ರಜಾದಿನದ ಸಮಯವನ್ನು ಹೇಗೆ ಸದುಪಯೋಗ ಪಡಿಸಿಕೊಳ್ಳುವಿರಿ?

ಮಕ್ಕಳೇ ನಿಮ್ಮ ಪರೀಕ್ಷೆಗಳೆಲ್ಲವು ಮುಗಿದು, ರಜೆಯು ಪ್ರಾರಂಭವಾಗಿರಬೇಕಲ್ಲವೇ? ನಿಮ್ಮ ಬೆಳವಣಿಗೆಗೆ (ಆಭಿವೃದ್ದಿಗೆ) ಇದು ಒಂದು ಒಳ್ಳೆಯ ಅವಕಾಶ. ನೀವು ಈ ಸಮಯದಲ್ಲಿ ಕಲೆ, ಆಟ, ಪಾಠ, ನೀತಿಗಳನ್ನು ಕಲಿತು, ನಿಮ್ಮಲ್ಲಿ ಹೊಸ ಹೊಸ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ದೇವರು ಕೊಟ್ಟ ಒಂದು ಒಳ್ಳೆಯ ಅವಕಾಶ. ಯಾವುದೇ ವಿಷಯದಲ್ಲಿ ನಿಮಗೆ ಕೊರತೆ ಕಂಡುಬರುತ್ತಿದ್ದಲ್ಲಿ ಅದನ್ನು ಸರಿಪಡಿಸಿ ಉತ್ತಮ ಗುಣಗಳನ್ನು ಅಳವಡಿಸಿಕೊಳ್ಳಲು ಈ ಸಮಯದ ಸದುಪಯೋಗ ಮಾಡಿ.

ನಿಜವಾದ ವಿದ್ಯಾರ್ಥಿ ಯಾರು? ಸತತವಾಗಿ ಕಲಿಯಲು ಹಂಬಲಿಸುತ್ತಿರುವವನೇ ನಿಜವಾದ ವಿದ್ಯಾರ್ಥಿ ಎನಿಸಿಕೊಳ್ಳುತ್ತಾನೆ. ನಾವು ರಜೆಯಲ್ಲಿ ನಮ್ಮ ಸಂಬಂಧಿಕರ ಮನೆಗೆ ಹೋದಾಗ ಅವರಲ್ಲಿ ಏನೆಲ್ಲ ಕಲಿಯಲು ಸಿಗುತ್ತದೆ ಎಂದು ನೋಡಬೇಕು. ಉದಾರಣೆಗೆ : ಅವರ ಮನೆಯಲ್ಲಿ ಗಣಕಯಂತ್ರವಿದ್ದರೆ (ಕಂಪ್ಯೂಟರ್) ಅವರನ್ನು ಕೇಳಿ ಗಣಕಯಂತ್ರವನ್ನು ಉಪಯೋಗಿಸಲು ಕಲಿಯುವುದು, ಒಳ್ಳೆಯ ಸಂಸ್ಕಾರಗಳನ್ನು ಕಲಿಸುವ ಸಂಕೇತಸ್ಥಳಗಳ ಮಾಹಿತಿಯನ್ನು ಸಂಗ್ರಹಿಸುವುದು ಇತ್ಯಾದಿ. 'ನನ್ನ ರಜೆಯು ಆನಂದದಾಯಕವಾಗಬೇಕು' ಎಂದು ಅನಿಸುತ್ತದೆ ಅಲ್ಲವೇ? ಇದಕ್ಕೆ ನಮ್ಮಲ್ಲಿ ಕಲಿಯುವ ಪ್ರವೃತಿಯನ್ನು ಬೆಳೆಸಿಕೊಳ್ಳಬೇಕು, ಆಗಲೇ ನಾವು ನಮ್ಮ ರಜಾದಿನಗಳನ್ನು ಫಲಕಾರಿಯಾಗಿ ಪರಿವರ್ತಿಸಬಹುದು. ಬನ್ನಿ, ಈ ರಜಾ ದಿನಗಳನ್ನು ಏನಾದರು ಹೊಸತನ್ನು ಕಲಿಯುವುದರ ಮೂಲಕ ಕಳೆಯೋಣ.

೧. ಸುದೃಢ ಶರೀರಕ್ಕಾಗಿ ಇವನ್ನು ಮಾಡಿರಿ

ಅ. ಹೊರಾಂಗಣ ಆಟಗಳನ್ನು ಆಡುವುದು : ಉದಾ. ಖೊಖೋ, ಕಬಡ್ಡಿ ಆಡುವುದರಿಂದ ನಮ್ಮ ಶರೀರವು ಸುದೃಢ ಮತ್ತು ಆರೋಗ್ಯವಾಗಿರುತ್ತದೆ.
ಆ. ಒಳ್ಳೆಯ ಗುಣಗಳನ್ನು ಅಳವಡಿಸಿಕೊಳ್ಳುವುದು : ಒಗ್ಗಟ್ಟು, ನೇತೃತ್ವಗುಣವನ್ನು ವೃದ್ಧಿಸುವುದು, ಇತರರ ಬಗ್ಗೆ ಯೋಚಿಸುವುದು, ತತ್ಪರತೆ ಇತ್ಯಾದಿ.
ಇ. ಪ್ರತಿದಿವಸ ಸೂರ್ಯನಮಸ್ಕಾರವನ್ನು ಮಾಡಿ : ಶರೀರವನ್ನು ಸುದೃಢಗೊಳಿಸುತ್ತದೆ ಮತ್ತು ಶಕ್ತಿಯನ್ನು ವೃದ್ಧಿಸುತ್ತದೆ.
ಈ. ಗಣಕಯಂತ್ರದ ಆಟವನ್ನು ಆಡಬೇಡಿ : ಇದರಿಂದ ನಮ್ಮ ಶರೀರ ಮತ್ತು ಮನಸ್ಸಿನ ಬೆಳವಣೆಗೆ ಕುಂಠಿತವಾಗುತ್ತದೆ. ಅನೇಕ ಮಕ್ಕಳಿಗೆ ಹೊರಾಂಗಣ ಆಟಕ್ಕಿಂತ ಗಣಕ ಯಂತ್ರದ ವಿಕೃತ ಆಟಗಳೇ ಹೆಚ್ಚು ಇಷ್ಟವಾಗುತ್ತವೆ. ಈ ರೀತಿಯ ಆಟಗಳಿಂದ ಮನಸ್ಸು ಸಂಕುಚಿತವಾಗುತ್ತದೆ, ಅಪಾರ ಹಾನಿಯಾಗುತ್ತದೆ. ಆಟವನ್ನು ಕುಳಿತೇ ಆಡುವುದರಿಂದ ಶರೀರವು ಜಡವಾಗುತ್ತದೆ.

೨. ಮನಸ್ಸಿನ ಬೆಳೆವಣಿಗೆಗೆ ಮಾಡಬೇಕಾದ ಕೃತಿಗಳು

ಮಿತ್ರರೇ, ನಾವೇನು ಓದುತ್ತೆವೆಯೋ, ಅಂತಹ ವಿಚಾರಗಳೇ ನಮ್ಮ ಮನಸ್ಸಿನಲ್ಲಿ ಇರುತ್ತವೆ ಮತ್ತು ನಮ್ಮ ವಿಚಾರಗಳು ಹೇಗಿವೆಯೋ ಅಂತಹ ಕೃತಿಗಳನ್ನೇ ನಾವು ಮಾಡುತ್ತೇವೆ. ಅದುದರಿಂದ ನಮ್ಮ ಮನಸ್ಸಿನ ವಿಚಾರಗಳನ್ನು ನಿರ್ಮಲವಾಗಿಡಲು, ಒಳ್ಳೆಯದ್ದನ್ನೇ ಓದಬೇಕು. ಉದಾ. ಒಳ್ಳೆಯ ಗ್ರಂಥಗಳು ಅಥವಾ ಸತ್ಪುರುಷರ ಆತ್ಮ ಚರಿತ್ರೆಗಳನ್ನು ಓದುವುದು.

ಅ. ನಮ್ಮ ದೇಶ, ಧರ್ಮದ ಬಗ್ಗೆ ಗ್ರಂಥಗಳನ್ನು ಓದುವುದು
ಅ೧. ದೇವ ದೇವತೆಗಳ ಮತ್ತು ಸಂತರ ಕಥೆಗಳು : ಸಂತರಾದ ಜ್ಜಾನೇಶ್ವರ ಮಹಾರಾಜರ, ಸಂತ ತುಕಾರಾಮರ, ಸಂತ ಅಕ್ಕಮಹಾದೇವಿ, ದಾಸರು, ಶ್ರಿರಾಮ, ಶ್ರೀಕೃಷ್ಣ, ಶ್ರೀ ಗಣಪತಿ, ಶ್ರೀ ದುರ್ಗಾದೇವಿ, ಸರಸ್ವತೀದೇವಿಯ ಕಥೆಗಳನ್ನು ಓದಿ.

ಅ೨. ಶೂರ ರಾಜರ ಕಥೆಗಳು : ಛತ್ರಪತಿ ಶಿವಾಜಿ ಮಹಾರಾಜರ, ಹರಿಹರ ಬುಕ್ಕರಾಯ ಮುಂತಾದ ಪರಾಕ್ರಮಿ ರಾಜರ ಕಥೆಗಳನ್ನು ಓದುವುದು.

ಅ೩. ಸ್ವಾತಂತ್ರ್ಯ ಹೋರಾಟಗಾರರ : ಭಗತಸಿಂಗ, ರಾಜಗುರು, ಸುಖದೇವ, ವೀರಸಾವರಕರ , ಝಾನ್ಸಿರಾಣಿಯ ಕಥೆಗಳನ್ನು ಓದಿ.

ಆ. ಕಾಲ್ಪನಿಕ ಕಥೆಗಳನ್ನು ಓದಬೇಡಿ
ಅನೇಕ ಮಕ್ಕಳು ಸಮಯವನ್ನು ಕಳೆಯಲು ಕಾಲ್ಪನಿಕ ಕಥೆಗಳನ್ನು ಓದುತ್ತಾರೆ. ಕಾಲ್ಪನಿಕ ಕಥೆಗಳು ಸತ್ಯಕ್ಕೆ ದೂರವಾಗುತ್ತವೆ. ಇಂತಹ ಕಥೆಗಳನ್ನು ಓದುವುದರಿಂದ ನಮಗೇನು ಲಾಭವಾಗುತ್ತದೆ? ಜೀವನದಲ್ಲಿ ಆದರ್ಶವಾಗಿ ಇಟ್ಟುಕೊಳ್ಳುವಂತಹ ಯೋಧರ, ವೀರ ಪುರುಷರ ಮತ್ತು ರಾಜರ ಚರಿತ್ರೆಗಳನ್ನು ಓದಬೇಕು.
ಸಂತರ ಜೀವನ ಚರಿತ್ರೆ, ವೀರರಾಜರ, ಸ್ವಾತಂತ್ರ್ಯ ಹೋರಾಟಗಾರರ ಕಥೆಗಳನ್ನು ಓದುವುದರಿಂದ ನಾವು ನಮ್ಮ ರಜೆಯ ದಿನಗಳನ್ನು ಸಾರ್ಥಕವಾಗಿಸುವಂತಹ ಗುಣಗಳನ್ನು ನಮ್ಮಲ್ಲಿ ಬೆಳೆಸಿಕೊಳ್ಳಲು ಸಹಾಯವಾಗುತ್ತದೆ.
www.Balsanskar.com ಈ ಸಂಕೇತಸ್ಥಳದಲ್ಲಿ ಇಂತಹ ಅನೇಕ ಕಥೆಗಳನ್ನು ನೀಡಲಾಗಿದೆ.

ಇ. ಧ್ವನಿಚಿತ್ರಸುರುಳಿಗಳನ್ನು (ವೀಡಿಯೊ ಸಿ.ಡಿ.) ಮತ್ತು ಆದರ್ಶ ಧಾರಾವಾಹಿಗಳನ್ನು ನೋಡುವುದು
೧. 'ಶ್ರೀಕೃಷ್ಣ' ಮತ್ತು 'ರಾಮಾಯಣ' ಧಾರಾವಾಹಿಗಳನ್ನು ದೂರದರ್ಶನದಲ್ಲಿ ನೋಡುವುದು.
೨. ಸಂತರ ಬಗ್ಗೆ ಅಥವಾ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಚಿತ್ರಗಳನ್ನು ನೋಡುವುದು.
೩. ವ್ಯಂಗ್ಯ ಚಿತ್ರಗಳು, ಹತ್ಯೆ, ಹೊಡೆದಾಟ ತುಂಬಿರುವ ಚಿತ್ರಗಳನ್ನು ವೀಕ್ಷಿಸಬೇಡಿ.

ಈ. ಚಿತ್ರ ಬಿಡಿಸುವುದು
ಮಿತ್ರರೇ, ನಿಮ್ಮಲ್ಲಿ ಅನೇಕರಿಗೆ ಚಿತ್ರಕಲೆಯಲ್ಲಿ ಆಸಕ್ತಿಯಿದೆಯಲ್ಲವೇ? ಸಂತರನ್ನು ಅಥವಾ ದೇವತೆಗಳನ್ನು 'ಕಾರ್ಟೂನ್' ರೂಪದಲ್ಲಿ ಚಿತ್ರಿಸಬೇಡಿ. ರಜಾದಿನಗಳಲ್ಲಿ ನಿಮ್ಮ ಮನಸ್ಸಿಗೆ ಬಂದ ಚಿತ್ರಗಳನ್ನು ಬಿಡಿಸದೇ ಮುಂದೆ ನೀಡಿದ ಚಿತ್ರಗಳನ್ನು ಬಿಡಿಸಲು ಕಲಿಯಿರಿ.
೧. ದೇವತೆಗಳ ಚಿತ್ರಗಳು : ಶ್ರೀ ಗಣಪತಿ, ಶ್ರೀರಾಮ, ಶ್ರೀಕೃಷ್ಣ, ದತ್ತಗುರು, ಶಿವ, ಶ್ರೀದುರ್ಗಾದೇವಿ ಮತ್ತು ಲಕ್ಷ್ಮೀಯ ಚಿತ್ರವನ್ನು ಬಿಡಿಸಿ.
೨. ಭಕ್ತಿ ಭಾವವನ್ನು ಹೆಚ್ಚಿಸುವ ಚಿತ್ರಗಳು : ಸಂತ ತುಕಾರಾಮ, ಸಂತ ಜ್ಜಾನೇಶ್ವರ ಮಹಾರಾಜರ, ಸಂತ ಮೀರಾಬಾಯಿ, ಸಂತ ಭಕ್ತಕುಂಬಾರ, ಸಂತ ಕನಕದಾಸರ ಚಿತ್ರವನ್ನು ಬಿಡಿಸಿ.
೩. ರಾಷ್ಟ್ರ ಪ್ರೇಮವನ್ನು ಜಾಗೃತಗೊಳಿಸುವ ಚಿತ್ರಗಳು : ಭಗತಸಿಂಗ, ಝಾನ್ಸಿ ರಾಣಿ ಲಕ್ಷ್ಮೀ ಬಾಯಿ, ಶಿವಾಜಿ ಮಹಾರಾಜರ ಚಿತ್ರ ಬಿಡಿಸಿ
೪. ಹಬ್ಬ ಹರಿದಿನಗಳ ಚಿತ್ರ : ಗಣೇಶ ಚತುರ್ಥಿ, ದೀಪಾವಳಿ ಮತ್ತು ರಂಗಪಂಚಮಿಯ ಚಿತ್ರವನ್ನು ಬಿಡಿಸಿ.
– ಶ್ರೀ ರಾಜೇಂದ್ರ ಪಾವಸ್ಕರ (ಗುರುಜಿ) ಪನವೇಲ್.

ನಿಮ್ಮ ತಂದೆ ತಾಯಿಗೆ ಸಹಾಯ ಮಾಡಿ

ಶಾಲೆಯ ಸಮಯದಲ್ಲಿ ನಿಮ್ಮ ಪಠ್ಯಪುಸ್ತಕದಲ್ಲಿರುವ ವಿಷಯವನ್ನು ತಿಳಿಹೇಳಲು ತಂದೆಯು ನಮಗೆ ಸಹಾಯ ಮಾಡುತ್ತಾರೆ. ಹಾಗೇ ಸಮಯಕ್ಕೆ ಸರಿಯಾಗಿ ಊಟ ಉಪಹಾರವನ್ನು ಮಾಡಿಕೊಡುವ ತಾಯಿಗೆ ನಾವು ರಜೆಯಲ್ಲಿ ಯಾವ ರೀತಿ ಸಹಾಯ ಮಾಡಬಹುದು ಎಂದು ಯೋಚಿಸಿ.
ತಂದೆ ತಾಯಿಯ ಕೆಲಸದಲ್ಲಿ ಸಹಾಯ ಹೇಗೆ ಮಾಡುವುದು? ಉದಾ. ಕಸ ಗುಡಿಸುವುದು, ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದು ಮುಂತಾದ ರೀತಿಯಲ್ಲಿ ಸಹಾಯ ಮಾಡುವುದರಿಂದ ಅವರು ನಮಗೋಸ್ಕರ ನಿಸ್ವಾರ್ಥವಾಗಿ ತೋರಿಸುವ ಪ್ರೀತಿಗೆ ಕೃತಜ್ಞತೆಯನ್ನು ಅರ್ಪಿಸಿದ ಹಾಗೆ ಆಗುತ್ತದೆ.
– ಶ್ರೀಮತಿ ಸಾಯೀ ಆಮ್ರೇ, ಮುಂಬೈ.

Leave a Comment