Menu Close

ಭಾರತೀಯ ಜೀವನಪದ್ಧತಿ ವಿದೇಶಿ ಶಕ್ತಿಗಳ ಎದುರು ತಲೆಬಾಗುವುದಿಲ್ಲ – ಶ್ರೀ. ಕೃಷ್ಣ ದೇವರಾಯ ಅರವೀಡು ರಾಜವಂಶ, ಆನೆಗುಂದಿ ನರಪತಿ ಸಂಸ್ಥಾನಮ್, ಕರ್ನಾಟಕ

ಗೋವಾದಲ್ಲಿ ನಡೆಯುತ್ತಿರುವ ‘ವೈಶ್ವಿಕ ಹಿಂದು ರಾಷ್ಟ್ರ ಮಹೋತ್ಸವ’ದಲ್ಲಿ ಗಣ್ಯರ ಮಾರ್ಗದರ್ಶನ

                                                         ಶ್ರೀ. ಕೃಷ್ಣ ದೇವರಾಯ ಅರವೀಡು ರಾಜವಂಶ, ಆನೆಗುಂದಿ ನರಪತಿ ಸಂಸ್ಥಾನಮ್

ವಿಜಯನಗರ ಸಾಮ್ರಾಜ್ಯವು ಆಕ್ರಮಣಕಾರಿಗಳ ವಿರುದ್ಧ ಹೋರಾಟ ನಡೆಸಿತು. ಈ ಸಾಮ್ರಾಜ್ಯವು ಹಿಂದೂಗಳ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಸ್ಥೆಗಳನ್ನು ರಕ್ಷಿಸುವುದರ ಜೊತೆಗೆ ಹಿಂದೂಗಳಿಗಾಗಿ ಹೊಸ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳನ್ನು ನಿರ್ಮಿಸಿತು. ಈ ಸಾಮ್ರಾಜ್ಯವು ಹಿಂದೂಗಳಿಗೆ ಆಶಾಕಿರಣವಾಗಿತ್ತು. ಭಾರತೀಯ ಜೀವನಪದ್ಧತಿಯು ವಿದೇಶಿ ಶಕ್ತಿಗಳ ಎದುರು ತಲೆಬಾಗುವುದಿಲ್ಲ ಎನ್ನುವುದನ್ನು ಈ ಸಾಮ್ರಾಜ್ಯವು ಜಗತ್ತಿಗೆ ತೋರಿಸಿಕೊಟ್ಟಿದೆ. ಭಾರತೀಯ ಪರಂಪರೆಯನ್ನು ರಕ್ಷಿಸಲು ವಿಜಯನಗರ ರಾಜಮನೆತನವು ಹಿಂದೂಗಳ ಪ್ರಾಚೀನ ದೇವಸ್ಥಾನಗಳನ್ನು ಮತ್ತು ಮಠಗಳನ್ನು ಜೀರ್ಣೋದ್ಧಾರ ಮಾಡಿತು. ವಿಜಯನಗರ ಸಾಮ್ರಾಜ್ಯವು ಹಿಂದೂಗಳ ದೇವಸ್ಥಾನಗಳ ಜೀರ್ಣೋದ್ಧಾರದ ಮಹಾನ್ ಕಾರ್ಯವನ್ನು ಮಾಡಿದೆ. ಹಾಗೆಯೇ ಜನತೆಯ ಆರ್ಥಿಕ ಅಭಿವೃದ್ಧಿಯಲ್ಲಿ ಮಹತ್ವದ ಕೊಡುಗೆಯನ್ನು ನೀಡಿದೆ. ವಿಜಯನಗರ ಸಾಮ್ರಾಜ್ಯವು ಉತ್ಕೃಷ್ಟ ತಂತ್ರಜ್ಞಾನ, ನಗರಾಭಿವೃದ್ಧಿ, ಹನಿನೀರಾವರಿ, ರಸ್ತೆ, ದೇವಸ್ಥಾನ ಮತ್ತು ವಾಸ್ತುಶಾಸ್ತ್ರ ಇವುಗಳ ಒಂದು ಆದರ್ಶ ಮಾದರಿಯಾಗಿತ್ತು. ಆಗಿನ ಜಗತ್ತಿಗೆ ಇದು ಒಂದು ವಿಸ್ಮಯವಾಗಿತ್ತು. ಈ ರಾಜಮನೆತನವು ಆಡಳಿತ ಮಾಡಿರುವ ದಕ್ಷಿಣ ಭಾರತದಲ್ಲಿ ಇಂದಿಗೂ ಹಿಂದೂಗಳ ಸಾವಿರಾರು ಪ್ರಾಚೀನ ದೇವಸ್ಥಾನಗಳು ಮತ್ತು ಮಠಗಳು ಅಸ್ತಿತ್ವದಲ್ಲಿದೆ. ಹಾಗೆಯೇ ಈ ಪ್ರದೇಶದಲ್ಲಿ ಹಿಂದೂಗಳ ಪ್ರಾಚೀನ ಪೂಜಾವಿಧಿ ಪದ್ಧತಿಯನ್ನು ಸಂರಕ್ಷಿಸಲಾಗಿದೆ, ಎಂದು ಆನೆಗುಂಡಿ ನರಪತಿ ಸಂಸ್ಥಾನಮ್ ಇದರ ಅರಾವಿಡೂ ರಾಜವಂಶದ ಶ್ರೀ ಕೃಷ್ಣ ದೇವರಾಯ ಇವರು ಗೋವಾದಲ್ಲಿ ನಡೆಯುತ್ತಿರುವ ‘ವೈಶ್ವಿಕ ಹಿಂದು ರಾಷ್ಟ್ರ ಮಹೋತ್ಸವ’ದಲ್ಲಿ ಹೇಳಿದರು.

Related News

Leave a Reply

Your email address will not be published. Required fields are marked *