೨ ರಿಂದ ೫ ವರ್ಷದವರೆಗಿನ ಮಕ್ಕಳಲ್ಲಿ ಯಾವ ಯಾವ ರೂಢಿಯನ್ನು ಬೆಳೆಸಬೇಕು ?

ಬಾಲಮನಸ್ಸಿನ ಮೇಲೆ ಯಾವ ಸಂಸ್ಕಾರವನ್ನು ಮಾಡಲಾಗುತ್ತದೆಯೋ ಅದಕ್ಕನುಸಾರ ಮುಂದಿನ ಜೀವನದಲ್ಲಿ ಮಕ್ಕಳಿಗೆ ಅಭ್ಯಾಸಗಳು ಬೆಳೆಯುತ್ತವೆ. ಚಿಕ್ಕವಯಸ್ಸಿನಲ್ಲಿ ಆಗುವ ಸಂಸ್ಕಾರಗಳ ಮೇಲೆಯೇ ಮಕ್ಕಳ ಜೀವನದ ರಚನೆಯು ಅವಲಂಬಿಸಿರುತ್ತದೆ. 'ಸ್ವಂತ ಮಕ್ಕಳ ಮೇಲೆ ಯಾವ ಸಂಸ್ಕಾರವನ್ನು ಮಾಡುವುದು' ಎನ್ನುವ ಪ್ರಶ್ನೆಯು ಸರ್ವೇಸಾಮಾನ್ಯವಾಗಿ ಅನೇಕರಲ್ಲಿ ಉದ್ಭವಿಸಬಹುದು. ಅದಕ್ಕಾಗಿ ಮಕ್ಕಳಲ್ಲಿ ಯಾವ ಗುಣನಡತೆಗಳನ್ನು ಬೆಳೆಸಬೇಕು ಎನ್ನುವ ವಿಷಯದಲ್ಲಿ ಮಾಹಿತಿಯನ್ನು ಇಲ್ಲಿ ನೀಡುತ್ತಿದ್ದೇವೆ.

೨ ರಿಂದ ೫ ವರ್ಷದ ಗುಂಪಿನ ಮಕ್ಕಳಲ್ಲಿ ಕೆಳಗಿನ ಅಭ್ಯಾಸಗಳನ್ನು ಬೆಳೆಸಬೇಕು ಹಾಗೆಯೇ ಸಂಸ್ಕಾರಗಳನ್ನೂ ಮಾಡಬೇಕು

೧. ಊಟದ ಮೊದಲು ಕೈ-ಕಾಲು ಮತ್ತು ಮುಖವನ್ನು ಸ್ವಚ್ಛವಾಗಿ ತೊಳೆದುಕೊಳ್ಳುವುದು.

೨. ಸ್ವತಃ ಊಟವನ್ನು ಮಾಡುವುದು.

೩. ಪ್ರತಿಯೊಂದು ಊಟದ ನಂತರ ಅಥವಾ ಏನನ್ನಾದರೂ ತಿಂದ ನಂತರ ಬಾಯಿ ಮುಕ್ಕಳಿಸುವುದು ಮತ್ತು ಹಲ್ಲುಗಳನ್ನು ಸ್ವಚ್ಛ ಮಾಡುವುದು.

೪.. ಮಲವಿಸರ್ಜನೆಯ ನಂತರ ಸ್ವತಃ ಗುದದ್ವಾರದ ಭಾಗವನ್ನು ಮತ್ತು ಕೈ-ಕಾಲುಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳುವುದು.

೫. ಸ್ವತಂತ್ರವಾಗಿ ಬೇರೆ ಹಾಸಿಗೆಯ ಮೇಲೆ ಮಲಗುವುದು ಮತ್ತು ಅವಶ್ಯವಿದ್ದಲ್ಲಿ ರಾತ್ರಿಯಲ್ಲಿ ಕಡಿಮೆ ಬೆಳಕಿರುವ ದೀಪದ ಉಪಯೋಗವನ್ನು ಮಾಡುವುದು.

೬. ಸೀನಬೇಕಾದರೆ ಅಥವಾ ಕೆಮ್ಮಬೇಕಾದರೆ ಮೂಗು-ಬಾಯಿಯ ಮೇಲೆ ಕರವಸ್ತ್ರವನ್ನಿಟ್ಟುಕೊಳ್ಳುವುದು.

೭. 'ಧನ್ಯವಾದ', 'ನಮಸ್ಕಾರ'ದಂತಹ ಶಬ್ದಗಳ ಉಪಯೋಗವನ್ನು ಮಾಡಿ ಜನರ ಸ್ವಾಗತವನ್ನು ಮಾಡುವುದು.

೮. ಆಟವಾಡಿದ ನಂತರ ಆಟಿಕೆಗಳನ್ನು ನಿಗದಿತ ಸ್ಥಳದಲ್ಲಿ ವ್ಯವಸ್ಥಿತವಾಗಿ ಜೋಡಿಸಿಡುವುದು.

೯. ಶೂರವೀರರ ಕಥೆಗಳನ್ನು ಕೇಳುವುದು.

೧೦. ಸುಭಾಷಿತ, ನಿತ್ಯಪಾಠ,ಸ್ತೋತ್ರಗಳನ್ನು ಬಾಯಿಪಾಠ ಮಾಡಿ ಯೋಗ್ಯವಾದ ಜಾಗಗಳಲ್ಲಿ ಅವುಗಳ ಉಪಯೋಗವನ್ನು ಮಾಡುವುದು.

೧೧. ರಾತ್ರಿ ಮಲಗುವ ಮೊದಲು ಹಾಗೂ ಬೆಳಿಗ್ಗೆ ಎದ್ದ ನಂತರ ದೇವರ ಪ್ರಾರ್ಥನೆ / ನಾಮಸ್ಮರಣೆಯನ್ನು ಮಾಡುವುದು.

೧೨. ಪ್ರತಿದಿನವೂ ಎಲ್ಲ ಹಿರಿಯರಿಗೆ ಬಗ್ಗಿ ನಮಸ್ಕಾರ ಮಾಡುವುದು.

Leave a Comment