ಹಿಂದೂ ಜನಜಾಗೃತಿ ಸಮಿತಿಯಿಂದ ಬೆಂಗಳೂರಿನ ಎಸ್.ಜೆ.ಆರ್ ಶಾಲೆಯಲ್ಲಿ ಪ್ರಬೋಧನೆ
ಬೆಂಗಳೂರು : ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಮಂಗಳವಾರ ಇಲ್ಲಿನ ಕೆಂಗೇರಿ ಉಪನಗರದಲ್ಲಿರುವ ಎಸ್.ಜೆ.ಆರ್ ಶಾಲೆಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ‘ರಾಷ್ಟ್ರ ಧ್ವಜ ಗೌರವಿಸಿ` ಅಭಿಯಾನದ ಅಂತರ್ಗತ ಪ್ರತಿಜ್ಞಾ ವಿಧಿ ಮಾಡಿಸಲಾಯಿತು. 300ಕ್ಕೂ ಅಧಿಕ ವಿದ್ಯಾರ್ಥಿಗಳು ರಾಷ್ಟ್ರೀಯ ಚಿಹ್ನೆಗಳ ಗೌರವ ಕಾಪಾಡುವುದಾಗಿ ಪ್ರತಿಜ್ಞೆ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಕಾರ್ಯಕರ್ತೆ ಸೌ. ಸಂಜನಾ ದೀವಿಗೆ ಮಾತನಾಡಿ, ‘ರಾಷ್ಟ್ರಧ್ವಜವು ರಾಷ್ಟ್ರದ ಆತ್ಮಾಭಿಮಾನವಾಗಿದೆ. 15 ಆಗಸ್ಟ್ ಹಾಗೂ 26 ಜನವರಿಯಂದು ಈ ರಾಷ್ಟ್ರಧ್ವಜವನ್ನು ಅಭಿಮಾನದೊಂದಿಗೆ ಪ್ರದರ್ಶಿಸಲಾಗುತ್ತದೆ. ಆದರೆ ಅದೇ ದಿನ ಇದೇ ಕಾಗದ/ಪ್ಲಾಸ್ಟಿಕ್‌ನ ಚಿಕ್ಕ ಚಿಕ್ಕ ರಾಷ್ಟ್ರಧ್ವಜಗಳು ರಸ್ತೆಗಳ ಮೇಲೆ, ಕಸದ ತೊಟ್ಟಿ ಮತ್ತು ಚರಂಡಿಗಳಲ್ಲಿ ಹರಿದ ಅವಸ್ಥೆಯಲ್ಲಿ ಬಿದ್ದಿರುವುದು ಕಂಡು ಬರುತ್ತದೆ. ಪ್ಲಾಸ್ಟಿಕ್ ಧ್ವಜಗಳು ಕೂಡಲೇ ನಾಶವಾಗುವುದಿಲ್ಲ, ಆದುದರಿಂದ ಅನೇಕ ದಿನಗಳವರೆಗೆ ಈ ರಾಷ್ಟ್ರಧ್ವಜಗಳ ಅನಾದರವಾಗುವುದನ್ನು ನೋಡಬೇಕಾಗುತ್ತದೆ. ಅದಕ್ಕಾಗಿ ನಾವೆಲ್ಲರೂ ನಮ್ಮ ರಾಷ್ಟ್ರ ಧ್ವಜದ ಅಪಮಾನವನ್ನು ತಡೆಯೋಣ ಮತ್ತು ರಾಷ್ಟ್ರ ಧ್ವಜದ ಗೌರವವನ್ನು ಕಾಪಾಡೋಣ` ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಮಿತಿಯ ಕಾರ್ಯಕರ್ತರಾದ ಶ್ರೀ. ದೇವರಾಜ, ಸೌ. ವಿಜಯಲಕ್ಷ್ಮೀ ಶೆಟ್ಟಿ, ಶ್ರೀ. ನಂದನ ದೀವಿಗೆ ಹಾಗೂ ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ಪ್ರತಿಜ್ಞೆ ಸ್ವೀಕರಿಸುತ್ತಿರುವ ವಿದ್ಯಾರ್ಥಿಗಳು