ವೇಳಾಪಟ್ಟಿಯನ್ನು ತಯಾರಿಸುವುದರ ಮಹತ್ವ ಮತ್ತು ಲಾಭಗಳು
ಪ್ರತಿಯೊಂದು ಕೃತಿಯನ್ನು ಆಯೋಜನಾಬದ್ಧ ರೀತಿಯಲ್ಲಿ ಮಾಡಿದರೆ ಧ್ಯೇಯವನ್ನು ಸಾಧಿಸುವುದು ಸುಲಭವಾಗುತ್ತದೆ.
ಧ್ಯೇಯವನ್ನು ಸಾಧಿಸುವ ಪ್ರಯತ್ನದಲ್ಲಿ ಶಿಸ್ತು ಬರುವುದರಿಂದ ಸುಲಭವಾಗಿ ಪ್ರಯತ್ನಗಳಾಗುತ್ತವೆ.
ವಿವಿಧ ವಿಷಯಗಳ ಅಧ್ಯಯನಕ್ಕಾಗಿ ಸಮಯಮಿತಿಯನ್ನು ಹಾಕುವುದರಿಂದ ಮನಸ್ಸಿನ ಮೇಲಿನ ಒತ್ತಡ ಕಡಿಮೆಯಾಗುತ್ತದೆ.
ಅಧ್ಯಯನವನ್ನು ಮಾಡುವುದರಲ್ಲಿ ಸುಸ್ಪಷ್ಟತೆಯಿರುವುದರಿಂದ ಮನಸ್ಸು ಶಾಂತವಾಗಿದ್ದು ಸಮಯ ಮತ್ತು ಮನಸ್ಸಿನ ಶಕ್ತಿಯು ವ್ಯಯವಾಗುವುದಿಲ್ಲ.
ಆತ್ಮವಿಶ್ವಾಸ ಹೆಚ್ಚಾಗುತ್ತದೆ
ವೇಳಾಪಟ್ಟಿಯನ್ನು ತಯಾರಿಸುವ ಬಗ್ಗೆ ಗಮನದಲ್ಲಿಡಬೇಕಾದ ಅಂಶಗಳು
-
ಪ್ರತಿಯೊಂದು ವಿಷಯದ ಸಿದ್ಧತೆ ಮಾಡಲು ತಗಲುವ ಸಮಯವನ್ನು ಅಭ್ಯಸಿಸಿ, ಪ್ರಾಧಾನ್ಯತೆ ಮೇರೆಗೆ ವೇಳಾಪಟ್ಟಿಯನ್ನು ತಯಾರಿಸಿ
-
ಇಡೀ ದಿನದ ಆಯೋಜನೆಯಲ್ಲಿ ವ್ಯಾಯಾಮ, ವೈಯಕ್ತಿಕ ತಯಾರಿ, ಉಪಾಹಾರ (ತಿಂಡಿ), ಊಟ, ವಿಶ್ರಾಂತಿ, ಇತರ ವಾಚನ, ನಾಮಜಪ ಮುಂತಾದ ವಿಷಯಗಳಿಗೆ ಯೋಗ್ಯವಾದಷ್ಟು ಸಮಯ ನೀಡಬೇಕು !
-
ಸಮಯದ ಮಿತಿಯನ್ನು ನಿರ್ಧರಿಸುವಾಗ ಪ್ರತಿಯೊಂದು ಕಾರ್ಯಕ್ಕೆ ಸಾಕಷ್ಟು ಸಮಯ ನೀಡಬೇಕು !
-
೨೦ ವರ್ಷದ ಸಾಮಾನ್ಯ ಕ್ಷಮತೆಯ ವಿದ್ಯಾರ್ಥಿಯು ನಿರಂತರ ೨ ಗಂಟೆಗಳ ಕಾಲ ಏಕಾಗ್ರತೆಯಿಂದ ಅಭ್ಯಾಸ ಮಾಡಬಲ್ಲನು. ಅದಾದನಂತರ ಒಂದು ಗಂಟೆ ಇತರ ವಿಷಯಗಳಿಗೆ ಬಿಡುವು ಮಾಡಬಹುದು. ಈ ರೀತಿ ಮಾಡಿದ್ದಲ್ಲಿ ದಿನದಲ್ಲಿ ಸಹಜವಾಗಿ ೧೦ ಗಂಟೆಗಳ ಕಾಲ ಅಧ್ಯಯನವಾಗುತ್ತದೆ.
-
ಪರೀಕ್ಷೆಯ ದಿನದವರೆಗೆ ಅಧ್ಯಯನದ ಆಯೋಜನೆಯನ್ನು ಮಾಡಬಾರದು, ಕೊನೆಯ ಕೆಲವು ದಿನಗಳನ್ನು ವಿಷಯಗಳ ಪುನರ್‌ಅಧ್ಯಯನಕ್ಕಾಗಿ ಇಡಬೇಕು.
-
ಇತರ ಮಕ್ಕಳು ತಯಾರಿಸಿದ ವೇಳಾಪಟ್ಟಿಯ ಅಧ್ಯಯನ ಮಾಡಬೇಕು ಮತ್ತು ತುಲನೆಯನ್ನು ಮಾಡದೇ ಅವುಗಳಲ್ಲಿ ಸಾಧ್ಯವಿರುವ ವಿಷಯಗಳನ್ನು ತೆಗೆದುಕೊಳ್ಳಬೇಕು.
-
ತಯಾರಿಸಿದ ವೇಳಾಪಟ್ಟಿಯನ್ನು ಪಾಲಕರಿಗೆ ತೋರಿಸಬೇಕು ಮತ್ತು ಅವರು ನೀಡಿದ ಸೂಚನೆಗಳನ್ನು ಪಾಲಿಸಬೇಕು.
-
ವೇಳಾಪಟ್ಟಿ / ಆಯೋಜನೆಯು ಕೇವಲ ನಮ್ಮ ಅನುಕೂಲಕ್ಕಾಗಿಯೇ ಇದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಕೆಲವೊಮ್ಮೆ ಆಯೋಜನೆಯನ್ನು ಬದಲಿಸಿ ಸಮಯವನ್ನು ಹೊಂದಾಣಿಕೆ ಮಾಡಬೇಕಾದರೆ ಅದನ್ನೂ ಮಾಡಬೇಕು.
-
ಕೆಲವೊಂದು ಸಲ ಕಾರಣಾಂತರದಿಂದ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಬೇಕಾಗಬಹುದು, ಅದನ್ನು ಸ್ವೀಕರಿಸಿ !