ಮಕ್ಕಳಿಗೆ ಶಿಸ್ತನ್ನು ಹೇಗೆ ಕಲಿಸಬೇಕು ?

'ಶಿಸ್ತು' ಮತ್ತು'ಶಿಕ್ಷೆ' ಈ ಎರಡೂ ಶಬ್ದಗಳು'ಶಿಕ್ಷಣ' ಶಬ್ದದಿಂದ ನಿರ್ಮಾಣವಾಗಿವೆ. ಶಿಕ್ಷಣದಿಂದ ಒಳ್ಳೆಯ ನಡತೆಯನ್ನು ಅಳವಡಿಸಿಕೊಳ್ಳುವುದೇಶಿಸ್ತು. ಇದಕ್ಕಾಗಿ ಶಿಕ್ಷೆ ಯಾತಕ್ಕಾಗಿ, ಯಾವ ತಪ್ಪಿಗಾಗಿ ಹಾಗೂ ಯಾವ ತಪ್ಪು ವರ್ತನೆಗಾಗಿ ಇದೆ, ಎನ್ನುವುದನ್ನು ತಿಳಿಸಿಯೇ ಶಿಕ್ಷೆಯನ್ನು ನೀಡಬೇಕು.

ಶಿಸ್ತನ್ನು ಕಲಿಸುವ ಸಂದರ್ಭದಲ್ಲಿ ಮಹತ್ವದ ಸೂಚನೆಗಳು

೧.ಒಳ್ಳೆಯ ವರ್ತನೆಯ ಸ್ತುತಿ ಮತ್ತು ತಪ್ಪು ವರ್ತನೆಗೆ ಶಿಕ್ಷೆ. ಮಕ್ಕಳಿಗೆ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳು ಸಿಕ್ಕಿದರೆ ಅಥವಾ ಬಹುಮಾನ ಸಿಕ್ಕಿದರೆ ಅದರ ಸ್ತುತಿಯನ್ನು ಮಾಡಬೇಕು. ಅವರ ಪ್ರಶಂಸೆಯನ್ನು ಮಾಡಬೇಕು, ಅವರಿಗೆ ಇನ್ನೂ ಒಳ್ಳೆಯದಾಗಿ ವರ್ತಿಸುವುದಕ್ಕೆ ಪ್ರೋತ್ಸಾಹಸಿಗುವುದು. ಅವರ ತಪ್ಪು ನಡವಳಿಕೆಗೆ ಕೋಪವನ್ನು ವ್ಯಕ್ತ ಮಾಡಬೇಕು ಮತ್ತು ಅವಶ್ಯಕತೆ ಇದ್ದಲ್ಲಿ ಶಿಕ್ಷೆಯನ್ನೂ ನೀಡಬೇಕು.
೨.ಆಜ್ಞೆಯನ್ನು ಮಾಡದೇ ವಿನಂತಿಯನ್ನು ಮಾಡಬೇಕು. "ನೀರನ್ನು ತಾ", ಎಂದು ಹೇಳದೇ "ರಾಜಾ ನನಗೆ ಕುಡಿಯಲು ನೀರನ್ನು ತಂದುಕೊಡಬಹುದಾ ?", ಎಂದು ವಿನಂತಿಯನ್ನು ಮಾಡಬೇಕು.
೩.ಮನೆಯಸದಸ್ಯರ ಒಮ್ಮತ-ಮಗುವಿಗೆ ಶಿಸ್ತನ್ನು ಹಚ್ಚುವ ಮೊದಲು ಮಗುವಿನಿಂದ ಯಾವ ರೀತಿಯ ನಡವಳಿಕೆಯ ಅಪೇಕ್ಷೆಯಿದೆ ಎನ್ನುವುದರ ವಿಚಾರವನ್ನು ಮಾಡಿ ನಮ್ಮ ಭೂಮಿಕೆಯನ್ನು ನಿಶ್ಚಿತಗೊಳಿಸಬೇಕು ಮತ್ತು ಎರಡು ಮತಗಳಾಗಲು ಬಿಡಬಾರದು. ತಾಯಿ-ತಂದೆಯ ಹಾಗೂ ಮನೆಯಇತರ ಸದಸ್ಯರ ಒಮ್ಮತವು ಮಗುವಿಗೆ ಶಿಸ್ತನ್ನು ಕಲಿಸುವ ಕಾರ್ಯದಲ್ಲಿ ಅತ್ಯಂತ ಆವಶ್ಯಕವಾಗಿರುತ್ತದೆ. ಕಿಟಕಿಯ ಗಾಜನ್ನು ಹಿಡಿದು ಕಿಟಕಿಯ ಮೇಲೆ ಎತ್ತರಕ್ಕೆ ಏರುವ ಬಗ್ಗೆ ತಂದೆಯ ಪ್ರಶಂಸೆ ಮತ್ತು ಅದೇ ಕೃತ್ಯಕ್ಕಾಗಿ ತಾಯಿಯು ಕೋಪಗೊಳ್ಳುವುದು, ಹೀಗೆ ಆಗಬಾರದು. ಶಿಕ್ಷೆಯನ್ನು ಯಾವಾಗ ಕೊಡಬೇಕು ಎನ್ನುವುದರ ಬಗ್ಗೆ ಮತಭೇದವನ್ನು ಪಾಲಕರು ಮೊದಲೇ ದೂರಗೊಳಿಸಿಕೊಂಡಿರಬೇಕು. ಮಕ್ಕಳೆದುರು ಸಮಸ್ಯೆ ಉದ್ಭವಿಸಬಾರದು.
೪.ತಪ್ಪು ನಡೆದಾಗ ತಕ್ಷಣ ಶಿಕ್ಷೆಯನ್ನು ಕೊಡಬೇಕು. "ಇರು, ಸಂಜೆತಂದೆಬರಲಿ, ನಂತರ ನೋಡುತ್ತೇನೆ" ಎನ್ನುವುದು ತಪ್ಪು ಶಿಕ್ಷೆಯಾಗಿದೆ. ಅದರಿಂದಾಗಿ ತಂದೆಯು ಬರುವವರೆಗೆ ಮಗುವು ಶಿಕ್ಷೆಯ ಚಿಂತೆಯಲ್ಲಿರುತ್ತದೆ.

ಮಗುವು ಮಾಡಿದ ತಪ್ಪಿಗೆ ತುಲನೆಯಲ್ಲಿ ಶಿಕ್ಷೆಯು ಹೊಂದಾಣಿಕೆಯಾಗುವಂತಿರಬೇಕು. ನಮ್ಮ ಶಾಲೆಯ ಪ್ರಾಚಾರ್ಯ ಹಾಗೂ ಗುರುವರ್ಯರು ಅತಿಶಯ ಸಾತ್ತ್ವಿಕ ಮತ್ತು ಶಾಂತ ಗೃಹಸ್ಥರು. ಅವರ ಬಳಿ ಯಾವುದೇ ವಿದ್ಯಾರ್ಥಿಯು ಭಯದಿಂದ ಹೋಗದೇ, ಆದರದಿಂದ ಮತ್ತು ಪ್ರೇಮದಿಂದ ಹೋಗುತ್ತಿದ್ದನು. ಒಂದು ದಿನ ನಾನು ಅವರಿಗೆ ಭೇಟಿಯಾಗಲು ಹೋದಾಗ ಒಬ್ಬ ೧೦ನೇ ತರಗತಿಯ ಹುಡುಗನಿಗೆ ಕೋಲಿನಿಂದಹೊಡೆಯುತ್ತಿದ್ದರು. ಕಾಳೆ ಗುರೂಜಿಯವರ ರೌದ್ರಾವತಾರವನ್ನು ನೋಡಿ ನಾನೇ ಬೆಚ್ಚಿಬಿದ್ದೆ. ನಂತರ ಅವರನ್ನು ಭೇಟಿಯಾದಾಗ ಅವರು ಹೇಳಿದರು, "ನಿನ್ನೆ ಈ ವಿದ್ಯಾರ್ಥಿಯು ತಾಯಿಯ ಅಂತ್ಯ ಸಂಸ್ಕಾರಕ್ಕಾಗಿ ನನ್ನ ಬಳಿ೫೦ ರೂಪಾಯಿಗಳನ್ನು ತೆಗೆದುಕೊಂಡು ಹೋದನು. ಇಂದು ಬೆಳಿಗ್ಗೆ ದೇವಸ್ಥಾನದಲ್ಲಿ ಅವನ ತಾಯಿಯು ಸಿಕ್ಕಿದಳು. ಈ ಹುಡುಗನಿಗೆ ಜನ್ಮವಿಡೀ ನೆನಪಿನಲ್ಲಿರಬೇಕು ಅಂತಹ ಶಿಕ್ಷೆಯೇ ಯೋಗ್ಯವಾಗಿದೆ. ಇಲ್ಲವಾದರೆ ಮುಂದೆಅವನುಮೋಸಗಾರನಾಗುತ್ತಿದ್ದ.

ಯೋಗ್ಯ ಮತ್ತು ಅಯೋಗ್ಯ ಶಿಕ್ಷೆ

ಮಗುವಿನೊಂದಿಗೆ ಮಾತನಾಡದಿರುವುದು ಅಥವಾ ಮಗುವಿಗೆ ದಿನವಿಡೀ ಉಪವಾಸಹಾಕುವುದು, ಈ ಶಿಕ್ಷೆಗಳು ಯೋಗ್ಯವಲ್ಲ. ಕಾರಣ ಸಂಜೆಯ ವೇಳೆಗೆ ಅದೇ ತಾಯಿಯು ಊಟಕ್ಕಾಗಿ ಮಗುವಿಗೆ ಮನವೊಲಿಸುವಳು. ಸಂಜೆಯ ವೇಳೆಮಗುವಿಗೆ ಆಟಕ್ಕಾಗಿ ಮನೆಯ ಹೊರಗೆ ಹೋಗಲು ಬಿಡದಿರುವುದು ಅಥವಾ ಅವನಿಗೆ ದೂರದರ್ಶನವನ್ನು ನೋಡಲು ಬಿಡದಿರುವುದು ಇವು ಯೋಗ್ಯ ಶಿಕ್ಷೆಗಳಾಗಿವೆ.