ಮಾರ್ಗದರ್ಶನ ಮಾಡುತ್ತಿರುವ ಪೂ. ರಮಾನಂದ ಗೌಡ ಮತ್ತು ಶ್ರೀ. ಮೋಹನ ಗೌಡ
ಹೆಜಮಾಡಿ (ದಕ್ಷಿಣ ಕನ್ನಡ ಜಿಲ್ಲೆ) : ಇಂದು ಹಿಂದೂ ಸಮಾಜದ ಮೇಲೆ ವಿವಿಧ ರೀತಿಯ ಸಂಕಟಗಳು ಆವರಿಸಿದೆ. ಈ ಸಂಕಟದ ಗಾಂಭೀರ್ಯವನ್ನು ಹಿಂದೂ ಸಮಾಜವು ಅರ್ಥ ಮಾಡಿಕೊಳ್ಳಬೇಕಾಗಿದೆ. ಆದರೆ ದುರದೃಷ್ಟವಶಾತ್ ಕಳೆದ ೩ ಪೀಳಿಗೆಯಿಂದ ಹಿಂದೂ ಸಮಾಜಕ್ಕೆ ಧರ್ಮಶಿಕ್ಷಣ ಸಿಗದ ಕಾರಣ ಇಂದು ಸಮಾಜವು ಧರ್ಮದ ಆಚರಣೆಯಿಂದ ದೂರವಾಗಿದೆ. ಅದರಿಂದ ಹಿಂದೂಗಳಲ್ಲಿ ಧರ್ಮಾಭಿಮಾನ ಮತ್ತು ಸ್ವಾಭಿಮಾನ ಹಿಂದೂ ಐಕ್ಯತೆಯ ಅಭಾವ ನಿರ್ಮಾಣವಾಗಿದೆ. ಅದರ ಪರಿಣಾಮವಾಗಿ ಸಮಾಜದ ಮೇಲೆ ವಿವಿಧ ಆಕ್ರಮಣಗಳ ಪ್ರಮಾಣವು ಹೆಚ್ಚಾಗಿದೆ. ಕೇರಳ ಸ್ಟೋರಿಯಲ್ಲಿ ಉಲ್ಲೇಖವಿರುವಂತೆ ಹಿಂದೂ ಯುವತಿಯರಿಗೆ ಧರ್ಮದ ಬಗ್ಗೆ ಏನಾದರೂ ಪ್ರಶ್ನೆ ಕೇಳಿದರೆ, ಅವರಿಗೆ ಅದಕ್ಕೆ ಉತ್ತರವಿಲ್ಲ. ಆದ್ದರಿಂದ ಅವರಿಗೆ ಧರ್ಮದ ಮೇಲಿನ ಅಭಿಮಾನವು ಕಡಿಮೆಯಾಗಿ, ಅವರು ಮತಾಂತರ ಮುಂತಾದ ಸಮಸ್ಯೆಗಳಿಗೆ ಸಿಲುಕುತ್ತಾರೆ. ಇಂದು ಈ ಸಮಸ್ಯೆ ದೇಶದ ಬಹುದೊಡ್ಡ ಸಮಸ್ಯೆಯಾಗಿದೆ. ಇದಕ್ಕೆ ಏಕೈಕ ಉಪಾಯವೆಂದರೆ ಹಿಂದೂ ಸಮಾಜಕ್ಕೆ ಧರ್ಮಶಿಕ್ಷಣ ನೀಡುವುದು, ಧರ್ಮಾಚರಣೆ ಮಾಡುವುದೊಂದೆ ಪರ್ಯಾಯವಾಗಿದೆ. ಧರ್ಮೋ ರಕ್ಷತಿ ರಕ್ಷತಃ ಎಂಬಂತೆ ಹಿಂದೂ ಸಮಾಜವನ್ನು ಧರ್ಮವೇ ರಕ್ಷಣೆ ಮಾಡುತ್ತದೆ ಮತ್ತು ಧರ್ಮದ ಮೇಲಿನ ಆಘಾತಗಳ ವಿರುದ್ದ ಹೋರಾಡಲು ಅವರಿಗೆ ದೇವತೆಗಳ ಶಕ್ತಿಯು ಸಿಗುತ್ತದೆ ಹಾಗೂ ಅದರಲ್ಲಿ ಅವರು ವಿಜಯಶಾಲಿಗಳಾಗವರು ಎಂದು ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ ಇವರು ಕರೆ ನೀಡಿದರು. ಅವರು ಜುಲೈ ೯ ರಂದು ಇಲ್ಲಿನ ಮೊಗವೀರ ಮಹಾಸಭಾ ಅಂಗಸಂಸ್ಥೆಯಾದ ಯುವಕ ಯುವತಿ ವೃಂದ, ಮಟ್ಟುಪಟ್ನ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾರ್ಗದರ್ಶನ ಮಾಡುತ್ತಿದ್ದರು.
ಪೂ. ರಮಾನಂದ ಗೌಡ ಇವರು ಮಾರ್ಗದರ್ಶನವನ್ನು ಮುಂದುವರಿಸುತ್ತಾ, `ಇಂದು ಸಮಾಜದಲ್ಲಿ ಧರ್ಮಾಚಣೆಯ ಅಭಾವ ಮತ್ತು ಅಧರ್ಮಾಚರಣೆಯ ಪರಿಣಾಮವಾಗಿ ಪೃಕೃತಿಯು ಸಹ ಮುನಿಸಿಕೊಂಡಿದೆ. ಅದರಿಂದ ಅನೇಕ ಪ್ರಾಕೃತಿಕ ವಿಕೋಪಗಳನ್ನು ಎದುರಿಸಬೇಕಾಗಿದೆ. ಇಡೀ ವಿಶ್ವದಲ್ಲಿ ಶಾಂತಿ ನೆಲೆಸಲು ಧರ್ಮಾಚರಣೆ, ಭಗವಂತನ ಉಪಾಸನೆ ಮಾಡುವುದು ಪರ್ಯಾಯವಾಗಿದೆ. ಕಾಲಮಹಿಮೆಯಂತೆ ೨೦೨೫ ರ ನಂತರ ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರದ ಸ್ಥಾಪನೆ ನಿಶ್ಚಿತವಾಗಿ ಆಗಲಿದೆ. ಅದಕ್ಕಾಗಿ ಪ್ರತಿಯೊಬ್ಬರೂ ಭಗವಂತನ ಉಪಾಸನೆಯನ್ನು ಮಾಡಬೇಕು, ಧರ್ಮಾಚರಣೆ ಮಾಡಬೇಕು. ಆಗ ಭಗವಂತನೇ ನಮ್ಮ ರಕ್ಷಣೆ ಮಾಡುವನು’, ಎಂದರು
ಗಮನಾರ್ಹ ಅಂಶಗಳು :
೧. ಈ ಕಾರ್ಯಕ್ರಮದಲ್ಲಿ ಊರಿನ ಗಣ್ಯರು ಸೇರಿದಂತೆ, ವಿದ್ಯಾಲಯದ ಯುವಕ ಯುವತಿಯರು ಸೇರಿದಂತೆ ೭೦ ಜನರು ಉಪಸ್ಥಿತರಿದ್ದರು. ಎಲ್ಲರೂ ಪ್ರತಿ ಭಾನುವಾರ ಧರ್ಮಶಿಕ್ಷಣ ವರ್ಗಕ್ಕೆ ಸೇರುತ್ತೇವೆ. ತಮಗೆ ಸಾಧನೆ ಮತ್ತು ಧರ್ಮಾಚರಣೆ ಬಗ್ಗೆ ಮಾರ್ಗದರ್ಶನ ಮಾಡಿ ಎಂದು ಕೇಳಿಕೊಂಡರು ಮತ್ತು ಮಕ್ಕಳಿಗೆ ಬಾಲಸಂಸ್ಕಾರ ವರ್ಗ ಬೇಕು ಎಂದು ಕೇಳಿಕೊಂಡರು.
೨. ಕಾರ್ಯಕ್ರಮದ ನಂತರ ಅನೇಕ ಜಿಜ್ಞಾಸುಗಳು ಸಂತರಲ್ಲಿ ಧರ್ಮಾಚರಣೆ, ಸಾಧನೆಯ ವಿಷಯದಲ್ಲಿ ಪ್ರಶ್ನೆ ಕೇಳಿ ಉತ್ತರ ಪಡೆದುಕೊಂಡರು.
೩. ಅನೇಕರು ವಾಸ್ತುಶುದ್ಧಿ ನಾಮಪಟ್ಟಿ ಮತ್ತು ಸಾತ್ವಿಕ ಉತ್ಪಾದನೆಗಳನ್ನು ಖರೀದಿಸಿ ಅದರ ಉಪಯೋಗವನ್ನು ಕೇಳಿತಿಳಿದುಕೊಂಡರು.