Menu Close

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರಿಂದ ಹಿಂದೂ ಜನಜಾಗೃತಿ ಸಮಿತಿಯ ರಮೇಶ ಶಿಂದೆ ಇವರಿಗೆ ‘ಸಾಂಸ್ಕೃತಿಕ ಯೋಧ ಪುರಸ್ಕಾರ 2023’ !

ಶ್ರೀ. ರಮೇಶ ಶಿಂದೆಯವರಿಗೆ ಪುರಸ್ಕಾರ ನೀಡುತ್ತಿರುವ ಲೋಕಸಭೆಯ ಮಾಜಿ ಅಧ್ಯಕ್ಷೆ ಸುಮಿತ್ರಾ ಮಹಾಜನ ಮತ್ತು ಉತ್ತರಪ್ರದೇಶ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಜಿಯವರು ಹಾಗೂ ಶ್ರೀ. ಉದಯ ಮಾಹೂರಕರ

ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ ಇವರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾನ್ಯ ಯೋಗಿ ಆದಿತ್ಯನಾಥಜಿ ಮತ್ತು ಮಾಜಿ ಲೋಕಸಭಾ ಅಧ್ಯಕ್ಷೆ ಸುಮಿತ್ರಾ ಮಹಾಜನಜಿ ಇವರ ಹಸ್ತದಿಂದ ‘ಸಾಂಸ್ಕೃತಿಕ ಯೋಧ ಪುರಸ್ಕಾರ 2023’ ಪ್ರದಾನಿಸಲಾಯಿತು. ‘ನೆನಪಿನ ಕಾಣಿಕೆ’ ಮತ್ತು ಒಂದು ಲಕ್ಷ ರೂಪಾಯಿಯ ಚೆಕ್ ಹೀಗೆ ಈ ಪುರಸ್ಕಾರದ ಸ್ವರೂಪವಾಗಿದೆ. ಈ ಪುರಸ್ಕಾರ ವಿತರಣಾ ಸಮಾರಂಭವನ್ನು ‘ಸೇವ್ ಕಲ್ಚರ್ ಸೇವ್ ಇಂಡಿಯಾ’ ಫೌಂಡೇಶನ್ ವತಿಯಿಂದ ಉತ್ತರ ಪ್ರದೇಶ ರಾಜ್ಯದಲ್ಲಿನ ‘ಗ್ರೇಟರ್ ನೋಯ್ಡಾ’ದ ಗೌತಮಬುದ್ಧ ವಿದ್ಯಾಪೀಠದಲ್ಲಿ ಜರುಗಿತು. ಈ ಸಮಯದಲ್ಲಿ ವ್ಯಾಸಪೀಠದಲ್ಲಿ ‘ಸೇವ್ ಕಲ್ಚರ್ ಸೇವ್ ಇಂಡಿಯಾ’ ಫೌಂಡೇಶನ್ ಇದರ ಸಂಸ್ಥಾಪಕರು ಹಾಗೂ ಭಾರತದ ಮಾಹಿತಿ ಆಯುಕ್ತರಾದ ಶ್ರೀ. ಉದಯ ಮಾಹುರಕರ ಇವರು ಉಪಸ್ಥಿತರಿದ್ದರು. ರಾಷ್ಟ್ರ ಮತ್ತು ಭಾರತೀಯ ಸಂಸ್ಕೃತಿಯ ಮೇಲೆ ಕೆಟ್ಟದೃಷ್ಟಿ ಇಟ್ಟಿರುವವರ ವಿರುದ್ಧ ಸತತ ಸಾಂವಿಧಾನಿಕ ಮಾರ್ಗದಲ್ಲಿ ಸಂಘರ್ಷ ಮಾಡುವುದು, ಚಿತ್ರಕಾರ ಎಮ್.ಎಫ್. ಹುಸೇನ್ ಮತ್ತು ಡಾ. ಜಾಕೀರ್ ನಾಯಿಕರಂತಹ ರಾಷ್ಟ್ರ ಮತ್ತು ಸಮಾಜ ವಿರೋಧಿ ಸ್ವರೂಪವನ್ನು ಜನರೆದುರು ತರುವುದು ಹಾಗೂ ಭಾರತೀಯ ಸಂಸ್ಕೃತಿಯ ರಕ್ಷಣೆಗಾಗಿ ಪುಸ್ತಕಗಳನ್ನು ಬರೆದುದಕ್ಕಾಗಿ ಈ ಪ್ರಶಸ್ತಿಯನ್ನು ಶ್ರೀ. ರಮೇಶ ಶಿಂದೆ ಇವರಿಗೆ ನೀಡುತ್ತಿರುವುದಾಗಿ ಘೋಷಿಸಲಾಯಿತು.


ಈ ಸಮಯದಲ್ಲಿ ವಿಕೃತ ಸಾಹಿತ್ಯ ನಿರ್ಮಿಸಿ ದೇಶದಲ್ಲಿನ ಯುವ ಪೀಳಿಗೆಯ ಜೀವನ ನಾಶ ಮಾಡುವವರನ್ನು ಬಯಲಿಗೆಳೆಯುವುದಕ್ಕಾಗಿ ‘ಕೃಪಯಾ ಧ್ಯಾನ ದೇ’ ಈ ಪ್ರದರ್ಶನದ ಉದ್ಘಾಟನೆಯನ್ನು ಮುಖ್ಯಮಂತ್ರಿ ಮಾನ್ಯ ಯೋಗಿ ಆದಿತ್ಯನಾಥ ಇವರಿಂದ ಮಾಡಲಾಯಿತು. ಈ ಸಮಯದಲ್ಲಿ ಮುಖ್ಯಮಂತ್ರಿ ಯೋಗೀಜಿಯವರು ಮಾತನಾಡುತ್ತಾ, ಭಾರತೀಯರು ಅನೇಕ ವರ್ಷಗಳಿಂದ ಬ್ರಿಟಿಷ್ ಮತ್ತು ಮೊಘಲರಿಂದ ದೌರ್ಜನ್ಯವನ್ನು ಸಹಿಸಿದ್ದಾರೆ ಆದರೆ ಭಾರತೀಯ ಸಂಸ್ಕೃತಿ ಮತ್ತು ದೇವಸ್ಥಾನಗಳ ಮೇಲೆ ಅವರು ಆಘಾತ ಮಾಡಲು ಪ್ರಾರಂಭಿಸಿದಾಗಿನಿಂದ ಭಾರತೀಯರು ತಕ್ಕ ಪ್ರತ್ಯುತ್ತರ ನೀಡಲು ಆರಂಭಿಸಿದರು. ಭಾರತೀಯರು ಎಂದಿಗೂ ಸಂಸ್ಕೃತಿಯ ಮೇಲಿನ ದಾಳಿ ಸಹಿಸಲಿಲ್ಲ. ಈಗ ಡಿಜಿಟಲ್ ಮಾಧ್ಯಮದಿಂದ ಸಂಸ್ಕೃತಿಯ ಮೇಲೆ ದಾಳಿ ನಡೆಯುತ್ತಿದೆ. ಇತ್ತೀಚಿಗೆ ‘ಗೇಮಿಂಗ್ ಆಪ್’ ಮೂಲಕ ಮತಾಂತರ ಮಾಡಲಾಗುತ್ತಿರುವ ಪ್ರಕರಣ ಉತ್ತರ ಪ್ರದೇಶದ ಪೊಲೀಸರು ಬೆಳಕಿಗೆ ತಂದರು. ದೆಹಲಿಯ ಘಟನೆ ಎಲ್ಲರೂ ಕೇಳಿದ್ದೇವೆ. ಅಲ್ಲಿ ಹುಡುಗಿಯರನ್ನು ಪ್ರೇಮದ ಬಲೆಗೆ ಸಿಲುಕಿಸಿ ನಂತರ ಅವರ ಹತ್ಯೆ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ನಾವು ಮೊಟ್ಟಮೊದಲು ಕಾನೂನು ಜಾರಿಗೊಳಿಸಿದೆವು; ಆದರೆ ಪ್ರಾಥಮಿಕ ಹಂತದಲ್ಲಿ ಪ್ರತಿಯೊಂದು ಕುಟುಂಬದಲ್ಲಿ ಜಾಗೃತಿ ನಿರ್ಮಾಣವಾಗುವುದು ಬಹಳ ಅವಶ್ಯಕವಾಗಿದೆ, ಎಂದು ಹೇಳಿದರು.

ಈ ಸಮಯದಲ್ಲಿ ಸಂಸ್ಕೃತಿ ರಕ್ಷಣೆಗಾಗಿ ‘ಹಿಂದೂ ಫ್ರಂಟ್ ಫಾರ್ ಜಸ್ಟಿಸ್’ನ ವಕ್ತಾರರು ಹಾಗೂ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿಷ್ಣು ಶಂಕರ ಜೈನ್ ಇವರಿಗೂ ಪುರಸ್ಕಾರ ನೀಡಲಾಯಿತು. ಇವರ ಜೊತೆಗೆ ಚಲನಚಿತ್ರ ನಿರ್ಮಾಪಕ ಪ್ರವೀಣ ಚತುರ್ವೇದಿ, ಪತ್ರಕರ್ತೆ ಸ್ವಾತಿ ಗೋಯಲ್ ಶರ್ಮಾ, ಪತ್ರಕರ್ತ ಪ್ರದೀಪ್ ಭಂಡಾರಿ, ವೈಶಾಲಿ ಶಾಹ, ಮನೀಷ ಬರ್ದಿಯ, ಸಂಜೀವ ನೇವರ ಹೀಗೆ ಏಳು ಜನರಿಗೆ ‘ಸಾಂಸ್ಕೃತಿಕ ಯೋಧ ಪುರಸ್ಕಾರ 2023’ ನೀಡಿ ಗೌರವಿಸಲಾಯಿತು.

Related News

Leave a Reply

Your email address will not be published. Required fields are marked *