ಮಕ್ಕಳಿಗೆ ನಿಯಮಿತವಾಗಿ ಶಾಸ್ತ್ರಜ್ಞ, ಉದ್ಯೋಗಪತಿ, ಕುಶಾಗ್ರ ಬುದ್ಧಿಮತ್ತೆಯ ಪ್ರಸಿದ್ಧ ವ್ಯಕ್ತಿಯ ಆರಿಸಿದ ಕಥೆಗಳನ್ನು ಹೇಳಬೇಕು ಮತ್ತು ಅದರಂತೆ ಇಷ್ಟು ದೊಡ್ಡ ಪದವಿಗೆ ತಲುಪಲು ಆ ವ್ಯಕ್ತಿಯು ಎಷ್ಟು ಶ್ರಮವನ್ನು ಮಾಡಬೇಕಾಯಿತು, ಎಷ್ಟು ಅಧ್ಯಯನವನ್ನು ಮಾಡಬೇಕಾಯಿತು, ಎನ್ನುವುದರ ಮಾಹಿತಿಯನ್ನು ಮಕ್ಕಳ ಮನಸ್ಸಿನ ಮೇಲೆ ಪರಿಣಾಮಕಾರಿಯಾಗಿ ಚಿಗುರೊಡೆಯುವ ಹಾಗೆ ನೋಡಿಕೊಳ್ಳಬೇಕು. ಕಠೋರ ಪರಿಶ್ರಮಕ್ಕೆ ಪರ್ಯಾಯವಿಲ್ಲ ಎನ್ನುವುದರ ಬಗ್ಗೆ ಅವರ ಮನಸ್ಸಿನಲ್ಲಿ ಸಂದೇಹ ಉಳಿದುಕೊಳ್ಳಬಾರದು.ಮಗುವಿನ ಮನಸ್ಸಿನ ಮೇಲೆ ಏನನ್ನು ಬಿಂಬಿಸಬೇಕೆಂದರೆ, ಸ್ವಕರ್ಮಫಲವನ್ನು ಭೋಗಿಸಬೇಕಾಗಿರುತ್ತದೆ. ಈಗ ಅಧ್ಯಯನವನ್ನು ಮಾಡಿದರೆ ಮುಂದೆ ಅದರ ಸರ್ವಾಂಗೀಣ ಲಾಭವಾಗುವುದು. ಕಠೋರ, ಪ್ರಾಮಾಣಿಕ ಪರಿಶ್ರಮವನ್ನು ಮಾಡುವವರ ಹಿಂದೆ ದೇವರು ಸದೈವ ಇರುತ್ತಾನೆ, ಎನ್ನುವುದನ್ನು ಮಕ್ಕಳ ಮನಸ್ಸಿನ ಮೇಲೆ ಬಿಂಬಿಸಬೇಕು.
ಅಧ್ಯಯನದ ಮಹತ್ವವನ್ನು ತಿಳಿಸಲು
ಬೇರೆಬೇರೆ ಸಾಧನಗಳ ಸಹಾಯ ಪಡೆದುಕೊಳ್ಳಿ !
ಒಂದುವೇಳೆ ಮಗುವು ಅನುತ್ತೀರ್ಣವಾಗಿದ್ದರೆ, ಅದನ್ನು ಮೇಲಿನ ವರ್ಗಕ್ಕೆ ದೂಡುವ ಪ್ರಯತ್ನವನ್ನು ಮಾಡಬೇಡಿರಿ. ಕಾರಣ ಒಂದು ವೇಳೆ ಅವನ ಅಧ್ಯಯನದ ತಳಹದಿಯೇ ಸರಿಯಾಗಿ ಇಲ್ಲದಿದ್ದರೆ, ಮೇಲಿನ ವರ್ಗದ ಹೆಚ್ಚಿನ ಅಧ್ಯಯನದಲ್ಲಿ ಅವನು ಇನ್ನೂ ಹಿಂದೆ ಬೀಳಬಹುದು. ಒಂದು ವೇಳೆ ಮಗುವು ಅನುತ್ತೀರ್ಣವಾಗಿದ್ದಲ್ಲಿ ಅವನ ಮೇಲೆ ಸಿಟ್ಟಾಗಬೇಡಿರಿ. ಮೇಲಿಂದಮೇಲೆ ಕೋಪಗೊಂಡಲ್ಲಿ ಮಗುವಿನ ಅಧ್ಯಯನದಲ್ಲಿನ ಲಕ್ಷ್ಯವು ಇನ್ನೂ ಕೆಳಗಿನ ಸ್ತರಕ್ಕೆ ಹೋಗಿ ಅವನು ಅಧ್ಯಯನವನ್ನು ಮಾಡುವುದನ್ನೇ ಬಿಡಬಹುದು. ಅವನಿಗೆ ಸಹಾನುಭೂತಿಯಿಂದ ನಡೆಸಿಕೊಂಡು ಅವನ ಅನುತ್ತೀರ್ಣನಾದುದರ ಕಾರಣಮೀಮಾಂಸೆಯನ್ನು ನೋಡಿ ಅದರಲ್ಲಿ ಸುಧಾರಣೆಯನ್ನು ಮಾಡಬಹುದು. ಮನೆಯಲ್ಲಿನ ವಾತಾವರಣವನ್ನು ಅಧ್ಯಯನ ಮಾಡುವುದಕ್ಕಾಗಿ ಪೂರಕವಾಗಿಡಿ! ಒಳ್ಳೆಯ ಅಧ್ಯಯನವಾಗುವುದರ ಸಲುವಾಗಿ ಮನೆಯಲ್ಲಿನ ವಾತಾವರಣವು ಸೌಹಾರ್ದದ, ವಿಶ್ವಾಸಪೂರ್ಣ, ಶಾಂತ ಮತ್ತು ಅಧ್ಯಯನವನ್ನು ಮಾಡಲು ಉತ್ತೇಜಕವಾಗಿರಬೇಕು. ಪ್ರಾಚೀನ ಕಾಲದಲ್ಲಿ ಮಕ್ಕಳಿಗೆ ವಿದ್ಯೆಯನ್ನು ಸಂಪಾದಿಸುವ ಸಲುವಾಗಿ ಆಶ್ರಮಗಳಿಗೆ ಕಳುಹಿಸಲಾಗುತ್ತಿತ್ತು ಮತ್ತು ಅಂತಹ ಆಶ್ರಮಗಳು ಊರಿನಿಂದ ದೂರ ಏಕಾಂತದಲ್ಲಿ, ಶಾಂತ, ಪ್ರಸನ್ನ ವಾತಾವರಣದಲ್ಲಿರುತ್ತಿದ್ದವು. ಇಂದಿನ ಬದಲಾದ ಶಿಕ್ಷಣ ಪದ್ಧತಿಯಿಂದಾಗಿ ಪಾಲಕರ ಮೇಲಿನ ಜವಾಬ್ದಾರಿಯು ಹೆಚ್ಚಿನ ಪ್ರಮಾಣದಲ್ಲಿ ಬೆಳೆದಿದೆ. ಆದುದರಿಂದಲೇ ಪಾಲಕರು ಮನೆಯಲ್ಲಿನ ವಾತಾವರಣವನ್ನು ಶಾಂತ, ಸೌಹಾರ್ದದ ಮತ್ತು ಅಧ್ಯಯನಕ್ಕೆ ಉತ್ತೇಜಕವಾದಂತಹ ರೀತಿಯಲ್ಲಿಡಲು ಜಾಗರೂಕರಾಗಿರಬೇಕಾಗಿದೆ.
ಮಗುವು ಅಧ್ಯಯನವನ್ನು ಮಾಡುತ್ತಿರಬೇಕಾದರೆ ರೇಡಿಯೋ ಅಥವಾ ದೂರದರ್ಶನವನ್ನು ಹಚ್ಚಬಾರದು. ಮಕ್ಕಳೆದುರು ತಂದೆ-ತಾಯಿಯರು ಪರಸ್ಪರ ಜಗಳವಾಡಬಾರದು. ಅದರಂತೆಯೇ ಕೆಲಸವನ್ನು ಅಥವಾ ಅಡಿಗೆಯನ್ನು ಮಾಡುತ್ತ ಮಾಡುತ್ತ ರಸ್ತೆಯಲ್ಲಿ ಹೋಗುವ ಮದುವೆಯ ದಿಬ್ಬಣವನ್ನು ನೋಡಲು ಓಡಬಾರದು, ಕಾರಣ ನಿಮ್ಮ ಬೆನ್ನಿಗೆ ನಿಮ್ಮ ಮಗುವೂ ಅಧ್ಯಯನವನ್ನು ಅರ್ಧಕ್ಕೆ ಬಿಟ್ಟು ನಿಮ್ಮ ಹಾಗೆಯೇ ಮದುವೆಯ ದಿಬ್ಬಣವನ್ನು ನೋಡಲು ಓಡುವುದುಸಹಜ!ಒಂದು ವೇಳೆ ನಿಮಗೆ ಸ್ವತಃ ದಿಬ್ಬಣವನ್ನು ನೋಡುವ ಮೋಹವನ್ನು ತಡೆಯಲಾಗುವುದಿಲ್ಲವೋ, ನಿಮ್ಮ ಮಗುವು ಅದೇ ಮೋಹವನ್ನು ಬಿಟ್ಟು ಅಧ್ಯಯನವನ್ನು ಮಾಡುತ್ತ ಕುಳಿತುಕೊಳ್ಳಬೇಕು, ಎಂಬ ಅಪೇಕ್ಷೆಯನ್ನು ಮಾಡುವುದು ತಪ್ಪಾಗುವುದು. ಸ್ವಲ್ಪದರಲ್ಲಿ ಹೇಳುವುದೆಂದರೆ ಮಗುವಿನ ಅಧ್ಯಯನವು ಒಳ್ಳೆಯದಾಗಿ ಆಗಬೇಕೆನಿಸಿದಲ್ಲಿ, ಮನೆಯಲ್ಲಿನ ವಾತಾವರಣವು ಆಶ್ರಮದಂತೆಯೇ ಇರಬೇಕು.
ನಡುವೆಯೇ ಎಂದಾದರೂ ಮಗುವಿಗೆ ಅದರ ಅಧ್ಯಯನದ ವಿಷಯವನ್ನು ಕೇಳುವುದಕ್ಕಿಂತ ಪ್ರತಿದಿನವೂ ಸ್ವಲ್ಪವೇಳೆ ಅದಕ್ಕೆ ಕಲಿಸಬೇಕು. ಒಂದುವೇಳೆ ನಿಮ್ಮ ಮಗ ಮಹಾವಿದ್ಯಾಲಯಕ್ಕೆ ಹೋಗುತ್ತಿದ್ದರೆ ಮತ್ತು ಅವನ ವಿಷಯವನ್ನು ನಿಮಗೆ ಹೇಳಿ ಕೊಡಲಾಗದಿದ್ದರೆ, ಕಡಿಮೆಪಕ್ಷ ರಾತ್ರಿಯ ಸಮಯದಲ್ಲಿ ಮಗನು ಅಧ್ಯಯನ ಮಾಡುತ್ತಿರುವಾಗ ಮಗನೊಂದಿಗೆ ಏನಾದರೂ ಉಪಯೋಗವಾಗುವಂತಹ ಉದಾ. ಗೀತೆ, ಜ್ಞಾನೇಶ್ವರಿ, ಸಂತರ ಚರಿತ್ರೆಗಳ ವಾಚನವನ್ನು ಮಾಡಬೇಕು ಮತ್ತು ಸ್ವತಃ ಅದರ ಟಿಪ್ಪಣಿಯನ್ನು ತೆಗೆಯಬೇಕು. ನಿಮ್ಮ ಮಗನಿಗೆ ಅಥವಾ ಮಗಳಿಗೆ ಜೊತೆಯಾಗಬಹುದು ಹಾಗೂ ತಾಯಿ-ತಂದೆಯೂ ಅಧ್ಯಯನವನ್ನು ಮಾಡುತ್ತಿರುವರು, ಎನ್ನುವ ಅರಿವು ಅವನಿಗೆ ಆಗುವುದು. ಒಂದು ವಿಷಯವನ್ನು ಸ್ಪಷ್ಟವಾಗಿ ಗಮನದಲ್ಲಿಟ್ಟುಕೊಳ್ಳಬೇಕಾಗಿದ್ದೆಂದರೆ ಮಕ್ಕಳು ಅನುಕರಣಪ್ರಿಯರಾಗಿರುತ್ತಾರೆ.
ಯಾವುದಾದರೊಂದು ಖಂಡವನ್ನೋದಿ ನಂತರ ಒಂದು-ಎರಡು ವಾಕ್ಯಗಳಲ್ಲಿ ಅದರಲ್ಲಿನ ಮಹತ್ವದ ಅಂಶಗಳನ್ನು ಬರೆಯುವ ರೂಢಿಯನ್ನು ಮಗುವಿಗೆ ಹಚ್ಚಬೇಕು ಮತ್ತು ನಂತರ ಸಂಪೂರ್ಣ ಖಂಡವನ್ನೇ ಸಂಕ್ಷಿಪ್ತ ಮಾಡಿ ಮುಖ್ಯ ಅಂಶಗಳನ್ನು ಮಂಡಿಸಬೇಕು. ಸಾಧಾರಣವಾಗಿ ಯಾವುದಾದರೊಂದು ವಿಷಯದ ಮೇಲೆ ಮನಸ್ಸನ್ನು ಏಕಾಗ್ರಗೊಳಿಸಿ ಅಧ್ಯಯನವನ್ನು ಸತತವಾಗಿ ೪೫ ನಿಮಿಷಗಳಿಗಿಂತ ಹೆಚ್ಚಿನ ಸಮಯ ಮಾಡುವುದು ಕಷ್ಟಕಾರಿಯಾಗಿರುತ್ತದೆ. ಆದುದರಿಂದ ಮಗುವಿಗೆ ನಡುವೆ ಸ್ವಲ್ಪ ಸಮಯ ವಿಶ್ರಾಂತಿಯನ್ನು ತೆಗೆದುಕೊಳ್ಳಲು ಬಿಡಬೇಕು ಅಥವಾ ವಿಷಯವನ್ನು ಬದಲಾಯಿಸಲು ಹೇಳಬೇಕು. ಕೇವಲ ಹೆಚ್ಚು ತಾಸುಅಧ್ಯಯನವನ್ನು ಮಾಡುವುದು ನಿಜವಾದ ಅಧ್ಯಯನವಲ್ಲ. ಏಕಾಗ್ರತೆಯಿಂದ ೩ ರಿಂದ ೪ ತಾಸುಗಳಷ್ಟು ವಾಚನ-ಮನನ ಮಾಡಿದರೂ ಸಹ ಅದು ನಿಜವಾದ ಅಧ್ಯಯನವಾಗಿದೆ. ಕೆಲವು ಬಾರಿ ಮಕ್ಕಳಿಗೆ ಪ್ರಿಯವಾಗಿರುವ ದೇವರ ಚಿತ್ರಗಳನ್ನು ಅವರ ಅಧ್ಯಯನದ ಮೇಜಿನ ಮೇಲೆ ಇಡುವುದರಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ನಿರ್ಮಾಣವಾಗಲು ಸಹಾಯವಾಗುತ್ತದೆ. ಮನಸ್ಸನ್ನು ಏಕಾಗ್ರಗೊಳಿಸಲು ಧ್ಯಾನ ಧಾರಣೆಯ ಉಪಯೋಗವು ಬಹಳವಾಗಿ ಆಗುತ್ತದೆ.