೧. ಮಕ್ಕಳ ಮೇಲೆ ಅಧಿಕಾರ ಚಲಾಯಿಸಬೇಡಿ, ಅವರ ಜೊತೆ ಮೈತ್ರಿಯನ್ನು ಬೆಳೆಸಿ.
೨. ಪ್ರತಿಯೊಂದು ಕೃತಿಯನ್ನು ಮಾಡಲು ಹೇಳುವಾಗ ಪ್ರೀತಿಯಿಂದ ಹೇಳಬೇಕು.
೩. ಏನಾದರೂ ಹೇಳುವಾಗ ನಮ್ಮ ಕೃತಿಯನ್ನು ಪರಿಶೀಲಿಸಬೇಕು.
೪. ನಮಗೆ ಮಕ್ಕಳಿಂದ ತುಂಬಾ ಅಪೇಕ್ಷೆಗಳಿರುತ್ತವೆ. ಈ ಅಪೇಕ್ಷೆಗಳನ್ನು ಬದಿಗಿಟ್ಟರೆ ನಮಗೆ ಹಾಗೂ ಮಕ್ಕಳಿಗೆ ಒತ್ತಡದ ಸ್ತಿತಿ ನಿರ್ಮಾಣವಾಗುವುದಿಲ್ಲ.
೫. ಮಕ್ಕಳಿಗೆ ನಮ್ಮ ದುಡ್ಡಿಗಿಂತ ನಮ್ಮ ಪ್ರೀತಿ ಮುಖ್ಯವಾಗಿದೆ. ಇದನ್ನು ಯಾವಾಗಲೂ ನೆನೆಪಿಟ್ಟುಕೊಳ್ಳಬೇಕು.
೬. ಮಕ್ಕಳಿಗೋಸ್ಕರ ನಮ್ಮ ಸಮಯವನ್ನು ಆದಷ್ಟು ಮೀಸಲಿಡಬೇಕು,
೭. ಮಕ್ಕಳ ಸಮಸ್ಯೆಗಳನ್ನು ಶಾಂತ ರೀತಿಯಲ್ಲಿ ಕೇಳಿಕೊಳ್ಳಬೇಕು.
೮. ತಮ್ಮಿಂದ ಏನಾದರೋಒ ತಪ್ಪಾದರೆ ಅದನ್ನು ಮಕ್ಕಳ ಮುಂದಿಡಬೇಕು.
೯. ಪ್ರತಿಯೊಬ್ಬರ ಪ್ರಕೃತಿಯು ಬೇರೆ ಬೇರೆ ಇರುವ ಕಾರಣ ಯಾರೂ ತಮ್ಮ ಮಕ್ಕಳ ತುಲನೆಯನ್ನು ಇತರ ಮಕ್ಕಳ ಜೊತೆ ಮಾಡಕೂಡದು.
೧೦. ಮಕ್ಕಳ ಮುಂದೆ ಅವರ ಬಗ್ಗೆ ನಕಾರಾತ್ಮಾಕ ವಿಚಾರಗಳನ್ನು ಮಾತನಾಡಬಾರದು. ('ನಿನಗೆ ಅರ್ಥವಾಗುವುದಿಲ್ಲ, ನಿನಗೆ ಅದು ತಿಳಿಯುವುದಿಲ್ಲ, ನೀನು ಯಾವಾಗ ಸರಿ ದಾರಿಗೆ ಬರುವೆ? ಇವನು ನನಗೊಂದು ತಲೆ ಬಿಸಿ ಇದ್ದಹಾಗೆ' ಇಂತಹ ನಕಾರಾತ್ಮಕ ಶಬ್ದಗಳನ್ನು ಉಪಯೋಗಿಸಿದರೆ ಮಕ್ಕಳ ಎಳೆಮನಸ್ಸಿನ ಮೇಲೆ ಪರಿಣಾಮವಾಗಿ ಅವರಿಂದ ಖಂಡಿತವೂ ಏನೂ ಆಗುವುದಿಲ್ಲ.)
೧೧. ನಮ್ಮ ಮನೆಗೆ ಯಾರಾದರೂ ಹೊಸಬರು ಬಂದರೆ ಅವರ ಮುಂದೆ ನಾವು ಮಕ್ಕಳ ದೋಷಗಳನ್ನು ಬಿಚ್ಚಿದುತ್ತೇವೆ. ಹೀಗೆ ಹೇಳುವುದಕ್ಕಿಂತ ನಾವು ಪ್ರೀತಿಯಿಂದ ಅವರಿಗೆ ತಿಳಿಸಬೇಕು.
೧೨. ನಮ್ಮ ಮಕ್ಕಳು ಏನು ಮಾಡುವುದಿಲ್ಲ ಎಂದು ಎಲ್ಲರಿಗೆ ಹೇಳುವುದಕ್ಕಿಂತ, ಅವರು ಏನು ಚೆನ್ನಾಗಿ ಮಾಡುತ್ತಾರೆ ಎಂದು ಹೇಳಬೇಳು. ಅನಾವಶ್ಯಕವಾಗಿ ಚಿಕ್ಕ ವಿಷಯಗಳನ್ನು ಹೇಳಬಾರದು.
೧೩. ಮಕ್ಕಳಿಂದ ನಾವು ಏನು ಕಲಿಬಹುದು ಎಂದು ಎಂದು ನೋಡಬೇಕು.
೧೪. ಪಾಲಕರು ಮಕ್ಕಳಿಗೆ ಆದರ್ಶವಾಗಿರಬೇಕು; ನೀವು ಸ್ವತಃ ದೇವರ ಭಕ್ತರಾಗಿದ್ದರೆ ಮಕ್ಕಳು ನಿಮ್ಮ ಅನುಕರಣೆ ಮಾಡುತ್ತಾರೆ.
ಮೇಲೆ ನೀಡಿರುವಂತೆ ಸೂಚನೆಗಳನ್ನು ಆಚರಣೆಗೆ ತಂದರೆ ನಾವು ರಾಷ್ಟ್ರಕ್ಕಾಗಿ ಒಂದು ಉತ್ತಮ ಪೀಳಿಗೆಯನ್ನು ನಿರ್ಮಿಸಲು ಸಾಧ್ಯವಾಗುತ್ತದೆ.
ಶ್ರೀ. ಗಿರಿಜಯ್ ಪ್ರಭುದೇಸಾಯಿ