ಮೇವಾತ ನಂತಹ ಗಲಭೆಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಹಿಂದೂಗಳು ಸ್ವ ಸಂರಕ್ಷಣಾ ಪ್ರಶಿಕ್ಷಣ ಪಡೆಯಬೇಕು ! – ಮೇಜರ್ ಸರಸ ತ್ರಿಪಾಠಿ
ಮೇಜರ್ ಸರಸ ತ್ರಿಪಾಠಿ
ಹರಿಯಾಣದ ಮೇವಾತದಲ್ಲಿ ಗಲಭೆಯ ಮೊದಲು ಹಿಂಸಾಚಾರದ ಸಾಮಾಗ್ರಿಗಳು, ಶಸ್ತ್ರಾಸ್ತ್ರಗಳ ಸಂಗ್ರಹ ನಡೆದಿತ್ತು, ಆಗ ಅಲ್ಲಿಯ ಪೊಲೀಸ್, ಸರಕಾರಕ್ಕೆ ಇದರ ಅಂದಾಜು ಸಿಗದಿರಲು ಕಾರಣವೇನು ?ಮೇವಾತದಲ್ಲಿ ಪೊಲೀಸ್ ಬಂದೋಬಸ್ತ್ ಎಲ್ಲಿ ಇತ್ತು ? ಇಂದು ಹಿಂದುಗಳು ನಿಶಸ್ತ್ರರಾಗಿದ್ದಾರೆ. ಸಿಖ್ ಬಾಂಧವರಿಗೆ ಸ್ವಂತ ರಕ್ಷಣೆಗಾಗಿ ಕೃಪಾಣ(ಚಿಕ್ಕ ಕತ್ತಿ) ಜೊತೆಗೆ ಇಟ್ಟುಕೊಳ್ಳಲು ಅನುಮತಿ ಇದೆ. ಮೇವಾತದಂತಹ ಗಲಭೆಯಲ್ಲಿ ತಮ್ಮನ್ನು ರಕ್ಷಿಸಿಕೊಳ್ಳಲು ಹಿಂದೂಗಳು ಶಸ್ತ್ರಗಳ ಪ್ರಶಿಕ್ಷಣ ಪಡೆಯಲೇಬೇಕು. ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಲು ಹಿಂದೂಗಳು ಒತ್ತಾಯಿಸಬೇಕು. ಈ ಹಿಂದೂ ರಾಷ್ಟ್ರದಲ್ಲಿ ಹಿಂದೂಗಳ ಮೇಲೆ ಅತ್ಯಾಚಾರಗಳಾಗಲಾರದು, ಮತಾಂತರಕ್ಕೆ ನಿಷೇಧ ಇರುವುದು ಮತ್ತು ಸನಾತನ ಹಿಂದೂ ಧರ್ಮದ ರಕ್ಷಣೆ ಮಾಡಲಾಗುವುದು, ಎಂದು ‘ಪ್ರಜ್ಞಾ ಮಠ ಪಬ್ಲಿಕೇಶನ್ ’ನ ಲೇಖಕ ಮತ್ತು (ಸೇವಾ ನಿವೃತ್ತ) ಮೇಜರ್ ಶ್ರೀ. ಸರಸ ತ್ರಿಪಾಠಿ ಇವರು ಪ್ರತಿಪಾದಿಸಿದರು. ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಆಯೋಜಿಸಿದ್ದ ‘ಮೇವಾತವೋ, ಮಿನಿ ಪಾಕಿಸ್ತಾನವೋ’ ಎಂಬ ವಿಷಯದ ಬಗ್ಗೆ ನಡೆದ ಆನ್ ಲೈನ್ ವಿಶೇಷ ಸಂವಾದದಲ್ಲಿ ಅವರು ಮಾತನಾಡುತ್ತಿದ್ದರು.
ಶ್ರೀ ಸರಸ ತ್ರಿಪಾಠಿ ಮಾತು ಮುಂದುವರೆಸುತ್ತಾ ಹೀಗೆಂದರು, ಮೇವಾತದ ಗಲಭೆಯಲ್ಲಿ ರೋಹಿಂಗ್ಯಾ ಮುಸಲ್ಮಾನರೂ ಪಾಲ್ಗೊಂಡಿದ್ದರು. ಮ್ಯಾನಮಾರನಿಂದ ಓಡಿಸಿದ ನಂತರ ಅವರು ಬಾಂಗ್ಲಾದೇಶದ ಮೂಲಕ ಮೊದಲು ಬಂಗಾಳ ನಂತರ ಬಿಹಾರ, ಉತ್ತರ ಪ್ರದೇಶ, ದೆಹಲಿ, ಕಾಶ್ಮೀರ, ಹರಿಯಾಣ ಮುಂತಾದ ಬೇರೆ ಬೇರೆ ಸ್ಥಳಗಳಲ್ಲಿ ವಾಸ್ತವ್ಯ ಹೂಡಿದ್ದಾರೆ. ಅವರಿಗೆ ಮನೆ, ನೀರು, ಆಧಾರ ಕಾರ್ಡ್ ಉಪಲಬ್ಧ ಮಾಡಿ ಕೊಡಲಾಗುತ್ತಿದೆ. ಕೇಂದ್ರ ಸರಕಾರವು ಈ ರೋಹಿಂಗ್ಯಾಗಳನ್ನು ಬಂದಿವಾಸದ ಶಿಬಿರಗಳಲ್ಲಿರಿಸಿ ಮ್ಯಾನಮಾರ್ಗೆ ವಾಪಾಸು ಕಳುಹಿಸಬೇಕು.
ಭಜರಂಗದಳದ ಹರಿಯಾಣ ಪ್ರಾಂತ ಸುರಕ್ಷಾ ಪ್ರಮುಖ ಶ್ರೀ .ಕೃಷ್ಣ ಗುಜ್ಜರ ಇವರು, ಮೇವಾತದ ಗಲಭೆಯ ತಯಾರಿ ೧ ತಿಂಗಳಿಂದ ನಡೆಯುತ್ತಿತ್ತು. ಈ ಗಲಭೆಯಲ್ಲಿ ರೋಹಿಂಗ್ಯಾ ಜೊತೆಗೆ ಸ್ಥಳೀಯ ಮುಸಲ್ಮಾನರು ಪಾಲ್ಗೊಂಡಿದ್ದರು. ಮೇವಾತದಲ್ಲಿ ಒಟ್ಟು 102 ಗ್ರಾಮಗಳು ಹಿಂದೂ ರಹಿತವಾಗಿವೆ. ಈಗ ಅಲ್ಲಿ ಉಳಿದಿರುವ ಹಿಂದೂಗಳು ಕೂಡ ಪಲಾಯನ ಮಾಡಬೇಕೇ? ಮೇವಾತದಲ್ಲಿ ಕೆಲವು ಸ್ಥಳಗಳಲ್ಲಿ ಬುಲ್ಡೋಜರ್ ನಡೆಸಿ ಹಿಂದುಗಳನ್ನು ಸಂತೋಷಪಡಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ ಎಲ್ಲಿಯವರೆಗೆ ಗಲಭೆಯಲ್ಲಿ ಸಹಭಾಗಿ ಆಗಿರುವ ಎಲ್ಲರ ಮನೆಯ ಮೇಲೆ ಬುಲ್ಡೋಜರ್ ನಡೆಸಿ ಗಲಭೆಕೋರರ ಮೇಲೆ ಕಠಿಣ ಕಾರ್ಯಾಚರಣೆ ನಡೆಯುವುದಿಲ್ಲವೋ; ಅಲ್ಲಿಯವರೆಗೆ ಈ ಗಲಭೆಯಲ್ಲಿ ಹಿಂದೂಗಳ ಸುರಕ್ಷೆಗಾಗಿ ಬಲಿದಾನ ನೀಡಿದ ಬಜರಂಗದಳದ ಕಾರ್ಯಕರ್ತರ ಆತ್ಮಕ್ಕೆ ಶಾಂತಿ ಸಿಗಲಾರದು ಎಂದರು.
ಸೋನಿಪತ (ಹರಿಯಾಣ) ಇಲ್ಲಿಯ ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಮಾತೃ ಶಕ್ತಿ ಸಂಯೋಜಕಿ ಸೌ. ಪಿಂಕಿ ಶರ್ಮ ಇವರು, ಮೇವಾತದಲ್ಲಿ ನಾವು ದೇವಸ್ಥಾನದಲ್ಲಿ ಕೇವಲ ದರ್ಶನಕ್ಕಾಗಿ ಹೋಗಿರುವಾಗ ಹಿಂದೂಗಳ ಮೇಲೆ ದಾಳಿ ನಡೆಸಿದ್ದಾರೆ. ಇದರಲ್ಲಿ ದಾಳಿಕೋರರು ಚಿಕ್ಕ ಮಕ್ಕಳು, ವೃದ್ಧರು ಮತ್ತು ಮಹಿಳೆಯರನ್ನು ಕೂಡ ಬಿಡಲಿಲ್ಲ. ಹಿಂದೂಗಳು ದೇವಸ್ಥಾನಕ್ಕೆ ಹೋಗುವುದು ಮತ್ತು ರಾಮ ನಾಮ ಜಪಿಸುವುದು ಅವರಿಗೆ ಸಹಿಸಲಾಗಲಿಲ್ಲ; ಆದರೆ ಹಿಂದೂಗಳು ದಿನದಲ್ಲಿ ೫ ಸಾರಿ ಭೊಂಗಾದ ಮೂಲಕ ‘ಅಲ್ಲಾಹು ಅಕ್ಬರ್ ‘ ಈ ಘೋಷಣೆಗಳನ್ನು ಕೇಳಬೇಕು ? ಮುಂಬರುವ ಸಮಯ ಹಿಂದೂಗಳಿಗಾಗಿ ಬಹಳ ಕಠಿಣವಾಗಿದೆ. ಮೇವಾತದಲ್ಲಿ ಅತ್ಯಂತ ಬರ್ಬರವಾಗಿ ಹಿಂದೂಗಳ ಹತ್ಯೆ ಮಾಡಲಾಗಿದೆ. ಸರಕಾರದಿಂದ ಹಿಂದೂಗಳ ರಕ್ಷಣೆ ಮಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಹಿಂದೂಗಳು ಸೆಕ್ಯುಲರವಾದದಿಂದ ಹೊರಬಂದು ಈಗ ಜಾಗೃತವಾಗಬೇಕು ಎಂದರು.