Menu Close

ಚಿಕ್ಕಮಗಳೂರಿನ ಪ್ರಸಿದ್ಧ ದೇವೀರಮ್ಮನ ದೇವಸ್ಥಾನದಲ್ಲಿ ಡ್ರೆಸ್ ಕೋಡ್ ಜಾರಿ

ದೇವಸ್ಥಾನದೊಳಗೆ ಮೊಬೈಲ್ ಗೆ ಸಹ ನಿಷೇಧ

ಚಿಕ್ಕಮಗಳೂರು – ತಾಲೂಕಿನ ಪ್ರಸಿದ್ಧ ದೇವೀರಮ್ಮ ದೇವಸ್ಥಾನದಲ್ಲಿ ಡ್ರೆಸ್ ಕೋಡ್ ಜಾರಿ ಮಾಡಲಾಗಿದೆ. ಧಾರ್ಮಿಕ ದತ್ತಿ ಇಲಾಖೆ ಹಾಗೂ ದೇವಸ್ಥಾನ ಆಡಳಿತ ಮಂಡಳಿಯು, ದರ್ಶನಕ್ಕೆ ಆಗಮಿಸುವ ಭಕ್ತರು ಸಾಂಪ್ರದಾಯಿಕ ಉಡುಗೆಯಲ್ಲಿ ಬರಬೇಕು ಎಂದು ತಿಳಸಿದೆ. ದೇವಸ್ಥಾನದಲ್ಲಿ ಫಲಕವನ್ನು ಅಳವಡಿಸಿದ್ದು ಅದರಲ್ಲಿ, ದೇವಸ್ಥಾನಕ್ಕೆ ಬರುವ ಭಕ್ತರು ಸ್ಕರ್ಟ್, ಮಿಡಿ, ಸ್ಲೀವ್ ಲೆಸ್ ಡ್ರಸ್, ಪ್ಯಾಂಟ್, ಸಾಕ್ಸ್ ಹಾಕಿ ಬರುವಂತಿಲ್ಲ ಎಂದು ಬರೆಯಲಾಗಿದೆ. ಇದರೊಂದಿಗೆ ಪರಿಸರದಲ್ಲಿ ಪ್ರೀ ವೆಡ್ಡಿಂಗ್ ಫೋಟೊ ಶೂಟ್ ಗೂ ಅವಕಾಶ ಇಲ್ಲ ಎಂದ ಸೂಚನೆಯನ್ನೂ ಬರೆಯಲಾಗಿದೆ.

 

ದೀಪಾವಳಿಯ ವೇಳೆ ಲಕ್ಷಾಂತರ ಭಕ್ತರು ದೇವರ ದರ್ಶನಕ್ಕೆಂದು ಬರುತ್ತಾರೆ, ಪ್ರತೀ ವರ್ಷ ಲಕ್ಷಾಂತರ ಭಕ್ತರು ದೇವೀರಮ್ಮನ ಬೆಟ್ಟ ಹತ್ತುತ್ತಾರೆ, ಯುವಕಯುವತಿಯರು ಬರುತ್ತಾರೆ ಎಲ್ಲರಿಗೂ ಸಾಂಪ್ರದಾಯಿಕ ಉಡುಗೆಯಲ್ಲೇ ಬರಬೇಕು ಎಂದು ಆಡಳಿತ ಮಂಡಳಿ ತಿಳಿಸಿದೆ.

Related News

Leave a Reply

Your email address will not be published. Required fields are marked *