'ಅಭಿನವ ಭಾರತ'ದ ಆಧಾರಸ್ತಂಭ – ದೇಶಭಕ್ತ ಬ್ಯಾರಿಸ್ಟರ್ ಸರದಾರಸಿಂಗ ರಾಣಾ !
ಕ್ರಾಂತಿಕಾರಿ ವಿಚಾರಗಳತ್ತ ಆಕರ್ಷಣೆ
ಸೌರಾಷ್ಟ್ರದ ಕಂಠರಿಯಾ ಊರಲ್ಲಿ ೧೨.೪.೧೮೭೦ರಂದು ಒಂದು ಚಿಕ್ಕ ಆದರೆ ಪ್ರಾಚೀನ ವಂಶದಲ್ಲಿ ಸರದಾರಸಿಂಗ ರಾಣಾ ಇವರ ಜನನವಾಯಿತು. ೧೮೯೮ರಲ್ಲಿ ಬ್ಯಾರಿಸ್ಟರ್ ವಿದ್ಯಾಭ್ಯಾಸಕ್ಕಾಗಿ ಲಂಡನ್ ನಗರಕ್ಕೆ ಹೋದರು. ಲಂಡನ್ ನಲ್ಲಿ ನಡೆಯುವ ರಾಜಕೀಯ ಕೆಲಸಗಳಲ್ಲಿ ಭಾಗವಹಿಸುವ ಆಸೆಯಿಂದ ಅವರು ಪ್ರಾರಂಭದಲ್ಲಿ ದಾದಾಭಾಯಿ ನವರೊಜಿಯವರ 'ಲಂಡನ್ ಇಂಡಿಯನ್ ಸೊಸೈಟಿ'ಯ ಸದಸ್ಯರಾದರು ಹಾಗೂ ಬ್ರಿಟಿಷ್ ಕಾಂಗ್ರೆಸ್ ಕಮಿಟಿಯಲ್ಲಿ ಕೆಲಸ ಮಾಡಲು ಆರಂಭಿಸಿದರು. ಆದರೆ ಈ ಸೌಮ್ಯ ಕಾರ್ಯದಲ್ಲಿ ಅವರು ಮನಸ್ಪೂರ್ವಕವಾಗಿ ತಮ್ಮನ್ನು ತೊಡಗಿಸಿಕೊಳ್ಳಲಿಲ್ಲ. ಪರಿಣಾಮವಾಗಿ ಲಂಡನ್ನಲ್ಲಿ ಅವರ ಪರಿಚಯ ಪಂಡಿತ ವರ್ಮಾ ಜೊತೆಗಾಯಿತು, ಹಾಗೂ ಶ್ಯಾಮಜಿಯವರ ಕ್ರಾಂತಿಕಾರಿ ವಿಚಾರಗಳು ಅವರಿಗೆ ಸಂಪೂರ್ಣವಾಗಿ ಒಪ್ಪಿಗೆಯಾದವು ಹಾಗೂ ಅದರಲ್ಲಿ ಏಕರೂಪರಾದರು. ೧೮.೨.೧೯೦೫ ರಂದು ಪಂಡಿತ ಶ್ಯಾಮಜಿಯವರು ಮುಂದಾಳತ್ವ ವಹಿಸಿ 'ಹೋಮರೂಲ್ ಸೊಸೈಟಿ'ಯನ್ನು ಸ್ಥಾಪಿಸಿದರು. ಬ್ಯಾರಿಸ್ಟರ್ ರಾಣಾ ಹಾಗೂ ಶ್ರೀ ಗೊದರೇಜ ಇವರು ಉಪಾಧ್ಯಕ್ಷರಾದರು. ಕಾರ್ಯವಾಹಕರಾಗಿ ಜೆ.ಸಿ. ಮುಖರ್ಜಿ ಕಾರ್ಯ ಮಾಡತೊಡಗಿದರು. ಬ್ಯಾರಿಸ್ಟರ್ ರಾಣಾ ಮುಕ್ತ ರೀತಿಯಲ್ಲಿ ರಾಜಕೀಯ ಕಾರ್ಯವನ್ನು ಆರಂಭಿಸಿದರು. ಇದೇ ಸಮಯದಲ್ಲಿ ಅವರು ಪ್ಯಾರಿಸ್ ನಲ್ಲಿ ಮುತ್ತು-ರತ್ನಗಳ ವ್ಯವಸಾಯ ಮಾಡುತ್ತಿದ್ದರು.
ರಾಷ್ಟ್ರಾಭಿಮಾನಿಗಳಿಗಾಗಿ ಆರ್ಥಿಕ ಸಹಾಯ
ಬ್ಯಾರಿಸ್ಟರ್ ರಾಣಾ ಅವರು ಡಿಸೆಂಬರ ೧೯೦೫ ರಲ್ಲಿ ಇಂಡಿಯನ್ ಸೊಶಿಯೊಲಾಜಿಸ್ಟ್ ನ ಸಂಚಿಕೆಯಲ್ಲಿ ಒಂದು ಪತ್ರ ಬರೆದು ರಾಣಾ ಪ್ರತಾಪಸಿಂಹ ಹಾಗೂ ಶಿವಾಜಿ ಮಹಾರಾಜರ ಹೆಸರಲ್ಲಿ ಭಾರತೀಯ ವಿಧ್ಯಾರ್ಥಿಗಳಿಗಾಗಿ ತಲಾ ೨ ಸಹಸ್ರ ರೂಪಾಯಿಗಳ ವಿದ್ಯಾರ್ಥಿವೇತನ ಘೋಷಿಸಿದರು. ಅದಕ್ಕಾಗಿ ಈ ವಿದ್ಯಾರ್ಥಿವೇತನವನ್ನು ಸ್ವೀಕರಿಸಿ ಪರದೇಶದಲ್ಲಿ ಶಿಕ್ಷಣ ಪಡೆಯುವವನು ಭಾರತಕ್ಕೆ ಮರಳಿದ ನಂತರ ಬ್ರಿಟಿಷ್ ಅಧಿಕಾರದಲ್ಲಿರುವ ಯಾವುದೆ ಹುದ್ದೆ, ಭೂಮಿ, ಅಧಿಕಾರ ಹಾಗೂ ನೌಕರಿ ಸ್ವೀಕರಿಸಬಾರದು, ಸ್ವತಂತ್ರಉದ್ಯೋಗ ನಿರ್ಮಿಸಬೇಕು, ಎಂಬ ಷರತ್ತು ವಿಧಿಸಿದರು. ಆ ಪತ್ರದಲ್ಲಿ ಅವರು ಪ್ರಾಮಾಣಿಕತೆಯಿಂದ 'ಹಿಂದೆ ನನ್ನ ಶಿಕ್ಷಣಕ್ಕಾಗಿ ಕೆಲವು ಭಾರತೀಯ ಸ್ನೇಹಿತರು ಆರ್ಥಿಕ ನೆರವು ಮಾಡಿದ್ದರು. ಈಗ ಆ ಋಣವನ್ನು ತೀರಿಸುವ ಸಮಯ ಬಂದಿದೆ. ದೇಶಬಾಂಧವರಲ್ಲಿ ಇಬ್ಬರು-ಮೂವರಾದರೂ ಸ್ವತಂತ್ರ ದೇಶಗಳ ಪ್ರವಾಸ ಮಾಡಿ ರಾಜಕೀಯ ಸ್ವಾತಂತ್ರ್ಯದ ಲಾಭ ಪಡೆಯುವಂತೆ ಆಗಬೇಕು. ಈ ಧ್ಯೇಯ ಈಡೇರಲು ನನ್ನಿಂದ ಆಗುವ ಸಹಾಯ ನಾನು ಮಾಡಬೇಕು' ಎಂದು ಬರೆದಿದ್ದರು.
ರಾಣಾಜಿಯವರ 'ಶಿವಾಜಿ ವಿದ್ಯಾರ್ಥಿವೇತನ' ಲೋಕಮಾನ್ಯ ತಿಲಕ, ಕಾರ್ಯಕರ್ತಾ ಪರಾಂಜಪೆ ಹಾಗೂ ಪಂಡಿತ ವರ್ಮಾ ಇವರ ಅನುಗ್ರಹದಿಂದ ವಿನಾಯಕ ದಾಮೋದರ ಸಾವರಕರ ಇವರಿಗೆ ಸಿಕ್ಕಿತು. ಅದಕ್ಕನುಸಾರ ಜುಲೈ ೧೯೦೬ರಲ್ಲಿ ಅವರು ಬ್ಯಾರಿಸ್ಟರ್ ಶಿಕ್ಷಣಕ್ಕಾಗಿ ಪ್ರವೇಶ ಪಡೆದರು. ಅಲ್ಲಿ ಭಾರತ ಭವನದಲ್ಲಿದ್ದು ಸಾವರಕರರು ಲಂಡನ್ ನ ಭಾರತೀಯ ವಿದ್ಯಾರ್ಥಿಗಳಲ್ಲಿ ಸ್ವಾತಂತ್ರ್ಯಪ್ರಾಪ್ತಿಯ ಜೋತಿಯನ್ನು ಬೆಳಗಿಸಿದರು. 'ಅಭಿನವ ಭಾರತ' ಸಂಸ್ಥೆಯ ಶಾಖೆಯನ್ನು ಸ್ಥಾಪಿಸಿದರು ಹಾಗೂ ೪ ವರ್ಷದಲ್ಲಿ ಲಂಡನ್ ನಲ್ಲಿ ಸ್ವಾತಂತ್ರ್ಯಕ್ಕಾಗಿ ಮಾಡಿದ ಕಾರ್ಯವು ಮರೆಯುವಂತಿಲ್ಲ. ಬ್ಯಾರಿಸ್ಟರ್ ಸರದಾರಸಿಂಗ ರಾಣಾ ಈ ಕಾರ್ಯಕ್ಕೆ ಬೆಂಬಲವಾಗಿ ನಿಂತರು! ಈ ವಿಷಯದಲ್ಲಿ ಬಗ್ಗೆ ರಾಣಜಿಯವರಿಗೆ ಅಭಿಮಾನವಿತ್ತು.
ಪ್ಯಾರಿಸ್ ನಲ್ಲಿ ರಾಣಾಜಿ ಕಾರ್ಯ
೧೪.೪.೧೯೦೬ ರಂದು ಬಂಗಾಲದ ಪ್ರಖ್ಯಾತ ಮುಖಂಡ ಶ್ರೀ. ಸುರೇಂದ್ರನಾಥ ಬ್ಯಾನರ್ಜಿಯವರು 'ವಂದೇ ಮಾತರಮ್' ಘೋಷಣೆಯ ಮೇಲಿದ್ದ ನಿಷೇಧವನ್ನು ಉಲ್ಲಂಘಿಸಿದರು. ಇದಲ್ಲದೇ ಬಾರಿಸಾಲದಲ್ಲಿ ಅವರ ಬಂಧನವಾಗಿರುವ ಸುದ್ಧಿ ತಿಳಿದು ಅದನ್ನು ನಿಷೇಧಿಸಲು ೪.೫.೧೯೦೬ ರಂದು 'ಹೋಮರೂಲ್ ಸೊಸೈಟಿ'ಯ ಪರವಾಗಿ ಪಂ. ವರ್ಮಾ ಇವರು ಲಂಡನ್ ನಲ್ಲಿ ಸಾರ್ವಜನಿಕ ಸಭೆಯನ್ನು ಏರ್ಪಡಿಸಿದರು. ಪ್ಯಾರಿಸನಲ್ಲಿ ನಡೆದ ಸಭೆಯ ಮೂಲಕ ಬ್ರಿಟಿಷ್ ದಬ್ಬಾಳಿಕೆಯ ನಿಷೇಧಕಾರ್ಯವು ಫ್ರಾನ್ಸನಲ್ಲಿ ಆರಂಭಗೊಂಡಿತು ಹಾಗೂ ಇದು ಬೆಳೆಯುತ್ತಾ ಹೋಯಿತು. ಮುಂದೆ ೧೦ ವರ್ಷಗಳಲ್ಲಿ ಪ್ಯಾರಿಸ್ 'ಅಭಿನವ ಭಾರತ'ದ ಸಶಸ್ತ್ರ ಕ್ರಾಂತಿಕಾರ ಸಂಘಟನೆಯ ಮುಖ್ಯ ಕೇಂದ್ರವಾಯಿತು. ಪ್ಯಾರಿಸ್ ಬ್ಯಾರಿಸ್ಟರ್ ರಾಣಾ, ಮೇಡಂ ಕಾಮಾ, ಪಂ. ವರ್ಮಾ, ಲಾಲಾ ಹರದಯಾಳ ಮುಂತಾದವರನೇತೃತ್ವದ 'ಅಭಿನವ ಭಾರತ'ದ ಕ್ರಾಂತಿಕಾರರ ಕಾಶಿಯಾಗಿತ್ತು.
ಸ್ಟಟಗಾರ್ಟ ಪ್ರಾತಿನಿಧ್ಯ
ಆಗಸ್ಟ್ ೧೯೦೭ರಲ್ಲಿ ಜರ್ಮನಿಯ ಸ್ಟಟಗಾರ್ಟನಲ್ಲಿ ಸೇರಿದ ಅಂತರರಾಷ್ಟ್ರೀಯ ಸಮಾಜವಾದಿಗಳ ಸಮ್ಮೇಳನದಲ್ಲಿ ಮೇಡಂ ಕಾಮಾ ಹಾಗೂ ಬ್ಯಾರಿಸ್ಟರ್ ರಾಣಾ ಇವರು ಹಿಂದಿ ಪ್ರತಿನಿಧಿಗಳೆಂದು ಉಪಸ್ಥಿತರಾಗಿದ್ದರು. ಅಲ್ಲಿ ಮೇಡಂ ಕಾಮಾ ಸಭೆಯಲ್ಲಿ ಭಾರತದ ತಿರಂಗಾ ಬಾವುಟವನ್ನು ಹಾರಿಸಿ ಬ್ರಿಟಿಷ್ ರಾಜ್ಯಕರ್ತರನ್ನು ಆಶ್ಚರ್ಯಚಕಿತಗೊಳಿಸಿದರು! ಈ ಧ್ವಜವನ್ನು ಸಿದ್ಧಗೊಳಿಸಿ ಅದನ್ನು ಗುಪ್ತವಾಗಿ ಸಭೆಯವರೆಗೆ ತಲುಪಿಸುವ ಯೋಜನೆಯಲ್ಲಿ ಸಾವರಕರ, ಪಂ.ವರ್ಮಾ, ಮೇಡಂ ಕಾಮಾ, ಬ್ಯಾರಿಸ್ಟರ್ ರಾಣಾ, ವಿ.ವಿ.ಎಸ್.ಅಯ್ಯರ ಇವರ ಪ್ರಾಮುಖ ಸಹಭಾಗವಿತ್ತು.
ವೃತ್ತಪತ್ರ ಸಂಪಾದಕರನ್ನು ಬುದ್ಧಿಕಲಿಸಿದ ರಾಣಾ !
ಲಂಡನ್ ಹಾಗೂ ಪ್ಯಾರಿಸ್ ಕ್ರಾಂತಿಕಾರರು ನಡೆಸಿದ ಈ ಸ್ವಾತಂತ್ರ್ಯ ಹೋರಾಟದ ಭಯವು ಬ್ರಿಟಿಷರಿಗಿತ್ತು. ಇದರ ಅನುಭವ ಅನೇಕ ಬಾರಿ ಕಂಡು ಬರುತ್ತಿತ್ತು. ಬ್ಯಾರಿಸ್ಟರ್ ರಾಣಾ ಹಾಗೂ ಅವರ ಜರ್ಮನ್ ಪತ್ನಿ ಇವರ ಸಂದರ್ಭದಲ್ಲಿ ನಡೆದ ಒಂದು ಘಟನೆ ಹೀಗಿತ್ತು… 'ಪ್ಯಾರಿಸ್.ನಲ್ಲಿ ವಾಸಿಸುವ ಹಿಂದಿ ಜನರ ಒಂದು ರಾಜದ್ರೋಹಿ ಗುಂಪು ಇದೆ', ಎಂಬ ವಿಷಯವನ್ನು ಬಣ್ಣಿಸಿ ಹೇಳುವಾಗ ಇಂಗ್ಲಂಡನ 'ಮಾರ್ನಿಂಗ್ ಪೋಸ್ಟ'ನ ಪತ್ರಕರ್ತನೊಬ್ಬನು ಅದರಲ್ಲಿ ರಾಣಾ ಹಾಗೂ ಅವರ ಪತ್ನಿ ಇವರನ್ನು ನಿಂದಿಸುವಂತಹ ಲೇಖನ ಬರೆದನು. ಇದನ್ನು ಓದುತ್ತಲೆ ಬ್ಯಾರಿಸ್ಟರ್ ರಾಣಾ ಇವರು ಮಾರ್ನಿಂಗ ಪೋಸ್ಟನ ಸಂಪಾದಕರಿಗೆ ಉಗ್ರವಾಗಿ ಪತ್ರ ಬರೆದರು. ಸಂಪಾದಕ ಮಹಾಶಯರು ಗಾಬರಿಗೊಂಡು ಶ್ರೀ. ಹಾಗೂ ಸೌ. ರಾಣಾ ಇವರಲ್ಲಿ ವಿಶೇಷ ಕ್ಷಮೆ ಯಾಚಿಸಿದರು.
ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಉತ್ಸವ
ಅಭಿನವ ಭಾರತ ಈ ಕ್ರಾಂತಿಕಾರ ಸಂಘಟನೆಯ ಪ್ರಮುಖರಾದ ವಿ.ದಾ.ಸಾವರಕರ ಇವರ ಮಾರ್ಗದರ್ಶನದಲ್ಲಿ ೧೦.೫.೧೯೦೮ ರಂದು ವರ್ಷ ೧೮೫೭ ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಉತ್ಸವ ಲಂಡನ್ ನಲ್ಲಿನ ಭಾರತ ಭವನದಲ್ಲಿ ಉತ್ಸಾಹದಿಂದ ಹಾಗೂ ಸಡಗರದಿಂದ ಆಚರಿಸಲಾಯಿತು. ಸಭಾಗೃಹ ಪೂರ್ತಿ ತುಂಬಿ ಹೊರಗಡೆಯೂ ಸಾಕಷ್ಟು ಹಿಂದಿ ಜನರು ನಿಂತಿದ್ದರು. ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನದಲ್ಲಿ ದೇಶಭಕ್ತ ರಾಣಾ ಇವರಿದ್ದರು! ಅದಕ್ಕಾಗಿ ಅವರು ಪ್ಯಾರಿಸ್ ನಿಂದ ಬಂದರು. ಅವರು ಅಧ್ಯಕ್ಷೀಯ ಸಮಾರೋಪವನ್ನು ಸಮಯೊಚಿತ ಭಾಷಣದಿಂದ ಮಾಡಿದರು. ಎಲ್ಲಾ ಜನರು ಈ ಕಾರ್ಯಕ್ರಮದಿಂದ ಹರ್ಷಭರಿತರಾದರು. ಅನೇಕರು ದೇಶ ಭಕ್ತಿಯ ಪ್ರತಿಜ್ಞೆ ಮಾಡಿದರು ಹಾಗೂ ದೇಶ ವೀರರಿಗಾಗಿ ನೆರವಿಗಾಗಿ ‘ಸಹಾಯ ಕೋಷ’ ವನ್ನು ಸ್ಥಾಪಿಸಿದರು. ಈ ಕಾರ್ಯಕ್ರಮಕ್ಕೆ ಮೇಡಂ ಕಾಮಾ ಅವರಿಗೆ ಬರಲು ಆಗಲಿಲ್ಲ, ಆದರೆ ಅವರು ಇದಕ್ಕಾಗಿ ಶುಭಸಂದೇಶ ಹಾಗೂ ನಿಧಿಗಾಗಿ ೭೫ ರೂಪಾಯಿ ಕಳಿಸಿದರು. ಸರದಾರಸಿಂಗ ರಾಣಾ ಇವರು ತಮ್ಮ ಸ್ವಂತದ ಮೇ ಮಾಸದ ಎಲ್ಲಾ ಉತ್ಪನ್ನ ಈ ನಿಧಿಗಾಗಿ ಅರ್ಪಿಸಿದರು.
೧೨.೪.೧೯೫೭ ರಂದು ಬ್ಯಾರಿಸ್ಟರ್ ರಾಣಾ ಇವರು ೮೦ ನೇ ವಯಸ್ಸಿನಲ್ಲಿ ನಿಧನರಾದರು.
– ಸೌ.ಸ್ವಾಮಿನಿ ವಿಕ್ರಮ ಸಾವರಕರ ( ಪ್ರಜ್ವಲಂತ, ಜನೆವರಿ ೨೦೦೩ )