ಪೂ. ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ
ಗೋವಾ – ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಎಲ್ಲಾ ಧರ್ಮಾಭಿಮಾನಿ ಹಿಂದೂಗಳು ಧರ್ಮಯುದ್ಧದಲ್ಲಿ ಹೋರಾಡುತ್ತಿದ್ದಾರೆ. ಆದ್ದರಿಂದ, ಈ ಕಾರ್ಯದಲ್ಲಿ ಸ್ಥೂಲ ಮತ್ತು ಸೂಕ್ಷ್ಮ ಸ್ತರದಲ್ಲಿ ವಿವಿಧ ಅಡಚಣೆಗಳು ಬರುತ್ತಿರುತ್ತವೆ. ಆದರೂ ಭಗವಂತನ ಕೃಪೆಯಿಂದ ಈ ಅಡಚಣೆಗಳನ್ನು ಮೆಟ್ಟಿನಿಂತು ಮುನ್ನಡೆಯಲು ಪ್ರಯತ್ನಿಸುತ್ತೇವೆ ಎಂದು ಸನಾತನ ಸಂಸ್ಥೆಯ ಧರ್ಮಪ್ರಚಾರಕ ಪೂ. ರಮಾನಂದ ಗೌಡ ಅವರು ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದ ಕೊನೆಯ ದಿನದಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ಹೀಗೆಂದರು
1. ಈ ಧರ್ಮಯುದ್ಧದ ಹೋರಾಟದಲ್ಲಿ ವಿವಿಧ ಅಡಚಣೆಗಳು ಬರುತ್ತವೆ. ಅದನ್ನು ಹೋಗಲಾಡಿಸಲು ಸಾಧನೆ ಮಾಡಬೇಕು. ಇದರಿಂದ ನಮಗೆ ಆಧ್ಯಾತ್ಮಿಕ ಶಕ್ತಿ ಸಿಗುತ್ತದೆ, ಹಾಗೆಯೇ ನಮ್ಮ ಕಾರ್ಯದ ಹಿಂದೆ ದೇವರ ಅಧಿಷ್ಠಾನ ಸಿಗುತ್ತದೆ. ಆದ್ದರಿಂದ ನಾವು ನಮ್ಮ ಕಾರ್ಯವನ್ನು ಹೆಚ್ಚು ಉತ್ತಮವಾಗಿ ಮಾಡಬಹುದು ಮತ್ತು ನಿರಂತರವಾಗಿ ಮುಂದುವರೆಯಬಹುದು.
2. ಸಾಧನೆಯಿಂದ ನಮ್ಮ ಸುತ್ತಲೂ ಸೂಕ್ಷ್ಮವಾದ ರಕ್ಷಣಾತ್ಮಕ ಕವಚ ನಿರ್ಮಾಣವಾಗುತ್ತದೆ. ಇದರಿಂದ ಕೆಟ್ಟಶಕ್ತಿಗಳಿಂದ ನಮ್ಮ ರಕ್ಷಣೆಯಾಗುತ್ತದೆ.
3. ಪ್ರಾರಬ್ಧಕ್ಕನುಸಾರ, ಪ್ರತಿಯೊಬ್ಬರೂ ಸುಖ-ದುಃಖಗಳನ್ನು ಅನುಭವಿಸಲೇಬೇಕು. ಧರ್ಮಕಾರ್ಯ ಮಾಡುವಾಗ ಕೆಲವೊಮ್ಮೆ ಪೊಲೀಸರಿಂದ ಒತ್ತಡವಿರುತ್ತದೆ. ಕೆಲವೊಮ್ಮೆ ಸಮಾಜದ ವಿರೋಧ ಇರುತ್ತದೆ. ನಮ್ಮ ಸಾಧನೆ ಇದ್ದರೆ, ಅಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ಸ್ಥಿರವಾಗಿರಬಹುದು. ಹಾಗೆಯೇ ನಮ್ಮ ಕಾರ್ಯವು ಅಡೆತಡೆಯಿಲ್ಲದೆ ಅಖಂಡವಾಗಿ ಮುಂದುವರಿಸಬಹುದು.
4. ಸನಾತನದ ಸಾಧಕರು ದೇವರ ಮೇಲಿನ ಶ್ರದ್ಧೆ ಇಟ್ಟಿರುವುದರಿಂದ ಅವರ ಮುಖದಲ್ಲಿ ತೇಜ ಇರುತ್ತದೆ. ಆದ್ದರಿಂದ, ಕೆಟ್ಟಶಕ್ತಿಗಳಳ ತೊಂದರೆಯಿಂದ ಅವರ ರಕ್ಷಣೆಯಾಗುತ್ತದೆ.