ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದಲ್ಲಿ ಪ್ರಖರ ಹಿಂದುತ್ವನಿಷ್ಠ ಶಾಸಕ ಟಿ. ರಾಜಾ ಸಿಂಗ್ ಅವರಿಂದ ‘ಹಿಂದೂ ರಾಷ್ಟ್ರ’ ಸ್ಥಾಪನೆಯ ಘೋಷಣೆ !
ಟಿ. ರಾಜಾ ಸಿಂಹ, ಶಾಸಕರು, ತೆಲಂಗಾಣ
ಗೋವಾ, ಜೂ.22 – ರಾಜಕೀಯ ಎಂದರೆ ಜನರು ಆಯ್ಕೆ ಮಾಡುವವರೆಗೆ ಮಾತ್ರ. ನಾನು ಹಿಂದುತ್ವಕ್ಕಾಗಿ ಬದುಕಬೇಕಿದೆ. ಧರ್ಮಕ್ಕಾಗಿ ರಾಜಕೀಯ ಬಿಡಲು ಸಿದ್ಧನಿದ್ದೇನೆ. ಇಂದೋ ನಾಳೆಯೋ ಸಾವು ಖಚಿತ ಎಂದಾದರೆ ಇತಿಹಾಸದಲ್ಲಿ ದಾಖಲಾಗುವ ಹಾಗೆ ಸಾಯಬಾರದೇಕೆ ? ದೇಶ ಮತ್ತು ಧರ್ಮಕ್ಕಾಗಿ ಸಾಯಲೂ ಸಿದ್ಧನಿದ್ದೇನೆ. ಹಿಂದೂಗಳು ಹೆದರಬಾರದು. ಹಿಂದೂ ರಾಷ್ಟ್ರ ಸ್ಥಾಪನೆಯ ಸಂಕಲ್ಪವನ್ನು ಈಡೇರಿಸಲು ನಾವು ಹುಟ್ಟಿದ್ದೇವೆ ಎಂದು ಭಾಗ್ಯನಗರದ ಪ್ರಖರ ಹಿಂದುತ್ವನಿಷ್ಠ ಶಾಸಕ ಟಿ. ರಾಜಾಸಿಂಗ್ ಇವರು ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ವೇದಿಕೆಯಲ್ಲಿ ಗರ್ಜಿಸಿದರು. ಈ ಸಂದರ್ಭದಲ್ಲಿ ಪ್ರಖರ ಹಿಂದುತ್ವನಿಷ್ಠ ಪತ್ರಿಕೆಯಾದ ‘ಸನಾತನ ಪ್ರಭಾತ’ನ ದೈನಿಕದ ಸಹ ಸಂಪಾದಕರಾದ ಶ್ರೀ. ಸಂದೀಪ ಶಿಂದೆ, ಅಖಿಲ ಭಾರತ ಹಿಂದೂ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶ್ರೀ. ಮುನ್ನಾ ಕುಮಾರ ಶರ್ಮಾ (ನವದೆಹಲಿ), ಹಿಂದೂ ಜನಜಾಗೃತಿ ಸಮಿತಿಯ ಧರ್ಮಪ್ರಚಾರಕ ಸದ್ಗುರು ನೀಲೇಶ ಸಿಂಗಬಾಳ ಇವರು ಉಪಸ್ಥಿತರಿದ್ದರು.