ತೇಜಸ್ವೀ ರಾಜರ ಪರಿಚಯ

 ಹಿಂದೂ ಧರ್ಮವು ಧರ್ಮಾಧಿಷ್ಟ, ಧೈರ್ಯಶಾಲಿ ಹಾಗೂ ಶೌರ್ಯವಂತ ರಾಜರ ಗೌರವಾನ್ವಿತ ಇತಿಹಾಸವನ್ನು ಹೊಂದಿದೆ. ಹಿಂದೂ ರಾಜರು ಧರ್ಮಧಿಷ್ಟರಾಗಿದ್ದರಲ್ಲದೆ ಜನರು ಎಲ್ಲಾ ರೀತಿಯಿಂದ ಪ್ರಗತಿಯಾಗಬೇಕೆಂದು ತೀವ್ರವಾದ ಹಂಬಲ ಅವರಲ್ಲಿತ್ತುನಮಗೆ ತಿಳಿದಂತೆರಾಜಾ ಕಾಲಸ್ಯಾ ಕರಣಂಅಂದರೆ ಸಮಯಕ್ಕೆ ರಾಜನೇ ಕಾರಣನಾಗಿರುತ್ತಾನೆ, ರಾಜರು ಧರ್ಮಧಿಷ್ಠಕ್ಕೆ ಬದ್ದರಾಗಿದ್ದರು ಹಾಗೆಯೇ ಜನರು ಕೂಡ ಸಂತೋಷದಿಂದ ಇದ್ದರು ಮತ್ತು ಒಳ್ಳೆಯ ನಡತೆಯನ್ನು ಹೊಂದಿದ್ದರು. ರಾಜರು ಅವರ ಗುರುಗಳ ಮಾರ್ಗದರ್ಶನದ ಅಡಿಯಲ್ಲಿ ರಾಜ್ಯವನ್ನು ಆಳುತ್ತಿದ್ದರು. ಅವರು ಬಹಳಷ್ಟು ಚಿತ್ರಕಾರರಿಗೆ ಆಶ್ರಯ ನೀಡುತ್ತಿದ್ದರು ಮತ್ತು ಮನಪೂರ್ವಕವಾಗಿ ಕಲೆಯನ್ನು ಉತ್ತೇಜಿಸುತ್ತಿದ್ದರು. ಅಧ್ಯಾತ್ಮಿಕ ಬಲದಿಂದಾಗಿ ಅವರಿಗೆ ಇಡೀ ವಿಶ್ವವನ್ನು ಆಳುವ ಸಾಮಾರ್ಥ್ಯವಿದ್ದರು ಸಹ ಅವರು ಸ್ವಸಂರಕ್ಷಣೆಯ ಹೊರತು ಇನ್ನೊಬ್ಬರ ಮೇಲೆ ಆಕ್ರಮಣ ಮಾಡುತ್ತರಲಿಲ್ಲ. ಹಾಗೆಯೇ ಮುಂದಿನ ಭಾಗದ ಜೀವನದಲ್ಲಿ ಅವರು ತಮ್ಮ ರಾಜ್ಯವನ್ನು ಅವರ ಹಕ್ಕುದಾರರಿಗೆ ಹಸ್ತಾಂತರಿಸುತ್ತಿದ್ದರು ಮತ್ತು ವಾನಪ್ರಸ್ತಾಶ್ರಮವನ್ನು ಸ್ವಸಂತೋಷದಿಂದ ಅಂಗೀಕರಿಸಿ ಅಧ್ಯಾತ್ಮಿಕ ಅಧ್ಯಯನವನ್ನು ಕಾರ್ಯರೂಪದಲ್ಲಿ ತರುತ್ತಿದ್ದರು. ಹಿಂದೂ ಇತಿಹಾಸದಲ್ಲಿ ಮಹತ್ವವುಳ್ಳ ಸ್ಮಾರಕವನ್ನು ರಚಿಸಿದ ಇಂತಹ ಪ್ರಖ್ಯಾತ ರಾಜರ ದೈವೀ ಕರಣದ ಮೂಲವಾಗಿದೆ. ಪ್ರಖ್ಯಾತ ರಾಜರ ಜೀವನದಲ್ಲಿನ ಪ್ರತಿಯೊಂದು ಘಟನೆಯು ಅವರ ಪ್ರಕಾಶಮಯವಾದ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಗುರುಚರಣೆಯಲ್ಲಿ ನಮ್ಮ ಪ್ರಾರ್ಥನೆಯೆಂದರೆ ಇತಿಹಾಸದಿಂದ ಕಲಿತು ಹಿಂದೂಗಳು ಯಾವುದೇ ರೀತಿಯ ಹಲ್ಲೆಯಾದರೂ ಅದರ ವಿರುದ್ಧ ಹೋರಾಡಲು ತಾವೇ ಸ್ವತ: ತಯಾರಾಗಿರಬೇಕು.

Leave a Comment