೧.ಗಿಡ ಮರಗಳು :ಸಜೀವ ಪ್ರಾಣಿಯು ಆಮ್ಲಜನಕವನ್ನು ತೆಗೆದುಕೊಳ್ಳುತ್ತದೆ ಹಾಗೂ ಇಂಗಾಲದ ಡೈಆಕ್ಸೈಡ್ಯುಕ್ತ (ಕಲೂಷಿತ) ವಾಯುವನ್ನು ಹೊರಹಾಕುತ್ತದೆ. ಈ ಕಲೂಷಿತ ವಾಯುವು ವಾತಾವರಣದಲ್ಲಿ ಯಾವಾಗಲೂ ಹೆಚ್ಚು ಪ್ರಮಾಣದಲ್ಲಿ ಇರಬಾರದು; ಗಿಡ-ಮರಗಳು ಇಂಗಾಲದ ಡೈಆಕ್ಸೈಡ್ಯುಕ್ತ ವಾಯು ಸೇವಿಸಿ ಆಮ್ಲಜನಕದ ಉತ್ಪತ್ತಿ ಮಾಡುತ್ತವೆ. ತುಳಸಿಯು ದೊಡ್ಡ ಪ್ರಮಾಣದಲ್ಲಿ ಆಮ್ಲಜನಕವನ್ನು ಕೊಡುತ್ತದೆ. ಮರಗಳಿಂದ ಸಕಾಲಕ್ಕೆಮಳೆ ಬರಲು ಸಹಾಯವಾಗುತ್ತದೆ.
೨.ಗೋವು :ಗೋವುಗಳಸಗಣಿ ಹಾಗೂ ಗೋಮೂತ್ರವು ವಾತಾವರಣದಶುದ್ಧಿ ಮಾಡುತ್ತದೆ.ಆದುದರಿಂದಲೇ ಗೋವುಗಳ ಸಂರಕ್ಷಣೆ, ಪಾಲನೆ ಹಾಗೂ ವೃದ್ಧಿ ಮಾಡಲು ಹೇಳಲಾಗಿದೆ.
೩.ಪೃಥ್ವಿ : ಪೃಥ್ವಿಯ ಮೇಲಿನ ಮಣ್ಣು ಕೂಡಾ ವಾತಾವರಣವನ್ನು ಶುದ್ಧಿ ಮಾಡುತ್ತದೆ.
೪.ಜಲ : ಜಲ ತತ್ತ್ವವು ಶುದ್ಧಿಕರಣದ ಕಾರ್ಯ ಮಾಡುತ್ತದೆ.
೫.ಅಗ್ನಿ : ಪಂಚಮಹಾಭೂತದಲ್ಲಿ ಅಗ್ನಿತತ್ತ್ವ ಕಲ್ಮಶವನ್ನು ಇಲ್ಲದಂತೆ ಮಾಡಿ ವಾತಾವರಣವು ಶುದ್ಧವಾಗಿ ಇಡುತ್ತದೆ.
೬.ಆಕಾಶ : ಆಕಾಶವುವಿಶಾಲವಾಗಿದೆ, ಆದುದರಿಂದ ಪೃಥ್ವಿಯಮೇಲಿಂದ ಹೋಗುವ ಕಲೂಷಿತ ವಾಯು ಮೇಲೆ ಹೋದ ನಂತರ, ಅದು ಅದರೊಳಗೆ ಸೇರಿಕೊಂಡು ವಾತಾವರಣ ಶುದ್ಧವಾಗಿಯೇ ಇರುತ್ತದೆ.’
– ಪ.ಪೂ. ಪರಶರಾಮ ಪಾಂಡೆ ಮಹಾರಾಜ, ಸನಾತನ ಆಶ್ರಮ, ದೇವದ, ಪನವೆಲ.
ಪೃಥ್ವಿತತ್ತ್ವ, ಅಗ್ನಿತತ್ತ್ವ ಹಾಗೂ ವಾಯುತತ್ತ್ವ ಇವು ಪ್ರದೂಷಣೆ ನಿವಾರಿಸುತ್ತವೆ. ಮಲಮೂತ್ರಗಳಂತಹ ಹೊಲಸನ್ನು ಭೂಮಿಯು ನಿವಾರಿಸುತ್ತದೆ. ಉಳಿದ ಪ್ರದೂಷಣೆಯನ್ನು ಅಗ್ನಿ ಹಾಗೂ ವಾಯು ತತ್ತ್ವಗಳುನಷ್ಟ ಮಾಡುತ್ತವೆ.
– ಗುರುದೇವ (ಡಾ.) ಕಾಟೇಸ್ವಾಮಿಜಿ, ಸಾಪ್ತಾಹಿಕ ಸನಾತನ ಚಿಂತನ