು ಭೇಟಿಯಾದಾಗ ವಿನಯಪೂರ್ವಕವಾಗಿ ಕೈ ಜೋಡಿಸಿ ‘ನಮಸ್ಕಾರ ಗುರುಗಳೇ’ ಎಂದು ಹೇಳಿ.
- ಹಬ್ಬ ಮತ್ತು ಉತ್ಸವಗಳ ಸಮಯದಲ್ಲಿ ಶಿಕ್ಷಕರಿಗೆ ತಲೆ ಬಾಗಿಸಿ ನಮಸ್ಕಾರ ಮಾಡಿ.
- ಶಿಕ್ಷಕರ ಬಗ್ಗೆ ಗೌರವ ಭಾವನೆಯಿಂದ, ಅವರನ್ನು ನಮ್ರತೆ ಮತ್ತು ಪ್ರೇಮದಿಂದ ಮಾತನಾಡಿಸಿ.
- ತರಗತಿಯಲ್ಲಿ ಇತರ ಮಕ್ಕಳಿಗೂ ಗೌರವದಿಂದಿರಲು ಕಲಿಸಿ.
ಶಿಕ್ಷಕರಿಂದ ವಿವಿಧ ವಿಷಯಗಳ ಜ್ಞಾನ ದೊರೆತಾಗ ಅದರ ಬಗ್ಗೆ ಕೃತಜ್ಞರಾಗಿರಿ.