ಹಾಸನ : ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಹಾಸನದ ಸಾಧ್ಯ ಟ್ರಸ್ಟ್ ನ ವಸತಿಯುತ ವಿಶೇಷ ಶಾಲಾ ಮಕ್ಕಳಿಗೆ ನೋಟ್ ಬುಕ್ ಗಳನ್ನು ವಿತರಿಸಲಾಯಿತು. ಈ ವೇಳೆ ಶಾಲೆ ಮುಖ್ಯಸ್ಥರು, ಹಿಂದೂ ಜನಜಾಗೃತಿ ಸಮಿತಿಯ ಸೌ. ಕಲಾ ಹಾಗೂ ಸೌ. ವೇದ ಇವರು ಉಪಸ್ಥಿತರಿದ್ದರು. ಸುಮಾರು 40 ಮಕ್ಕಳು ಇದರ ಲಾಭ ಪಡೆದುಕೊಂಡರು.
ಸೌ. ಕಲಾ ಇವರು ಮಾತನಾಡುತ್ತಾ ಹಿಂದೂ ಜನಜಾಗೃತಿ ಸಮಿತಿಯು ಕಳೆದ ಅನೇಕ ವರ್ಷಗಳಿಂದ ಮಕ್ಕಳಲ್ಲಿ ಉತ್ತಮ ಸಂಸ್ಕಾರಗಳನ್ನು ಮೂಡಿಸಲು ಬಾಲ ಸಂಸ್ಕಾರ ವರ್ಗ, ಪ್ರತಿಯೊಬ್ಬರೂ ಧರ್ಮಚರಣೆಯನ್ನು ಮಾಡಬೇಕೆಂಬ ಉದ್ದೇಶದಿಂದ ಧರ್ಮ ಶಿಕ್ಷಣ ವರ್ಗ, ಸ್ವರಕ್ಷಣೆಗಾಗಿ ಪ್ರಶಿಕ್ಷಣ ವರ್ಗ ಹೀಗೆ ಅನೇಕ ಉಪಕ್ರಮಗಳನ್ನು ಉಚಿತವಾಗಿ ನಡೆಸುತ್ತಿದೆ ಎಂಬ ಬಗ್ಗೆ ಮಾಹಿತಿಯನ್ನು ತಿಳಿಸಿದರು.