೧೨ ನೇ ಶತಮಾನದಲ್ಲಿ ಚೀನಾದಲ್ಲಿ ಮದ್ದುಗುಂಡುಗಳನ್ನು ತಯಾರಿಸಲಾಗುತ್ತಿತ್ತು. ಮುಂದಿನ ೨೦೦ ವರ್ಷಗಳಲ್ಲಿ ಈ ತಂತ್ರಜ್ಞಾನವು ಅರಬ ಹಾಗೂ ಯುರೋಪಿನ ದೇಶಗಳನ್ನು ತಲುಪಿತು; ಆದರೆ ಭಾರತೀಯ ಆಡಳಿತ ವ್ಯವಸ್ಥೆಯು ಈ ಬಗ್ಗೆ ಸಂಪೂರ್ಣ ಅಜ್ಞಾನದಲ್ಲಿತ್ತು. ಕ್ರಿ.ಶ ೧೫೨೬ರಂದು ಬಾಬರನು ಬಂದೂಕಿನ ಬಲದಲ್ಲಿ ಆಕ್ರಮಣ ಮಾಡಿ ವಿಜಯಿಯಾದನು. ಝಾನ್ಸಿ ರಾಣಿಯು ಯುದ್ಧದಲ್ಲಿ ಮದ್ದುಗುಂಡುಗಳಿಗೆ ಇರುವ ಮಹತ್ವನ್ನು ಅರಿತ ಭಾರತದ ಪ್ರಥಮ ರಾಣಿಯಾಗಿದ್ದಳು. ಭಾರತದಲ್ಲಿ ರಾಣಿಯು ಮದ್ದುಗುಂಡುಗಳನ್ನು ತಯಾರಿಸುವಲ್ಲಿ ಮೊದಲನೇಯವಳಾಗಿದ್ದರೂ ರಾಣಿಯ ಆಡಳಿತಾವಧಿಯು ಕಡಿಮೆ ಇದ್ದುದರಿಂದ ಮಹತ್ವದ ಪರಿಣಾಮವಾಗಲಿಲ್ಲ.
ದೇಶ ಹಾಗೂ ಧರ್ಮಕ್ಕಾಗಿ ಪ್ರಾಣಾರ್ಪಣೆ ಮಾಡುವ ಝಾನ್ಸಿಯ ರಾಣಿ ಲಕ್ಷ್ಮೀಬಾಯಿ
ಹಿಂದೂ ಧರ್ಮದ ಬಗ್ಗೆ ಅಭಿಮಾನವಿರುವ ರಾಣಿ ಲಕ್ಷ್ಮೀಬಾಯಿ : ರಾಣಿ ಲಕ್ಷ್ಮೀಬಾಯಿಯು ಬಾಪುರದ ರಾಜ ಮರ್ದನಸಿಂಹ ಜುದೇವನಿಗೆ ಬರೆದ ಪತ್ರದಲ್ಲಿ ’ವಿದೇಶಿಯೋಂಕಿ ಗುಲಾಮಿ ಮೆ ರಹಿಬೊ ಅಛ್ಚೊ ನಹಿ ಹೈ, ಉನಸೆ ಲಡವೊ ಅಛ್ಚೊ ಹೈ |’(ವಿದೇಶಿಯರ ಗುಲಾಮಗಿರಿಯಲ್ಲಿ ಜೀವಿಸುವುದು ಒಳ್ಳೆಯದಲ್ಲ, ಅವರೊಂದಿಗೆ ಹೋರಾಡುವುದು ಒಳ್ಳೆಯದು) ಎಂದು ಬರೆದಿದ್ದರು. ಇದರಿಂದ ರಾಣಿಯ ಮನಸ್ಥಿತಿಯು ಗಮನಕ್ಕೆ ಬರುತ್ತದೆ.
ಬಾಲ್ಯದಲ್ಲಿಯೇ ಕತ್ತಿವರಸೆ ಹಾಗೂ ಕುದುರೆಸವಾರಿಯನ್ನು ಕಲಿಯುವುದು : ಮೋರೊಪಂತ ತಾಂಬೆಯವರ ಮಗಳು ಛಬೇಲಿ ಅಥವಾ ಮನು ಎಂದು ಗುರುತಿಸಲ್ಪಡುತ್ತಿದ್ದಳು. ಅವಳು ಓದು-ಬರಹದೊಂದಿಗೆ ಕತ್ತಿವರಸೆ ಹಾಗೂ ಕುದುರೆಸವಾರಿಯನ್ನೂ ಕಲಿತಿದ್ದಳು. ಅವಳ ವಿವಾಹವು ಝಾನ್ಸಿಯ ರಾಜ ಶ್ರೀ. ಗಂಗಾಧರರಾವ ನೇವಾಳಕರರೊಂದಿಗೆ ನೆರವೇರಿತು. ದಾಮೋದರನು ದತ್ತು ಪುತ್ರನಾಗಿದ್ದನು. ದತ್ತಕ ವಿಧಾನದ ನಂತರ ಗಂಗಾಧರರಾವನು ಮೃತರಾದನು.
ರಾಣಿಯು ಹ್ಯೂ ರೋಜನೊಂದಿಗೆ ಹೋರಾಡಲು ಸಿದ್ಧಳಾಗುವುದು : ಡಾಲಹೌಸಿಯು ಸಂಸ್ಥಾನವನ್ನು ಪ್ರಾಂತ್ಯಗಳನ್ನಾಗಿ ಮಾಡಿದನು. ಆಗಿನ ಕಾಲದ ರಾಣಿಯ ಪತ್ರವ್ಯವಹಾರದಲ್ಲಿನ ಚಾತುರ್ಯವು ಅವರ ಬುದ್ಧಿಯ ಸಾಕ್ಷಿಯಾಗಿದೆ. ಉತ್ತರ ಹಿಂದುಸ್ಥಾನದ ಧುಮಸತ್ಯಾ ಸಂಘರ್ಷದಲ್ಲಿ ಇನ್ನೊಂದು ಕಿಡಿ ಸೇರಿಕೊಂಡಿತು. ರಾಣಿಯು ನಾನಾಸಾಹೇಬ ಹಾಗೂ ತಾತ್ಯಾಟೋಪೆಯೊಂದಿಗೆ ಸಂಧಾನ ಮಾಡಿದಳು. ಹ್ಯೂ ರೋಜನು ಝಾನ್ಸಿಯ ಮೇಲೆ ಆಕ್ರಮಣ ಮಾಡಲು ಬಂದಾಗ ರಾಣಿಯು ’ಮೇರಿ ಝಾನ್ಸಿ ನಹಿ ದೂಂಗಿ’ ಎಂದು ಸರ್ವಸಾಮಾನ್ಯ ಜನರೊಂದಿಗೆ ಹೋರಾಡಲು ಸಿದ್ಧಳಾದಳು. ಭಯಂಕರ ಯುದ್ಧವಾಯಿತು.
ಕಾಲ್ಪಿಯ ಕಡೆಗೆ ಹೊರಟಾಗ ಗ್ವಾಲಿಯರನಲ್ಲಿ ರಾಣಿಯ ಮೇಲೆ ಪುನಃ ಆಕ್ರಮಣವಾಗುವುದು : ಝಾನ್ಸಿಯು ಸೂಲುತ್ತಲೇ ರಾಣಿಯು ತನ್ನ ದತ್ತುಪುತ್ರನೊಂದಿಗೆ ಶಿತಾಫಿನಿಂದ ಹೊರಟು ೧೦೮ ಮೈಲು ದೂರದಲ್ಲಿರುವ ಕಾಲ್ಪಿಯ ಕಡೆಗೆ ಹೊರಟಳು. ಅಲ್ಲಿ ಅವಳಿಗೆ ತಾತ್ಯಾ ಭೇಟಿಯಾದರು. ೩ ದಿನಗಳ ಹೋರಾಟದ ನಂತರ ಕಾಲ್ಪಿಯು ಸೋಲನ್ನು ಅನುಭವಿಸಿತು. ಆಂಗ್ಲರು ಸಂಪೂರ್ಣ ಬುಂದೇಲಖಂಡವನ್ನು ವ್ಯಾಪಿಸಿದರು. ತಾತ್ಯಾ ಹಾಗೂ ರಾಣಿಯು ಗ್ವಾಲಿಯರ ಕಡೆಗೆ ಹೋದರು. ಹ್ಯೂ ರೋಜ ಹಾಗೂ ಬ್ರಿಗೇಡಿಯರ ಸ್ಮಿಥ್ ಗ್ವಾಲಿಯರನ ಮೇಲೆ ದಂಡೆತ್ತಿ ಬಂದರು. ಕೋಟಾ ಕಿ ಸರಾಇಯಲ್ಲಿ ರಾಣಿಯೊಂದಿಗೆ ಅವರ ಯುಧ್ಧವಾಯಿತು. ಅದಕ್ಕಿಂತಲೂ ಮೊದಲು ರಾಣಿಯು ಶರಣಾಗಬೇಕೆಂದು ರಾಣಿಯ ತಂದೆಯನ್ನು ಬಂಧಿಸಲಾಯಿತು. ಅನಂತರ ಅವರನ್ನು ಗಲ್ಲಿಗೇರಿಸಲಾಯಿತು.
ಅಸಾಮಾನ್ಯ ಪರಾಕ್ರಮವನ್ನು ತೋರಿಸಿದ ರಾಣಿಯು ’ಓಂ ನಮೋ ಭಗವತೇ ವಾಸುದೇವಾಯ’ ಎಂದು ಹೇಳುತ್ತ ಪ್ರಾಣ ಬಿಡುವುದು : ಹೋರಾಡುತ್ತಿರುವಾಗ ಶತ್ರುಗಳು ರಾಣಿಯನ್ನು ಸುತ್ತುವರಿದರು. ಓರ್ವ ಸಿಪಾಯಿಯ ಬಾಯೋನೆಟ್ ರಾಣಿಯ ದೇಹವನ್ನು ಭೇದಿಸಿತು. ರಕ್ತವು ಧಾರಾಕಾರವಾಗಿ ಹರಿಯಲಾರಂಭಿಸಿತು. ರಾಣಿಯು ತನ್ನ ಮೇಲೆ ಹಲ್ಲೆ ಮಾಡಿದ ಸಿಪಾಯಿಯನ್ನು ಕೊಂದು ಹಾಕಿದಳು. ಅವಳ ದಾಸಿಗೆ ಗುಂಡು ತಗುಲುತ್ತಲೇ ಗುಂಡು ಹೊಡೆದವನನ್ನು ೨ ತುಂಡು ಮಾಡಿದಳು. ಇಷ್ಟರಲ್ಲಿಯೇ ಅವಳ ಎಡ ತೊಡೆಯಲ್ಲಿ ಗುಂಡು ತಗುಲಿತು. ಆ ಗುಂಡು ಹೊಡೆದವನನ್ನೂ ಅವಳು ಯಮನ ಪಾದ ಸೇರಿಸಿದಳು. ಇದೇ ಸಮಯಕ್ಕೆ ಹಿಂದಿನಿಂದ ಅವಳ ತಲೆಯ ಮೇಲೆ ಪೆಟ್ಟು ಬಿತ್ತು. ಆ ಅವಸ್ಥೆಯಲ್ಲಯೂ ಹಲ್ಲೆ ಮಾಡಿದ ವ್ಯಕ್ತಿಯ ಭುಜವನ್ನು ಕಡಿದಳು. ಅನಂತರ ಉಳಿದ ಸೈನಿಕರು ಓಡಿಹೋದರು. ರಕ್ತದ ಮಡುವಿನಲ್ಲಿರುವ ರಾಣಿಯನ್ನು ಬಾಬಾ ಗಂಗಾದಾಸರ ಗುಡಿಸಲಿಗೆ ಕೊಂಡೊಯ್ಯಲಾಯಿತು. ಅಲ್ಲಿ ಅವಳ ಬಾಯಿಗೆ ಗಂಗಾಜಲವನ್ನು ಹಾಕಲಾಯಿತು. ರಾಣಿಯು ’ಓಂ ನಮೋ ಭಗವತೇ ವಾಸುದೇವಾಯ’ ಎಂದು ಹೇಳುತ್ತ ಪ್ರಾಣ ಬಿಟ್ಟಳು.
ಈ ಪರಾಕ್ರಮದ ನೆನಪಿಗಾಗಿ ಸುಭಾಷ್ಚಂದ್ರ ಬೋಸ್ ಆಜಾದ ಹಿಂದ ಸೇನೆಯಲ್ಲಿ 'ರಾಣಿ ಲಕ್ಷ್ಮೀಬಾಯಿ'ಯ ಹೆಸರಿನಲ್ಲಿ ಸ್ತ್ರೀಯರ ಪಥಕವನ್ನು ನಿರ್ಮಿಸಿದರು.
ರಾಣಿ ಲಕ್ಷ್ಮೀಬಾಯಿ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ!