ಪಟಾಕಿಯಂತಹ ಕುಪ್ರವೃತ್ತಿಗಳನ್ನು ನಷ್ಟಗೊಳಿಸುವುದೇ ನಿಜವಾದ ದೀಪಾವಳಿ !

ವಿದ್ಯಾರ್ಥಿ ಮಿತ್ರರೇ, ಈಗ ನೀವು ದೀಪಾವಳಿಯ ದಾರಿ ಕಾಯುತ್ತಿರಬಹುದು. ನಿಮಗೆ ‘ಯಾವಾಗ ದೀಪಾವಳಿಯ ಆನಂದವನ್ನು ಪೆಡೆಯುವುದು‘ ಎಂದು ಅನಿಸುತ್ತಿರಬಹುದು; ಆದರೆ ಮಿತ್ರರೇ, ನಾವು ಆನಂದದಿಂದಿದ್ದು ಇತರರಲ್ಲಿ ಆನಂದವನ್ನು ನಿರ್ಮಾಣ ಮಾಡುವುದೇ ಹಬ್ಬದ ಅರ್ಥವಾಗಿದೆ.

ದೀಪಾವಳಿಯಲ್ಲಿ ಆಕಾಶದೀಪವನ್ನು ಹಚ್ಚುವುದರ ಮಹತ್ವ

ಆಕಾಶದೀಪವು ಆನಂದದ ಪ್ರತೀಕವಾಗಿದೆ. ವ್ಯಕ್ತಿ, ಸಮಾಜ ಹಾಗೂ ರಾಷ್ಟ್ರದ ಜೀವನವು ಆನಂದಿಯಾಗಿರಬೇಕು, ಅಂತೆಯೆ ಎಲ್ಲರ ಜೀವನವು ಆನಂದದಿಂದ ತುಂಬಿರಬೇಕು ಎಂಬುದಕ್ಕಾಗಿ ಆಕಾಶದೀಪವನ್ನುಹಚ್ಚುತ್ತೇವೆ. ಆಕಾಶದೀಪವನ್ನು ಹಚ್ಚಿದಾಗ ಅಂಧಕಾರ ನಾಶವಾಗುತ್ತದೆ. ನಾವು ದೀಪಾವಳಿಯಿಂದ ಇತರರಿಗೆ ಆನಂದವಾಗುವಂತಹ ಕೃತಿಗಳನ್ನು ಮಾಡುತ್ತೇವೆಯೇ ಎಂಬುದರ ಬಗ್ಗೆ ಚಿಂತನೆ ಮಾಡಬೇಕು. ದುರ್ದೈವದಿಂದ ಈ ಪ್ರಶ್ನೆಗೆ 'ಇಲ್ಲ' ಎಂಬ ಉತ್ತರ ಸಿಗುತ್ತದೆ. ದೀಪಾವಳಿಯ ನಿಮಿತ್ತ ನಮ್ಮ ಯಾವುದೇ ಕೃತಿಯಿಂದ ಇತರರಿಗೆ ದುಃಖವಾಗುತ್ತಿದ್ದರೆ ನಾವು ಇದೆಲ್ಲವನ್ನೂ ನಿಲ್ಲಿಸಿ ದೇವರ ಕೃಪೆಯನ್ನು ಸಂಪಾದಿಸೋಣ.

ಪಟಾಕಿಗಳ ಮಾಧ್ಯಮದಿಂದ ಆಗುವ ದೇವತೆಗಳ ವಿಡಂಬನೆಯನ್ನು ನಿಲ್ಲಿಸೋಣ !

ಮಕ್ಕಳು, ದೀಪಾವಳಿಯಲ್ಲಿ ದೇವತೆಗಳ ಚಿತ್ರವಿರುವ ಪಟಾಕಿಗಳನ್ನು ಸುಡುತ್ತಾರೆ. ದೇವತೆಗಳ ಚಿತ್ರವೆಂದರೆ ಪ್ರತ್ಯಕ್ಷ ದೇವರು ಇದ್ದ ಹಾಗೆ. ನಾವು ಪಟಾಕಿಗಳನ್ನು ಹಚ್ಚಿದಾಗ ದೇವತೆಗಳ ಚಿತ್ರವು ಛಿದ್ರವಾಗುತ್ತದೆ, ಅಂದರೆ ನಾವು ಆ ದೇವತೆಯ ವಿಡಂಬನೆಯನ್ನೇ ಮಾಡಿದಂತೆ. ಲಕ್ಷ್ಮೀಯ ಚಿತ್ರವಿರುವ, ರಾಷ್ಟ್ರಭಕ್ತರ ಚಿತ್ರವಿರುವ ಪಟಾಕಿಗಳನ್ನು ಹಚ್ಚಿದರೆ ಅವರನ್ನು ಅವಮಾನಿಸಿದಂತೆ ಆಗುವುದಿಲ್ಲವೇ? ಈ ದೀಪಾವಳಿಯಂದು ನಾವು ಇಂತಹ ಪಟಾಕಿಗಳನ್ನು ಖರೀದಿಸುವುದು ಬೇಡ. ಇಂತಹ ಪಟಾಕಿ ಖರೀದಿಸುವವರನ್ನು ವಿರೋಧಿಸುವುದು ಹಾಗೂ ಅವರಿಗೆ ತಿಳಿಸಿ ಹೇಳುವುದೇ ದೇವರ ಬಗೆಗಿನ ನಿಜವಾದ ಭಕ್ತಿಯಾಗಿದೆ. ಹೀಗೆ ಮಾಡುವುದರಿಂದ ನಿಮ್ಮ ಮೇಲೆ ದೇವರ ಕೃಪೆಯಾಗುತ್ತದೆ. ಮಕ್ಕಳೇ, ನಾವು ನಮ್ಮ ತಂದೆ ತಾಯಿಯ ಚಿತ್ರವಿರುವ ಪಟಾಕಿಗಳನ್ನು ಹಚ್ಚುತ್ತೇವೆಯೇ? ಇಲ್ಲವಲ್ಲ, ದೇವರು ನಮ್ಮೆಲ್ಲರ ರಕ್ಷಣೆ ಮಾಡುತ್ತಾರೆ; ನಮಗೆ ಶಕ್ತಿ ಹಾಗೂ ಬುದ್ಧಿ ನೀಡುತ್ತಾರೆ; ಆದುದರಿಂದ ಈ ದೀಪಾವಳಿಯಲ್ಲಿ ನಾವು ಈ ವಿಡಂಬನೆಯನ್ನು ನಿಲ್ಲಿಸಲು ನಿಶ್ಚಯಿಸೋಣ.

ದೀಪಾವಳಿಯಲ್ಲಿ ಪಾಟಾಕಿ ಹಚ್ಚುವುದಕ್ಕೆ ಯಾವುದೇ ಶಾಸ್ತ್ರಾಧಾರವಿಲ್ಲ

ದೀಪಾವಳಿಯಲ್ಲಿ ಪಟಾಕಿಗಳನ್ನು ಹಚ್ಚುವುದರ ಹಿಂದೆ ಯಾವುದೇ ಶಾಸ್ತ್ರಾಧಾರವಿಲ್ಲ. ಇದೊಂದು ತಪ್ಪು ರೂಢಿಯಾಗಿದೆ. ಈ ಕುಪ್ರವೃತ್ತಿಯನ್ನು ನಿಲ್ಲಿಸಬೇಕಿದೆ.

ಈ ಬಗ್ಗೆ ನಾವು ಚಿಂತನೆ ಮಾಡೋಣ. ಪಟಾಕಿಗಳನ್ನು ಹಚ್ಚುವುದರಿಂದ ಇತರರಿಗೆ ಆನಂದ ಸಿಗುತ್ತದೆಯೇ? ಇಲ್ಲವಲ್ಲ. ಅಂದರೆ ಇಂತಹ ರೂಢಿಗಳನ್ನು ಏಕೆ ಅನುಕರಿಸಬೇಕು? ಬದಲಾಗಿ ಇಂತಹ ರೂಢಿಗಳಿಂದ ಜನರಿಗೆತಮ್ಮ ಹಬ್ಬಗಳು ಬೇಡವೆಂಬಂತೆ ಆಗಿವೆ. ಇದರಿಂದ ಹಬ್ಬಗಳ ಬಗೆಗಿನ ತಪ್ಪು ತಿಳುವಳಿಕೆಯು ಬೆಳೆಯುತ್ತಿದೆ. ಅದನ್ನು ದೂರಗೊಳಿಸುವುದೇ ನಿಜವಾದ ದೀಪಾವಳಿಯಾಗಿದೆ. ಇದಕ್ಕಾಗಿ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಅವಶ್ಯಕತೆ ಇದೆ!

ಪಟಾಕಿಗಳನ್ನು ಹಚ್ಚುವುದರಿಂದ ಆಗುವ ಘಾತಕ ಪರಿಣಾಮಗಳು


ಅ. ಶಾರೀರಿಕ ತೊಂದರೆಯಾಗುವುದು : ಪಟಾಕಿಗಳಿಂದ ಅನೇಕ ಜನರಿಗೆ ಶಾರೀರಿಕ ತೊಂದರೆಗಳಾಗುತ್ತವೆ. ಕಣ್ಣಿಗೆ ತಾಗುವುದು ಅಥವಾ ಸುಟ್ಟು ಗಾಯಗಳಾಗುವುದು ಇಂತಹ ಅನೇಕ ಘಟನೆಗಳು ನಡೆಯುತ್ತವೆ. ಇದರಿಂದ ಇತರರಿಗೆ ದು:ಖವೇ ಆಗುತ್ತದೆ. ಇತರರಿಗೆ ದುಃಖ ನೀಡಿ ನಾವು ದೀಪಾವಳಿಯನ್ನು ಆಚರಿಸಬೇಕೆ ? ಇದು ಪಾಪವಾಗಿದೆ.

ಆ. ಚಿಕ್ಕ ಮಕ್ಕಳು ಹಾಗೂ ವೃದ್ಧರಿಗೆ ತೊಂದರೆಯಾಗುವುದು : ಪಟಾಕಿಗಳನ್ನು ಹಚ್ಚುವುದರಿಂದ ಆಗುವ ಕರ್ಕಶ ಶಬ್ದದಿಂದ ಚಿಕ್ಕ ಮಕ್ಕಳಿಗೆ ಭಯವಾಗುತ್ತದೆ. ಅವರ ಮನಸ್ಸಿನ ಮೇಲೆ ಘಾತಕ ಪರಿಣಾಮವಾಗುತ್ತದೆ. ವೃದ್ಧರಿಗೂ ಈ ಧ್ವನಿಯಿಂದ ತೊಂದರೆಯಾಗುತ್ತದೆ. ಹೀಗೆ ಇತರರಿಗೆ ತೊಂದರೆ ನೀಡಿ ದೀಪಾವಳಿಯನ್ನು ಆಚರಿಸಬೇಕೇ? ಪ್ರತಿಯೊಬ್ಬರಲ್ಲಿಯೂ ದೇವರಿದ್ದಾರೆ. ಹೀಗೆ ವರ್ತಿಸುವುದರಿಂದ ನಾವು ಪ್ರತಿಯೊಬ್ಬರಲ್ಲಿರುವ ಈಶ್ವರೀ ತತ್ತ್ವಕ್ಕೆ ದುಃಖ ನೀಡುತ್ತಿದ್ದೇವೆ. ಆಗ ಈ ವಿಚಾರ ಮಾಡಿ ಇದನ್ನು ನಿಲ್ಲಿಸಿ ನಾವು ದೀಪಾವಳಿಯನ್ನು ಆಚರಿಸೋಣ.

ಇ. ಪಟಾಕಿಗಳ ಹೊಗೆಯಿಂದ ಉಸಿರಾಟದ ತೊಂದರೆಯಾಗುವುದು : ಪಟಾಕಿಗಳ ಹೊಗೆಯಿಂದ ಉಸಿರಾಟದ ತೊಂದರೆಯಾಗುತ್ತದೆ. ಅಂತೆಯೆ ಯಾರಿಗೆ ಉಸಿರಾಟದ ತೊಂದರೆಯಿದೆಯೋ ಅವರ ತೊಂದರೆಯು ಹೆಚ್ಚಾಗುತ್ತದೆ. ಆದುದರಿಂದ ಇಂತಹ ಜನರು ಈ ಸಮಯದಲ್ಲಿ ಇಂತಹ ಸ್ಥಳದಿಂದ ಬೇರೆಕಡೆ ಇರಲು ಹೋಗುತ್ತಾರೆ. ಆದುದರಿಂದ ಅವರಿಗೆ ತೊಂದರೆಯಾಬಾರದೆಂದು ನಾವು ಇವೆಲ್ಲವನ್ನು ನಿಲ್ಲಿಸಬೇಕು.

ಈ. ಪರಿಸರದ ಮೇಲಾಗುವ ದುಷ್ಪರಿಣಾಮ ! : ಶಾಲೆಯಲ್ಲಿನಾವು 'ಪರಿಸರ' ವಿಷಯದ ಅಧ್ಯಯನ ಮಾಡುತ್ತೇವೆ. ಪ್ರತಿಯೊಬ್ಬರೂ ಪರಿಸರದ ರಕ್ಷಣೆಯನ್ನು ಮಾಡಬೇಕು ಎಂಬುದು ನಮಗೆ ತಿಳಿದಿದೆ. ದೀಪಾವಳಿಯ ಸಮಯದಲ್ಲಿ ಆಮ್ಲಜನಕದ ಪ್ರಮಾಣವು ಕಡಿಮೆಯಾಗಿ ಕಾರ್ಬನ್ ಡೈ ಆಕ್ಸೈಡ್ ನ ಪ್ರಮಾಣವು ಹೆಚ್ಚುತ್ತದೆ. ಆದುದರಿಂದ ಜನರಿಗೆ ಶುದ್ಧ ಗಾಳಿ ಸಿಗುವುದಿಲ್ಲ ಹಾಗೂ ಪರಿಸರ ಮಾಲಿನ್ಯವಾಗುತ್ತದೆ. ಅಂದರೆ ನಾವು ‘ಪರಿಸರ‘ ಈ ವಿಷಯದ ಅಧ್ಯಯನವನ್ನು ಕೇವಲ ಅಂಕಗಳನ್ನು ಪಡೆಯಲು ಕಲಿಯುವುದೇ ?

ಉ. ಹಣದ ಅಪವ್ಯಯ : ಇಂದು ನಮ್ಮ ದೇಶದ ಜನತೆಯು ಭ್ರಷ್ಟಾಚಾರ, ಬಡತನ ಇಂತಹ ಅನೇಕ ವಿಷಯಗಳಿಂದ ತತ್ತರಿಸುತ್ತಿದೆ. ಇಂತಹ ಸಂದರ್ಭದಲ್ಲಿ ನಾವು ನಮ್ಮ ಹಣವನ್ನು ಅಯೋಗ್ಯ ವಿಷಯಗಳಿಗಾಗಿ ಖರ್ಚುಮಾಡುವುದೇ? ಪಾಟಾಕಿಗಳನ್ನು ಹಚ್ಚುವುದೆಂದರೆ ನಮ್ಮದೇ ಹಣವನ್ನು ಸುಡುವುದಾಗಿದೆ. ಈ ಹಣವನ್ನು ನಾವು ನಮ್ಮ ಶಿಕ್ಷಣಕ್ಕಾಗಿ ಉಪಯೋಗಿಸಬಹುದು. ಆದುದರಿಂದ ಮಿತ್ರರೇ, ಈ ದೀಪಾವಳಿಯಿಂದ ‘ಪಟಾಕಿಗಳನ್ನು ಖರೀದಿಸಿ ರಾಷ್ಟ್ರದ ಸಂಪತ್ತಿನ ಹಾನಿಮಾಡುವುದಿಲ್ಲ‘ ಎಂದು ನಿಶ್ಚಯಿಸೋಣ.

ಊ. ಪಟಾಕಿಗಳ ಹೊಗೆಯಿಂದ ವಾತಾವರಣದ ಸಾತ್ತ್ವಿಕತೆಯು ನಷ್ಟವಾಗಿ ರಜತಮದ ಪ್ರಮಾಣವು ಹೆಚ್ಚುತ್ತದೆ : ಪಟಾಕಿಗಳ ಹೊಗೆಯಿಂದ ವಾತಾವರಣದ ಸಾತ್ತ್ವಿಕತೆಯು ನಷ್ಟವಾಗಿ ರಜ ತಮದ ಪ್ರಮಾಣವು ಹೆಚ್ಚುತ್ತದೆ. ನಾವು ಹಬ್ಬಗಳ ಮಾಧ್ಯಮದಿಂದ ಸತ್ತ್ವಗುಣವನ್ನು ಹೆಚ್ಚಿಸಲು ಪ್ರಯತ್ನಿಸಬೇಕು; ಆದರೆ ನಾವು ಪಟಾಕಿಗಳ ಮಾಧ್ಯಮದಿಂದ ದೈವೀ ಶಕ್ತಿಯನ್ನು ಕರೆಯದೇ ರಜ-ತಮಗಳನ್ನು ಕರೆಯುತ್ತೇವೆ. ಇದರಿಂದ ಸಮಾಜ ಜೀವನದಲ್ಲಿನ ಆನಂದವು ಇಲ್ಲವಾಗುತ್ತದೆ. ಸಮಾಜದಲ್ಲಿನ ಎಲ್ಲ ಸಮಸ್ಯೆಗಳ ಮೂಲಕಾರಣವು ರಜ ತಮದ ಪ್ರಾಬಲ್ಯವೇ ಆಗಿದೆ. ಆದುದರಿಂದ ನಾವು ಇದನ್ನು ನಿಲ್ಲಿಸೋಣ.

ಆದುದರಿಂದ ಮಿತ್ರರೇ, ಈ ದೀಪಾವಳಿಯಂದು ‘ಪಟಾಕಿಗಳನ್ನು ಹಚ್ಚುವುದಿಲ್ಲ‘, ಎಂಬ ನಿರ್ಧಾರ ಮಾಡೋಣ

ಶಾಸ್ತ್ರಾನುಸಾರ ರಂಗೋಲಿಗಳನ್ನು ಬಿಡಿಸಿರಿ !

ದೀಪಾವಳಿಯಸಮಯದಲ್ಲಿಮನೆಯ ಮುಂದೆ ನಾವುರಂಗೋಲಿ ಬಿಡಿಸುತ್ತೇವೆ. ನಮ್ಮ ಶಾಸ್ತ್ರದ ಬಗ್ಗೆ ತಿಳಿದಿಲ್ಲದಿರುವುದರಿಂದ ಆಧುನಿಕ ರೂಢಿ ಹಾಗೂ ಬದಲಾವಣೆಯೆಂದು ಹೆಣ್ಣು ಮಕ್ಕಳು ಚಿತ್ರವಿಚಿತ್ರ ರಂಗೋಲಿಗಳನ್ನು ಬಿಡಿಸುತ್ತಾರೆ. ಹೆಣ್ಣು ಮಕ್ಕಳೇ, ನಾವು ಈ ದೀಪಾವಳಿಯಂದು ಶಾಸ್ತ್ರಬದ್ಧವಾಗಿ ರಂಗೋಲಿ ಬಿಡಿಸುವೆವು ಎಂದು ನಿರ್ಧರಿಸೋಣ.

ದೀಪಾವಳಿಯಂದು ಮಣ್ಣಿನ ಹಣತೆಯನ್ನು ಹಚ್ಚಿ!

ದೀಪಾವಳಿಯಲ್ಲಿ ವಿದ್ಯುತ್ ದೀಪ ಅಥವಾ ಮೇಣದ ಬತ್ತಿಯನ್ನು ಉಪಯೋಗಿಸುವುದಕ್ಕಿಂತ ಎಣ್ಣೆಯ ದೀಪವನ್ನು ಉಪಯೋಗಿಸೋಣ ! : ದೀಪಾವಳಿಯ ವಾತಾವರಣದಲ್ಲಿ ಬಹು ದೊಡ್ಡ ಪ್ರಮಾಣದಲ್ಲಿ ದೇವರ ಚೈತನ್ಯವಿರುತ್ತದೆ. ಎಣ್ಣೆಯ ದೀಪದ ಮಾಧ್ಯಮದಿಂದ ಅದು ನಮ್ಮ ಮನೆಗೆ ಬರುವುದರಿಂದ ಮನೆಯ ವಾತಾವರಣವು ಆನಂದದಿಂದ ತುಂಬಿರುತ್ತದೆ. ಎಣ್ಣೆಯ ದೀಪವು ರಜ ತಮದ ನಾಶ ಮಾಡುತ್ತದೆ ಹಾಗೂ ಸತ್ತ್ವ ಗುಣವನ್ನು ವೃದ್ಧಿಸುತ್ತದೆ, ಆದರೆ ವಿದ್ಯುತ್ ದೀಪ ಅಥವಾ ಮೇಣದ ಬತ್ತಿಯನ್ನು ಉಪಯೋಗಿಸುವುದರಿಂದ ವಾತಾವರಣದಲ್ಲಿ ರಜತಮದ ವೃದ್ಧಿಯಾಗುತ್ತದೆ. ಇದರಿಂದ ನಾವು ಕೆಟ್ಟ ಶಕ್ತಿಗಳನ್ನು ಆಕರ್ಷಿಸುತ್ತೇವೆ. ಹೀಗೆ ಆಗಬಾರದು, ಆದುದರಿಂದ ಮಕ್ಕಳೇ ವಿದ್ಯುತ್ ದೀಪದ ಬದಲು ಎಣ್ಣೆಯ ದೀಪವನ್ನು ಹಚ್ಚಿರಿ !

ಭಾರತಿಯ ಸಂಸ್ಕೃತಿ ಪಾಲಿಸಿ, ಆದರ್ಶ ಸಹೋದರರಾಗಿ!

ಮಕ್ಕಳೇ, ಸಹೋದರ ಬಿದಿಗೆಯಂದು ಸಹೋದರಿಗೆ ಹಿಂದೂ ಸಂಸ್ಕೃತಿಯಂತೆ ವಸ್ತ್ರಾಲಂಕಾರವನ್ನು ಉಡುಗೊರೆನೀಡಿ :ಸಹೋದರಬಿದಿಗೆಯಂದು ಸಹೋದರಿಯು ತನ್ನ ಸಹೋದರನಿಗೆ ಆರತಿ ಮಾಡುತ್ತಾಳೆ. ಆಗ ಸಹೋದರನು ಸಹೋದರಿಗೆ ವಸ್ತ್ರಾಲಂಕಾರ ನೀಡುವಾಗ ಜೀನ್ಸ ಪ್ಯಾಂಟ ಹಾಗೂ ಟೀ ಶರ್ಟ ನಂತಹ ಪಾಶ್ಚಾತ್ಯರಪೋಷಾಕುಗಳನ್ನು ನೀಡುತ್ತಾನೆ. ಇಂತಹ ಉಡುಗೊರೆಯನ್ನು ನೀಡುವುದೆಂದರೆ ತಮ್ಮ ಸಹೋದರಿಯನ್ನು ಹಿಂದೂ ಸಂಸ್ಕೃತಿಯಿಂದ ದೂರ ಮಾಡಿದಂತಾಗಿದೆ. ಆದುದರಿಂದ ನಾವು ನಮ್ಮ ಸಹೋದರಿಗೆ ಲಂಗ ದಾವಣಿ, ಪಂಜಾಬಿ ಪೋಷಾಕು, ಸೀರೆ ಹೀಗೆ ಸಾತ್ತ್ವಿಕ ಪೊಷಾಕುಗಳನ್ನು ಉಡುಗೊರೆನೀಡಿ ಹಿಂದೂ ಸಂಸ್ಕೃತಿಯನ್ನು ರಕ್ಷಿಸೋಣ !

ವಿದ್ಯಾರ್ಥಿ ಮಿತ್ರರೇ, ನಮಗೆ ಈಗ ಪ್ರತಿಯೊಂದು ಹಬ್ಬದ ಹಿಂದಿನ ಶಾಸ್ತ್ರವನ್ನು ತಿಳಿದುಕೊಂಡು, ಪ್ರತಿಯೊಂದು ಹಬ್ಬವನ್ನು ಶಾಸ್ತ್ರಬದ್ಧವಾಗಿ ಆಚರಿಸಿ, ನಮ್ಮ ಧರ್ಮ ಹಾಗೂ ಸಂಸ್ಕೃತಿಯ ರಕ್ಷಣೆಗಾಗಿ ಸಿದ್ಧರಾಗಬೇಕಾಗಿದೆ !

– ಶ್ರೀ. ರಾಜೇಂದ್ರ ಪಾವಸಕರ, ಪನವೇಲ.