ವಿದ್ಯಾರ್ಥಿಗಳಿಗೆ ದೇಶಭಕ್ತಿಯನ್ನು ಬೋಧಿಸುವ ಆವಶ್ಯಕತೆಯನ್ನು ಅರಿತ ಶಿಕ್ಷಕರು!

ದೇಶದ ಸ್ವಾತಂತ್ರ್ಯಕ್ಕಾಗಿ ಸರ್ವಸ್ವದ ತ್ಯಾಗ ಮಾಡಿದ ಕೆಲವು ಸತ್ಪುರುಷರ ಬಗ್ಗೆ ಕ್ರಾಂತಿಕಾರರು ಅಥವಾ ರಾಷ್ಟ್ರಪುರುಷರೆಂದು ಮಾತ್ರ ನಮಗೆ ಪರಿಚಯವಿರುತ್ತದೆ. ಮುಂದಿನ ಪೀಳಿಗೆಯನ್ನು ದೇಶಾಭಿಮಾನಿಯನ್ನಾಗಿಸಲು ಅದಕ್ಕೆ ರಾಷ್ಟ್ರಭಕ್ತಿಯ ಶಿಕ್ಷಣ ನೀಡುವ ಮಹಾನ್ ಧ್ಯೇಯವನ್ನಿರಿಸಿ ವೀರಪುರುಷರು ಮಾಡಿದ ಕಾರ್ಯವು ಅಷ್ಟೇ ಶ್ರೇಷ್ಠವಾಗಿದೆ.

ಮೊದಲ ಕ್ರಾಂತಿಕಾರರಾದ ವಾಸುದೇವ ಬಳವಂತ ಫಡಕೆ




೧೮೭೪ ರಲ್ಲಿ ಪೂನಾದಲ್ಲಿಪೂನಾ ನೇಟಿವ್ ಇನ್ಸ್ಟಿಟ್ಯೂಟ್ನ್ನು ಸ್ಥಾಪಿಸಿ, ಇದರ ವತಿಯಿಂದ ರಾಷ್ಟ್ರದ ಬಗ್ಗೆ ಶಿಕ್ಷಣ ಕೊಡುವ ಮೊದಲ ಶಾಲೆಯನ್ನು ಸ್ಥಾಪಿಸಿದರು.

ಲೋಕಮಾನ್ಯ ಬಾಲ ಗಂಗಾಧರ ತಿಲಕರು


ಇವರು ೧೮೮೦ ರಲ್ಲಿ ವಿಷ್ಣುಶಾಸ್ತ್ರಿ ಚಿಪಳೂಣಕರ ಮತ್ತು ಗೋಪಾಲ ಗಣೇಶ ಆಗರಕರ ಇವರ ಸಹಾಯದಿಂದ ಪೂನಾದಲ್ಲಿನ್ಯೂ ಇಂಗ್ಲಿಷ್ ಸ್ಕೂಲ್ನ್ನು ಸ್ಥಾಪಿಸಿದರು. ‘ಡೆಕ್ಕನ್ ಎಜ್ಯುಕೇಶನ್ ಸೊಸೈಟಿಮತ್ತುಫರ್ಗ್ಯುಸನ್ ಮಹಾವಿದ್ಯಾಲಯವನ್ನೂ ಸ್ಥಾಪಿಸಿದರು.

ಲಾಲಾ ಲಜಪತರಾಯರು


ಇವರುಆಂಗ್ಲೋ ವೈದಿಕ ಕಾಲೇಜ್ನ್ನು ಸ್ಥಾಪಿಸಿ ರಾಷ್ಟ್ರೀಯ ವೃತ್ತಿಶಿಕ್ಷಣ ಕೊಟ್ಟರು.

ಪಂಡಿತ ಮದನಮೋಹನ ಮಾಲವೀಯ


ಇವರು ಕೋಟಿ ೩೪ ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿ ೧೯೧೬ ರಲ್ಲಿ ಕಾಶಿಯಲ್ಲಿಹಿಂದೂ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದರು.

Leave a Comment